‘ಒಂದು ದಿನಕ್ಕೆ ನಿನ್ನ ರೇಟ್ ಎಷ್ಟು’ ಎಂದ ಮಹಾಶಯನಿಗೆ ಮುಟ್ಟಿ ನೋಡುವಂಥಾ ಉತ್ತರ ಕೊಟ್ಟ ನಟಿ!!!
ಪ್ಯಾನ್ ಇಂಡಿಯಾ ಸಿನಿಮಾ ‘ಲೈಗರ್’ ಸಿನಿಮಾದ ನಾಯಕ ವಿಜಯ್ ದೇವರಕೊಂಡ ಹಾಗೂ ಟಾಲಿವುಡ್ ನ ಫೇಮಸ್ ನಟಿ, ಆ್ಯಂಕರ್ ಅನಸೂಯ ನಡುವಿನ ಫ್ಯಾನ್ಸ್ ವಾರ್ ಹೆಚ್ಚಾಗುತ್ತಾ ಇದೆ. ವಿಷಯ ಏನೆಂದರೆ, ಲೈಗರ್’ ಸಿನಿಮಾ ರಿಲೀಸ್ ಬೆನ್ನಲ್ಲೇ ವಿಜಯ್ ದೇವರಕೊಂಡನನ್ನು ಟಾರ್ಗೆಟ್ ಮಾಡಿದ್ದಾರೆ ಅನಸೂಯ ಅವರು. ಏಕೆಂದರೆ ಈಕೆ ಮಾಡಿದ ಒಂದು ಟ್ವೀಟ್ ಭಾರೀ ವೈರಲ್ ಆಗಿ, ಕೆಲವರು ಆಕೆಯ ವಿರುದ್ಧ ತಿರುಗಿ ಬಿದ್ದಿದ್ದಾರೆ.
‘ಲೈಗರ್’ ಚಿತ್ರಕ್ಕೆ ಕೂಡಾ ಬಾಯ್ ಕಾಟ್ ಎಂಬ ಮಾತು ಎಲ್ಲೆಡೆ ಬರುತ್ತಿತ್ತು. ಹಾಗಾಗಿ ನೆಗೆಟಿವ್ ಟಾಕ್ ಬಂದ ಹಿನ್ನೆಲೆಯಲ್ಲಿ ಅನಸೂಯ ಅವರು, ‘ತಾಯಿಗೆ ಅವಮಾನ ಮಾಡಿದರೆ ಆ ಕರ್ಮ ಸುಮ್ಮನೆ ಬಿಡುವುದಿಲ್ಲ’ ಎಂದು ಟ್ವೀಟ್ ಮಾಡಿದ್ದರು.
ಆದರೆ ವಿಜಯ್ ದೇವರಕೊಂಡ ಫ್ಯಾನ್ಸ್ ಈಕೆ ವಿರುದ್ಧ ತಿರುಗಿ ಬಿದ್ದಿದ್ದಾರೆ. ‘ಸಿನಿಮಾ ಸೋಲಿನಿಂದ ಹೀರೋ ಕಂಗೆಟ್ಟಿದ್ದರೆ ನೀನು ಸಂತೋಷ ಪಡುತ್ತಿದ್ದೀಯಾ’ ಎಂದು ಕೆಲವರು ಕಾಲೆಳೆದಿದ್ದಾರೆ. ಆಕೆಯನ್ನು ‘ಆಂಟಿ’ ಎಂದು ಕೆಲವರು ಕರೆದಿದ್ದಾರೆ, ಆಕೆಯ ಮೀಮ್ಸ್ ಕ್ರಿಯೇಟ್ ಮಾಡಿ ಟ್ವೀಟ್‌ಗಳ ಸುರಿಮಳೆ ಸುರಿಸಿ ಟ್ರೋಲ್ ಮಾಡಿದ್ದರು.
ಅನಸೂಯ ಸಹ ಖಡಕ್ಕಾಗಿ ಉತ್ತರ ಕೊಡುತ್ತಾ ಬರ್ತಿದ್ದಾರೆ. ಕೆಟ್ಟದಾಗಿ ಟ್ವೀಟ್ ಮಾಡಿದವರ ವಿರುದ್ಧ ಸೈಬರ್ ಠಾಣೆಯಲ್ಲಿ ದೂರು ನೀಡುವುದಾಗಿ ಹೇಳಿದ್ದಾರೆ. ಆದರೆ ಇಷ್ಟಕ್ಕೆ ಸುಮ್ಮನಾಗದ ಕೆಲವರು ಮನಸೋಇಚ್ಛೆ ಆಕೆಯನ್ನು ಟ್ರೋಲ್ ಮಾಡುತ್ತಿದ್ದಾರೆ. ಅದರಲ್ಲಿ ಒಬ್ಬ ಹದ್ದು ಮೀರಿ ಕೆಟ್ಟದಾಗಿ ಪ್ರಶ್ನೆ ಮಾಡಿದ್ದಾನೆ. ಇದಕ್ಕೆ ಆಕೆ ಸರಿಯಾಗಿಯೇ ತಿರುಗೇಟು ನೀಡಿದ್ದಾಳೆ.
