ಪಿಯುಸಿ ಪಾಸ್ ಆದ ವಿದ್ಯಾರ್ಥಿನಿಯರ ಉನ್ನತ ವಿದ್ಯಾಭ್ಯಾಸಕ್ಕಾಗಿ ಸಿಗುತ್ತೆ 60 ಸಾವಿರದವರೆಗೆ ಸ್ಕಾಲರ್ಶಿಪ್
ವಿದ್ಯಾರ್ಥಿಗಳ ಮುಂದಿನ ಶಿಕ್ಷಣಕ್ಕೆ ಹಣ ಅತೀ ಮುಖ್ಯವಾಗಿದೆ. ಆದ್ರೆ, ಅದೆಷ್ಟೋ ವಿದ್ಯಾರ್ಥಿಗಳು ಆರ್ಥಿಕ ಸಮಸ್ಯೆಯಿಂದಾಗಿ ಶಿಕ್ಷಣವನ್ನು ಅರ್ಧಕ್ಕೆ ಕೈ ಬಿಡುವಂತಹ ಪರಿಸ್ಥಿತಿಯನ್ನು ಎದುರಿಸುತ್ತಾರೆ. ಇಂತಹ ಬಡ ಮಕ್ಕಳಿಗೆ ಸಹಾಯವಾಗುವ ನಿಟ್ಟಿನಲ್ಲಿ ಕೆಲವೊಂದು ಸಂಸ್ಥೆಗಳು ವಿದ್ಯಾರ್ಥಿವೇತನವನ್ನು ಘೋಷಿಸುತ್ತಾರೆ. ಅಂತಹ ಹಲವು ಸ್ಕಾಲರ್ಶಿಪ್ ಗಳ ಪಟ್ಟಿಯನ್ನು ಇಲ್ಲಿ ನೀಡಿದ್ದೇವೆ ನೋಡಿ.
ಮಹಿಳಾ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ರೋಲ್ಸ್ ರಾಯ್ ಉನ್ನತಿ ಸ್ಕಾಲರ್ಶಿಪ್ 2022:
ಈ ವಿದ್ಯಾರ್ಥಿವೇತನವನ್ನು ರೋಲ್ಸ್ ರಾಯ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ನೀಡುತ್ತದೆ. ಈ ವಿದ್ಯಾರ್ಥಿವೇತನವನ್ನು ತಮ್ಮ ಎಂಜಿನಿಯರಿಂಗ್ ವ್ಯಾಸಂಗವನ್ನು ಪೂರ್ಣಗೊಳಿಸಲು ಹುಡುಗಿಯರಿಗೆ ಮಾತ್ರ ನೀಡಲಾಗುತ್ತದೆ.
ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ಅರ್ಹತೆ:
*ಮೊದಲನೆಯದಾಗಿ, ಈ ಸ್ಕಾಲರ್ಶಿಪ್ ಭಾರತದ ಹುಡುಗಿಯರಿಗೆ ಮಾತ್ರ ಮತ್ತು ಅದೂ ಸಹ AICTE ಅನುಮೋದಿತ ಕಾಲೇಜಿನಲ್ಲಿ ಏರೋಸ್ಪೇಸ್ , ಮೆರೈನ್ , ಎಲೆಕ್ಟ್ರಾನಿಕ್ಸ್ , ಕಂಪ್ಯೂಟರ್ ಇತ್ಯಾದಿ ಕ್ಷೇತ್ರಗಳಲ್ಲಿ ಕಲಿಯುತ್ತಿರುವ ಹುಡುಗಿಯರಿಗೆ ಮಾತ್ರ.
*ಸ್ಕಾಲರ್ಶಿಪ್ ಪಡೆಯಲು 10ನೇ ಮತ್ತು 12ನೇ ತರಗತಿಯಲ್ಲಿ ಶೇಕಡಾ 60 ಅಂಕಗಳನ್ನು ಹೊಂದಿರುವುದು ಅವಶ್ಯಕ.
ವಿದ್ಯಾರ್ಥಿವೇತನದ ಪ್ರಯೋಜನಗಳು:
*ವಿದ್ಯಾರ್ಥಿವೇತನದಲ್ಲಿ ಆಯ್ಕೆಯಾದ ನಂತರ, 35,000 ರೂ.ವರೆಗೆ ಸಹಾಯವನ್ನು ನೀಡಲಾಗುತ್ತದೆ.
ಅರ್ಜಿ ದಿನಾಂಕ:
ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 31-08-2022 .
