“ಮಿಸ್ ಯೂನಿವರ್ಸ್ 2022” ರ ಕಿರೀಟ ಮುಡಿಗೇರಿಸಿಕೊಂಡ ಕುಡ್ಲದ ದಿವಿತಾ ರೈ
ದೇಶದ ಫ್ಯಾಷನ್ ಜಗತ್ತು ಕಾತುರದಿಂದ ಎದುರು ನೋಡುತ್ತಿದ್ದ ಪ್ರತಿಷ್ಠಿತ “ಲಿವಾ ಮಿಸ್ ದಿವಾ ಯೂನಿವರ್ಸ್” ಸೌಂದರ್ಯ ಸ್ಪರ್ಧೆಯ ಫಲಿತಾಂಶ ಪ್ರಕಟವಾಗಿದೆ.
ಕರ್ನಾಟಕದವರೇ ಆದ ಮಂಗಳೂರು ಮೂಲದ ಬೆಡಗಿಯಾಗಿರುವ 23ರ ಹರೆಯದ ದಿವಿತಾ ರೈ ಸೌಂದರ್ಯ ಅಖಾಡದಲ್ಲಿ ಭಾರತವನ್ನು ಪ್ರತಿನಿಧಿಸಿ “ಮಿಸ್ ಯೂನಿವರ್ಸ್ 2022″ರ ಸ್ಪರ್ಧೆಯಲ್ಲಿ ಗೆದ್ದು ಕಿರೀಟವನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ.
ಸ್ಪರ್ಧೆಯ ಸಮಾರಂಭದಲ್ಲಿ ದಿವಿತಾ ರೈ ಮಿಸ್ ಯೂನಿವರ್ಸ್ ಇಂಡಿಯಾ ಆಗಿ ಹೊರಹೊಮ್ಮಿದ್ದರೆ, ತೆಲಂಗಾಣದ ಸುಂದರಿ ಪ್ರಜ್ಞಾ ಅಯ್ಯಂಗಾರಿ ಅವರು ದಿವಾ ಸೂಪರ್ ನ್ಯಾಷನಲ್ ಆಗಿ ಆಯ್ಕೆಯಾಗಿದ್ದಾರೆ. 2021 ರಲ್ಲಿ ಮಿಸ್ ಯೂನಿವರ್ಸ್ ಆಗಿದ್ದ ಹರ್ನಾಜ್ ಸಂಧು ದಿವಿತಾ ರೈ ಗೆ ಕಿರೀಟವನ್ನು ತೊಡಿಸಿದ್ದಾರೆ.
ಜಗಮಗಿಸುವ ಲೈಟ್, ವಿಶೇಷ ವಸ್ತ್ರವಿನ್ಯಾಸದ ಉಡುಪನ್ನು ಧರಿಸಿ ಹೆಜ್ಜೆ ಹಾಕುತ್ತಾ ನೋಡುಗರ ಕಣ್ಣಿಗೆ ಹಬ್ಬ ಉಂಟು ಮಾಡುವ ಈ ಸ್ಪರ್ಧೆ ಮುಂಬೈ ನ ಮಹಾಲಕ್ಷ್ಮಿ ಸ್ಟುಡಿಯೋದಲ್ಲಿ ನಡೆಯಿತು. ಈ ವೈಭವೋಪೇತ ಸಮಾರಂಭದಲ್ಲಿ ಸಿನಿಮಾ ತಾರೆಯರು ಗಣ್ಯರು ಹಾಜರಿದ್ದರು. ಹರ್ನಾಜ್ ಕೌರ್ ಸಂಧು ಮತ್ತು ಮಾಜಿ ಮಿಸ್ ಯೂನಿವರ್ಸ್ ಲಾರದತ್ತ ಈ ಸಮಾರಂಭದ ಆಕರ್ಷಣೆಯ ಕೇಂದ್ರವಾಗಿದ್ದರು ಎಂದರೆ ತಪ್ಪಾಗಲಾರದು.
