ಕೋವಿಡ್ ಮಾರ್ಗಸೂಚಿ ಕಡ್ಡಾಯಗೊಳಿಸಿ ಮರು ಆದೇಶ -ಆರೋಗ್ಯ ಇಲಾಖೆ

ರಾಜ್ಯದಲ್ಲಿ ಕೊರೊನಾ ಪಾಸಿಟಿವ್
ಪ್ರಕರಣಗಳು ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಕೋವಿಡ್ ಮಾರ್ಗಸೂಚಿ ಪಾಲನೆ ಕಡ್ಡಾಯಗೊಳಿಸಿ ಸೋಮವಾರ ಮರು ಆದೇಶ ಜಾರಿಗೊಳಿಸಿದೆ.

ಸರಕಾರಿ, ಖಾಸಗಿ ಕಚೇರಿ, ವಸತಿ ಸಮುಚ್ಚಯ, ಹೊಟೇಲ್, ಕ್ಲಬ್, ರೆಸ್ಟೋರೆಂಟ್, ಪಬ್, ಬಾರ್, ಛತ್ರ, ಸಿನೆಮಾ ಹಾಲ್, ವಿದ್ಯಾ ಸಂಸ್ಥೆ (5 ವರ್ಷ ಮೇಲ್ಪಟ್ಟ ಮಕ್ಕಳಿಗೆ) ಸಾರ್ವಜನಿಕ ಸಾರಿಗೆ ವ್ಯವಸ್ಥೆಗಳಾದ ಬಸ್, ಆಟೋ, ಮೆಟ್ರೋ ಹಾಗೂ ಟ್ರೈನ್, ಶಾಪಿಂಗ್ ಮಾಲ್ ಹಾಗೂ ಇತರೆ ಪ್ರದೇಶದಲ್ಲಿ ಕೋವಿಡ್ ಮಾರ್ಗಸೂಚಿ ಪಾಲನೆ ಕಡ್ಡಾಯಗೊಳಿಸಿದೆ.

ಆ.31ರಂದು ಗಣೇಶೋತ್ಸವದ ಕಡ್ಡಾಯ ಮಾರ್ಗಸೂಚಿ
ಪಾಲಿಸಲು ಆದೇಶಿಸಿದೆ. ಕಾರ್ಯಕ್ರಮವನ್ನು ಹೊರಾಂಗಣ ಪ್ರದೇಶದಲ್ಲಿ ಆಚರಿಸುವುದು, ಪ್ರವೇಶ ದ್ವಾರದಲ್ಲಿ ಥರ್ಮಲ್ ಸ್ಕ್ಯಾನಿಂಗ್ ವ್ಯವಸ್ಥೆ, 1 ಮೀಟರ್ ಅಂತರದ ಪಾಲನೆ, ಸೂಚಿತ ಸ್ಥಳದಲ್ಲಿ ಹ್ಯಾಂಡ್ ಸ್ಯಾನಿಟೈಸರ್ ಲಭ್ಯತೆ, ಎಲ್ಲಾ ಅವಧಿಯಲ್ಲಿ ಮಾಸ್ಕ್ ಧಾರಣೆ, ಕೋವಿಡ್ ಲಸಿಕೆ ಪಡೆದಿರುವವರಿಗೆ ಭಾಗವಹಿಸಲು ಪ್ರೋತ್ಸಾಹ, ಲಕ್ಷಣ ಹೊಂದಿರುವವರನ್ನು ಪ್ರತ್ಯೇಕಿಸಿ ಚಿಕಿತ್ಸೆಗೆ ಪಡೆಯಲು ಶಿಫಾರಸು ಮಾಡಬೇಕಿದೆ.

ರಾಜ್ಯದಲ್ಲಿ ಸಾಲು ಸಾಲು ಹಬ್ಬಗಳು ನಡೆಯಲಿರುವುದರಿಂದ, ಈ ವೇಳೆ ಕೊರೊನಾ ಮಾರ್ಗ ಸೂಚಿ ಪಾಲನೆ ಕಡ್ಡಾಯಗೊಳಿಸಲಾಗಿದೆ.

Leave A Reply

Your email address will not be published.