ಲೆಗ್ರ್ಯಾಂಡ್ ಸಬಲೀಕರಣ ಸ್ಕಾಲರ್ಶಿಪ್ ಕಾರ್ಯಕ್ರಮ 2022-23:
ಲೆಗ್ರಾಂಡ್ ಸ್ಕಾಲರ್ಶಿಪ್ನಲ್ಲಿ , ಬಿ.ಟೆಕ್ / ಬಿಇ / ಬಿ.ಆರ್ಕ್ ಪೂರ್ಣಗೊಳಿಸಿದವರು (ಹುಡುಗಿಯರು ಮಾತ್ರ) ಅರ್ಜಿ ಸಲ್ಲಿಸಬಹುದು. ಇತರ ಕೋರ್ಸ್ಗಳಲ್ಲಿ (BBA/B.Com/BSc- ಗಣಿತ ಮತ್ತು ವಿಜ್ಞಾನ) ವೃತ್ತಿಯನ್ನು ಮುಂದುವರಿಸಲ ಇಚ್ಛಿಸುವವರು. ಸರಳವಾಗಿ ಹೇಳುವುದಾದರೆ, ಎಂಜಿನಿಯರಿಂಗ್ , ವಾಸ್ತುಶಿಲ್ಪ ,ಹಣಕಾಸು ಮತ್ತು ವಿಜ್ಞಾನಗಳಲ್ಲಿ ವೃತ್ತಿಜೀವನವನ್ನು ಮುಂದುವರಿಸಲು ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಬೆಂಬಲ ನೀಡುವುದು ಈ ವಿದ್ಯಾರ್ಥಿವೇತನವಾಗಿದೆ .
ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ಅರ್ಹತೆ:
*ಮೊದಲನೆಯದಾಗಿ ಈ ವಿದ್ಯಾರ್ಥಿವೇತನವು ಹುಡುಗಿಯರಿಗೆ ಮಾತ್ರ.
*ಎರಡನೆಯದಾಗಿ , ಇಂಜಿನಿಯರಿಂಗ್ , ಆರ್ಕಿಟೆಕ್ಚರ್ , ಫೈನಾನ್ಸ್ ಮತ್ತು ಸೈನ್ಸ್ಗಳಲ್ಲಿ ಪದವಿ ಮಾಡಲು ಬಯಸುವ ವಿದ್ಯಾರ್ಥಿನಿಯರು ಮಾತ್ರ ಈ ವಿದ್ಯಾರ್ಥಿವೇತನದ ಲಾಭವನ್ನು ಪಡೆಯಬಹುದು .
*ಅರ್ಜಿ ಸಲ್ಲಿಸುವ ವಿದ್ಯಾರ್ಥಿಯು 2021-22 ರಲ್ಲಿ 12 ನೇ ತರಗತಿಯಲ್ಲಿ ಶೇಕಡಾ 70 ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು .
*ಕುಟುಂಬದ ವಾರ್ಷಿಕ ಆದಾಯವು 5,00,000 ಕ್ಕಿಂತ ಕಡಿಮೆಯಿರಬೇಕು.
ವಿದ್ಯಾರ್ಥಿವೇತನದ ಪ್ರಯೋಜನಗಳು:
*ಸ್ಕಾಲರ್ಶಿಪ್ನಲ್ಲಿ ಆಯ್ಕೆಯಾದ ನಂತರ, ಕೋರ್ಸ್ ಪೂರ್ಣಗೊಳ್ಳುವವರೆಗೆ ವಿದ್ಯಾರ್ಥಿಗೆ ವಾರ್ಷಿಕ ರೂ.60,000 ಸಹಾಯವನ್ನು ನೀಡಲಾಗುತ್ತದೆ.
*ವಿಶೇಷ ವರ್ಗದ ವಿದ್ಯಾರ್ಥಿಗೆ 80 ಪ್ರತಿಶತದವರೆಗೆ ಶುಲ್ಕವನ್ನು ನೀಡಲಾಗುತ್ತದೆ.
ಅರ್ಜಿ ದಿನಾಂಕ:
ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 31-08-2022 .
ಟಾಟಾ ಕ್ಯಾಪಿಟಲ್ ಪಂಕ್ ಸ್ಕಾಲರ್ಶಿಪ್ ಪ್ರೋಗ್ರಾಂ:
ಈ ವಿದ್ಯಾರ್ಥಿವೇತನವನ್ನು ಟಾಟಾ ಗ್ರೂಪ್ 6 ರಿಂದ 12 ನೇ ತರಗತಿವರೆಗಿನ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ನೀಡಲಾಗುತ್ತದೆ. ಇದಕ್ಕಾಗಿ ಯಾವುದೇ ನಿರ್ದಿಷ್ಟ ಕೋರ್ಸ್ ಅನ್ನು ನಿಗದಿಪಡಿಸಲಾಗಿಲ್ಲ.
ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ಅರ್ಹತೆ:
*ವಿದ್ಯಾರ್ಥಿವೇತನವು ಭಾರತದ ನಾಗರಿಕರಿಗೆ ಮಾತ್ರ.
*ವಿದ್ಯಾರ್ಥಿಯು ಕನಿಷ್ಟ ಶೇಕಡಾ 60 ಅಂಕಗಳನ್ನು ಹೊಂದಿರಬೇಕು.
*ವಿದ್ಯಾರ್ಥಿಯ ಕುಟುಂಬದ ವಾರ್ಷಿಕ ಆದಾಯ ರೂ.4,00,000 ಮೀರಬಾರದು.
ವಿದ್ಯಾರ್ಥಿವೇತನದ ಪ್ರಯೋಜನಗಳು:
*ಸ್ಕಾಲರ್ಶಿಪ್ನಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಶೇಕಡಾ 80 ರವರೆಗೆ ಅಧ್ಯಯನಕ್ಕಾಗಿ ಹಣವನ್ನು ನೀಡಲಾಗುತ್ತದೆ.
ಅರ್ಜಿ ದಿನಾಂಕ:
ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 31-08-2022 .