ಮಿಸ್ ಯೂನಿವರ್ಸ್ ನ ಅಧಿಕೃತ ಇನ್ಸ್ಟಾ ಗ್ರಾಮ್ ಪೇಜ್ ನಲ್ಲಿ ಹರ್ನಾಜ್ ಸಂಧು ಅವರು ದಿವಿತಾ ರೈ ಅವರಿಗೆ ಕಿರೀಟ ತೊಡಿಸುತ್ತಿರುವ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ಹರ್ನಾಜ್ ರವರು ದಿವಿತಾ ರೈಗೆ ಕಿರೀಟ ತೊಡಿಸುವ ಮುನ್ನ ಆ ಕಿರೀಟಕ್ಕೆ ಮುತ್ತಿಕ್ಕುವುದನ್ನು ಗಮನಿಸಬಹುದು. ನಂತರ ಇಬ್ಬರು ಸುಂದರಿಯರು ರಾಂಪ್ ನಲ್ಲಿ ಹೆಜ್ಜೆ ಇಟ್ಟು ವೇದಿಕೆಯ ಮೆರುಗನ್ನು ಹೆಚ್ಚಿಸಿದರು.
ಮಂಗಳೂರು ನಿವಾಸಿಗಳಾದ ಸದ್ಯ ಮುಂಬಯಿನಲ್ಲಿ ನೆಲೆಸಿರುವ ದಿಲೀಪ್ ರೈ ಮತ್ತು ಪವಿತ್ರಾ ರೈ ದಂಪತಿ ಗಳ ಸುಪುತ್ರಿ ದಿವಿತಾ. ತಂದೆ ಸರ್ಕಾರಿ ನೌಕರರಾಹೀರುವುದರಿಂದ ವಿವಿಧ ನಗರಗಳಲ್ಲಿ ವಿದ್ಯಾಭ್ಯಾಸವನ್ನು ಮಾಡಿದ್ದಾರೆ. 23ರ ಹರೆಯದ ಈ ಬೆಡಗಿ ಮುಂಬಯಿನ ಸರ್ ಜೆಜೆ ಕಾಲೇಜ್ ಆಫ್ ಅರ್ಕಿಟೆಕ್ಚರ್ ನಲ್ಲಿ ಆರ್ಕಿಟೆಕ್ಟ್ ಮುಗಿಸಿ ಮಾಡೆಲಿಂಗ್ ಕೂಡ ಮಾಡುತ್ತಿದ್ದಾರೆ.
ಬ್ಯಾಡ್ಮಿಂಟನ್, ಬಾಸ್ಕೆಟ್ಬಾಲ್,ಪೈಂಟಿಂಗ್ ನಲ್ಲಿ ಆಸಕ್ತಿ ಹೊಂದಿದ್ದು, ಪುಸ್ತಕ ಓದುವುದು ಮತ್ತು ಸಂಗೀತ ಕೇಳುವುದು ಇವರ ಹವ್ಯಾಸವಾಗಿದೆ. ಇದರೊಂದಿಗೆ 71ನೇ ಮಿಸ್ ಯೂನಿವರ್ಸ್ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. 2022 ರ ಮಿಸ್ ದಿವಾ ಯೂನಿವರ್ಸ್ ಕಿರೀಟ ಗೆದ್ದ ಬಳಿಕ ತಮ್ಮ ಖುಷಿಯನ್ನು ಹಂಚಿಕೊಂಡಿದ್ದಾರೆ.
“ಇದೊಂದು ತರ ಕ್ರೇಜಿ ಎನಿಸುತ್ತಿದೆ. ನಾನು ಕೊನೆಗೂ ಕಿರೀಟವನ್ನು ಪಡೆದೆ. ಇದನ್ನು ನಂಬಲಾಗುತ್ತಿಲ್ಲ. ನನಗೆ ಮಾತನಾಡಲು ಪದಗಳೇ ಸಾಲುತ್ತಿಲ್ಲ ಎಂದು ಹೇಳಿಕೊಂಡಿದ್ದಾರೆ.
