ಬರೋಬ್ಬರಿ 8 ತಿಂಗಳವರೆಗೆ ಬೇಕಾಗುವಷ್ಟು ಆಹಾರವನ್ನು ಒಮ್ಮೆಲೇ ತಯಾರಿಸಿ ಇಡುತ್ತಾಳಂತೆ ಈ ಮಹಿಳೆ!
ತಿನ್ನೋಕೆ ಅದೆಷ್ಟೇ ತರದ ಐಟಂ ಇದ್ರೂನು ಸರಿ, ನಾವು ರೆಡಿ ಅನ್ನೋದ್ರಲ್ಲಿ ಡೌಟ್ ಇಲ್ಲ. ಆದ್ರೆ, ಅದೇ ಅಡುಗೆ ಮಾಡಿ ಅಂದಾಗ ಹಿಂದಕ್ಕೆ ಜಾರೋದು ಮಾಮೂಲ್. ಪ್ರತಿನಿತ್ಯ ಎದ್ದಾಗಿಂದ ಮಲಗೋವರೆಗೆ ಬೇಯಿಸಿ ಹಾಕಿ ಹಾಕಿ ಸುಸ್ತಾಗಿ ಹೋಗಿರುತ್ತಾರೆ ಮಹಿಳೆಯರು. ಆದ್ರೆ ವಿಧಿ ಇಲ್ಲ ನೋಡಿ. ತಿನ್ನಬೇಕಂದ್ರೆ ಮಾಡಲೇಬೇಕು ಅನ್ನೋ ಪರಿಸ್ಥಿತಿ.
ಆದ್ರೆ, ಇಲ್ಲೊಬ್ಬರು ಮಹಿಳೆ ದಿನಾಲೂ ಅಡುಗೆ ಮಾಡಿ ಸುಸ್ತಾಗಿ, ಹೇಗಾದ್ರು ಇದರಿಂದ ಸೇಫ್ ಆಗಬೇಕು ಅಂದುಕೊಂಡು ದೊಡ್ಡ ಪ್ಲಾನ್ ಯೇ ಮಾಡಿದ್ದಾಳೆ. ಹೌದು. ಒಂದಲ್ಲ ಎರಡಲ್ಲ, ಬರೋಬ್ಬರಿ ಎಂಟು ತಿಂಗಳಿಗೆ ಬೇಕಾಗುವಷ್ಟು ಆಹಾರವನ್ನು ತಯಾರಿಸಿದ್ದಾಳೆ.
ಅದೇಗೆ? ಅಷ್ಟು ದಿನ ಆಹಾರ ಇಟ್ರೆ ಕೆಡುತ್ತೆ ಅಲ್ವಾ ಅಂತ ನೀವು ಅನ್ಕೋಬೋದು. ಆದ್ರೆ ಈ ಮಹಿಳೆ ಅದಿಕ್ಕೂ ಪ್ಲಾನ್ ಮಾಡಿದ್ದಾರೆ. ಹೌದು. ಮಹಿಳೆಯೊಬ್ಬಳು ಯಾರೂ ನಿರೀಕ್ಷಿಸದಂಥ ಕೆಲಸ ಮಾಡಿದ್ದಾಳೆ.
ಅಮೆರಿಕದಲ್ಲಿ ನೆಲೆಸಿರುವ 30 ವರ್ಷದ ಮಹಿಳೆಯೊಬ್ಬಳು 8 ತಿಂಗಳಿಗೆ ಬೇಕಾಗುವಷ್ಟು ಊಟವನ್ನು ತನಗಾಗಿ ಮಾತ್ರವಲ್ಲ ಇಡೀ ಕುಟುಂಬಕ್ಕಾಗಿ ಒಮ್ಮೆಲೇ ತಯಾರಿಸಿದ್ದಾಳೆ. ಅಷ್ಟೇ ಅಲ್ಲದೆ, 8 ತಿಂಗಳಿಗೆ ಬೇಕಾಗುವಷ್ಟು ಊಟವನ್ನು ತಯಾರಿಸಿ ಅದನ್ನು ಸಂಗ್ರಹಿಸಿ ಇಟ್ಟಿದ್ದಾಳೆ. ಹಸಿವಾದಾಗ ಅದನ್ನು ತೆಗೆದುಕೊಂಡು ಬಿಸಿ ಮಾಡಿ ತಿನ್ನಬಹುದು.
ಆಹಾರವನ್ನು ದೀರ್ಘಕಾಲದವರೆಗೆ ಸುರಕ್ಷಿತವಾಗಿಡುವ ತಂತ್ರವನ್ನು ಅವಳು ತಿಳಿದುಕೊಂಡಿದ್ದಾಳಂತೆ. ಆಹಾರವನ್ನು ಸಂರಕ್ಷಿಸಲು ಮೂರು ತಿಂಗಳು ಬೇಕಾಗುತ್ತದೆ ಎನ್ನುತ್ತಾಳೆ ಈ ಮಹಿಳೆ.
ಮಹಿಳೆಯ ಕುಟುಂಬದ ಎಲ್ಲಾ ಸದಸ್ಯರು ಬೇಸಿಗೆಯಲ್ಲಿ ಮನೆಯಲ್ಲಿ ಬೆಳೆದ ತರಕಾರಿಗಳೊಂದಿಗೆ ಆಹಾರವನ್ನು ಬೇಯಿಸುತ್ತಾರೆ ಮತ್ತು ಈ ತಾಜಾ ತರಕಾರಿಗಳಿಂದ ಆಹಾರವನ್ನು ತಯಾರಿಸುವ ಮೂಲಕ ಚಳಿಗಾಲದಲ್ಲಿ ಅದನ್ನು ಸಂರಕ್ಷಿಸುತ್ತಾರೆ. ಇಡೀ ಕುಟುಂಬ ಸಂಪೂರ್ಣವಾಗಿ ಸಾವಯವ ಆಹಾರವನ್ನು ಅವಲಂಬಿಸಿದೆ.
ಆದ್ರೆ ಆ ಮಹಿಳೆಯ ಆಹಾರ ಸಂರಕ್ಷಣೆ ಹೇಗೆ ಎಂಬುದು ತಿಳಿಸಿಲ್ಲ. ತಿಳಿಸಿದ್ರೆ ನಮಗೂ ಚೂರು ಹೆಲ್ಪ್ ಆಗ್ತಿತ್ತೋ ಏನೋ. ಒಟ್ಟಾರೆ ಈ ಮಹಿಳೆಯ ಸೂಪರ್ ಯೋಜನೆ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.