ಭಾರೀ ಮಳೆ : ಮಂಗಳೂರು ಮಡಿಕೇರಿ ಹೆದ್ದಾರಿ ಭೂ ಕುಸಿತ

ನಿನ್ನೆಯಿಂದ ರಾಜ್ಯದಾದ್ಯಂತ ಭಾರೀ ಮಳೆ ಶುರುವಾಗಿದ್ದು, ಹಲವೆಡೆ ಭಾರೀ ಹಾನಿ ಉಂಟಾಗಿದೆ. ಇತ್ತ ಕಡೆ ಕೊಡಗು ಜಿಲ್ಲೆಯಲ್ಲಿ ಮಳೆರಾಯನ ಆರ್ಭಟ ಜೋರಾಗಿದೆ. ನಿನ್ನೆ ಸುರಿದಂತ ಭಾರೀ ಮಳೆಯಿಂದಾಗಿ ದೇವರಕೊಲ್ಲಿ ಸಮೀಪದಲ್ಲಿ ಭೂ ಕುಸಿತ ಉಂಟಾಗಿದೆ. ಮಣ್ಣಿನೊಂದಿಗೆ ಮರಗಳು ರಸ್ತೆ ಮೇಲೆ ಜಾರಿ ಬಿದ್ದ ಪರಿಣಾಮ, ಮರ ತೆರವುಗೊಳಿಸೋ ಕಾರ್ಯ ನಡೆಸಲಾಯಿತು. ಇದಕ್ಕೆ ಪ್ರಯಾಣಿಕರು ಕೂಡ ಸಾಥ್ ನೀಡಿದರು.

 

ಈ ಹಿನ್ನಲೆಯಲ್ಲಿ ಮಡಿಕೇರಿ-ಮಂಗಳೂರು ಹೆದ್ದಾರಿಯ ಸಂಚಾರದಲ್ಲಿ ಅಸ್ತವ್ಯಸ್ತ ಉಂಟಾಗಿದ್ದು, ವಾಹನ ಸವಾರರು ಟ್ರಾಫಿಕ್ ಜಾಮ್ ನಲ್ಲಿ ಸಿಲುಕಿ ಪರದಾಡುವಂತೆ ಆಗಿತ್ತು.

ಕೊಡಗಿನ ದೇವರಕೊಲ್ಲಿ ರಾಷ್ಟ್ರೀಯ ಹೆದ್ದಾರಿಯ ಎರಡು ಕಡೆಗಳಲ್ಲಿ ಭೂ ಕುಸಿತ ಉಂಟಾಗಿದ ಪರಿಣಾಮ ಸಂಚಾರಕ್ಕೆ ಅಡ್ಡಿಯುಂಟಾಯಿತು. ಅಲ್ಲದೇ ರಸ್ತೆ ಸಂಚಾರ ಬಂದ್ ಆದ ಕಾರಣ, ವಾಹನಗಳು ಸಾಲುಗಟ್ಟಿ ನಿಂತು, ಟ್ರಾಫಿಕ್ ಜಾಮ್ ಉಂಟಾಗಿ, ಕೆಲ ಗಂಟೆಗಳ ಕಾಲ ಸಂಚಾರ ದಟ್ಟಣೆಯಲ್ಲಿ ಸಿಲುಕುವಂತೆ ಆಯಿತು.

Leave A Reply

Your email address will not be published.