ಈ ಸಂದರ್ಭದಲ್ಲಿ ಮಾಜಿ ಬ್ಯೂಟಿ ಕ್ವೀನ್ಗಳು, 2000 ನೇ ಇಷವಿಯ ಮಿಸ್ ಯೂನಿವರ್ಸ್ ಲಾರಾ ದತ್, 1964ರ ಮಿಸ್ ಇಂಡಿಯಾ ಆಗಿದ್ದ ಮೆಹರ್ ಕ್ಯಾಸ್ಟಲಿನೋ,1980 ರ ಮಿಸ್ ಇಂಡಿಯಾ ಸಂಗೀತ ಬಿಜಲಾನಿ,2004 ರ ಮಿಸ್ ಯೂನಿವರ್ಸ್ ತನುಶ್ರೀ ದತ್ ಸಮಾರಂಭದಲ್ಲಿ ಉಪಸ್ಥಿತರಾಗಿದ್ದರು.
ಮತ್ತೊಂದು ಕುತೂಹಲಕಾರಿ ಸಂಗತಿಯೇನೆಂದರೆ 2021ರ ಮಿಸ್ ದಿವಾ ಯೂನಿವರ್ಸ್ ಸ್ಪರ್ಧೆಯಲ್ಲಿ ಕೂಡ ಭಾಗವಹಿಸಿರುವ ದಿವಿತಾ 2ನೇ ರನ್ನರ್ ಅಪ್ ಆಗಿದ್ದರು. ಈ ಸಮಯದಲ್ಲಿ ಟೈಮ್ಸ್ ಎಂಟ್ಟೈನ್ಮೆಂಟ್ ಗೆ ನೀಡಿದ ಸಂದರ್ಶನದಲ್ಲಿ ” ತನ್ನದು ಎಲ್ಲರೊಂದಿಗೆ ಹೊಂದಿಕೊಂಡು ಹೋಗುವ ಗುಣ ಎಂದಿದ್ದಾರೆ. ಜೊತೆಗೆ ನನ್ನ ಶೈ ಕ್ಷಣಿಕ ಜೀವನದಲ್ಲಿ ನಾನು ಆರು ಶಾಲೆಗಳನ್ನು ಬದಲಿಸಿದ್ದೆ. ಹಲವಾರು ನಗರಗಳಲ್ಲಿ ವಾಸಿಸುವ ಅನಿವಾರ್ಯತೆ ಕೂಡ ಉಂಟಾಗಿತ್ತು. ಆಗ ಅಲ್ಲಿನ ಜನರೊಂದಿಗೆ ಬೆರೆತು ಹೊಂದಿಕೊಂಡು ಜೀವಿಸಲು ಅಭ್ಯಾಸವಾಯಿತು.
ಆಕೆಯ ಜೀವನದ ದ್ಯೇಯ ವಾಕ್ಯವೇನೆಂದು ಕೇಳಿದಾಗ “ಬದಲಾವಣೆಗೆ ಭಯಪಡಬೇಡಿ, ಜೀವನವನ್ನು
ಸ್ವೀಕರಿಸಿ, ಜೀವನದ ಪ್ರತಿ ಕ್ಷಣವನ್ನು ಸಂಪೂರ್ಣವಾಗಿ ಅನುಭವಿಸಿ ” ಎಂದಿದ್ದಾರೆ. “ಪ್ರತಿಯೊಬ್ಬರಿಗೂ ಶಿಕ್ಷಣ ದೊರಕುವಂತಾಗಬೇಕು” ಎನ್ನುವುದು ಮಿಸ್ ದಿವಾ ಯೂನಿವರ್ಸ್ 2022 ರ ವಿಜೇತೆ ದಿವಿತಾ ಅವರ ಹೆಬ್ಬಯಕೆ.
ನನ್ನ ತಂದೆಗೆ ಆರ್ಥಿಕ ದುಗುಡದಿಂದ ಹೊರಬರಲು ಅವರ ಶಿಕ್ಷಣ ನೆರವಾಗಿದೆ. ಅದೇ ಶಿಕ್ಷಣದಿಂದ ನಮ್ಮ ಕುಟುಂಬ ನಿರ್ವಹಿಸಲು ಸಾಧ್ಯವಾಗಿದೆ. ಹಾಗಾಗಿ ನನಗೆ ತಂದೆಯೇ ಸ್ಪೂರ್ತಿಯೆಂದು ಸಂದರ್ಶನ ದಲ್ಲಿ ಹೇಳಿಕೊಂಡಿದ್ದಾರೆ.