ಈ ಟ್ವೀಟ್ ವಾರ್‌ನಲ್ಲಿ ಸಾಕಷ್ಟು ಜನ ನಿರೂಪಕಿ ಅನಸೂಯ ಬೆಂಬಲಕ್ಕೆ ಬಂದಿದ್ದರು. ‘ಕೋಟಿಗೊಬ್ಬ’-3 ಚಿತ್ರದಲ್ಲಿ ನಟಿಸಿದ್ದ ಶ್ರದ್ಧಾ ದಾಸ್ ಕೂಡ ಆಕೆಯ ಪರ ಟ್ವೀಟ್ ಮಾಡಿದ್ದರು. ಇದಕ್ಕೂ ಗರಂ ಆದ ಕೆಲವರು ಆಕೆಯನ್ನು ಟ್ರೋಲ್ ಮಾಡಿದ್ದರು. ಈ ಟ್ರೋಲ್ ಗದ್ದಲದಲ್ಲಿ ತಪ್ಪೆಲ್ಲಾ ಅನಸೂಯದು. ನೀನು ಸುಮ್ಮನೆ ಇದರಲ್ಲಿ ತಲೆ ಹಾಕಬೇಡ ಎಂದರು.
ಅದರಲ್ಲೂ ಒಬ್ಬ ನೆಟ್ಟಿಗಂತೂ ‘ನಿನ್ನ ರೇಟ್ ಎಷ್ಟು’ ಎನ್ನುವಂತೆ ಟ್ವೀಟ್ ಮಾಡಿದ್ದಾನೆ. ಇದಕ್ಕೆ ಜವಾಬು ಕೊಟ್ಟಿರುವ ಅನಸೂಯ “ನಿಮ್ಮ ತಂಗಿಯನ್ನೋ ಅಥವಾ ನಿಮಗೆ ಮದುವೆ ಆಗಿದ್ದು, ಅಥವಾ ತಂಗಿಗೆ ಒಂದು ದಿನಕ್ಕೆ ಎಷ್ಟು? ಅದೇ ಒಂದು ದಿನ ಆಫೀಸ್‌ನಲ್ಲಿ ಎಷ್ಟು? ಎಂದು ಕೇಳಿದರೆ ಏನ್ ಹೇಳುತ್ತೀರಾ?” ತಿರುಗೇಟು ನೀಡಿದ್ದಾರೆ.
ಈ ಘಟನೆಯ ಮೂಲ ಕಾರಣವೇನು? ಅರ್ಜುನ್ ರೆಡ್ಡಿ ಸಿನಿಮಾ 5 ವರ್ಷಗಳ ಹಿಂದೆ ರಿಲೀಸ್ ಆಗಿತ್ತು. ಈ ಚಿತ್ರದಲ್ಲಿ ವಿಜಯ್ ದೇವರಕೊಂಡ ವಿಚಿತ್ರ ಮ್ಯಾನರಿಸಂನಲ್ಲಿ ನಟನೆ ಮಾಡಿದ್ದರು. ಹಾಗೆನೇ ಈ ಚಿತ್ರದ ದೃಶ್ಯವೊಂದರಲ್ಲಿ ತಾಯಿಯನ್ನು ಬೈಯುವಂತಹ ಸಂಭಾಷಣೆ ಇತ್ತು. ಸೆನ್ಸಾರ್ ಮಂಡಳಿ ಇದನ್ನು ಮ್ಯೂಟ್ ಮಾಡಿಸಿತ್ತು. ಆದರೆ ಚಿತ್ರದ ಫ್ರೀ ರಿಲೀಸ್ ಈವೆಂಟ್‌ನಲ್ಲಿ ಇದೇ ಪದವನ್ನು ಅಭಿಮಾನಿಗಳ ಬಾಯಲ್ಲಿ ವಿಜಯ್ ದೇವರಕೊಂಡ ಹೇಳಿಸಿದ್ದರು. ಆ ಸಂದರ್ಭದಲ್ಲಿ ನಿರೂಪಕಿ ಅನಸೂಯ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು. ಅಂದು ತಾಯಿ ಬಗ್ಗೆ ದೇವರಕೊಂಡ ಬೈದ ಪಾಪಕ್ಕೆ ‘ಲೈಗರ್’ ಚಿತ್ರ ಸೋತಿದೆ ಅನ್ನುವ ಅರ್ಥದಲ್ಲಿ ಅನಸೂಯ ಟ್ವೀಟ್ ಮಾಡಿದ್ದರು.