ಈ ಶಾಲೆಗಳನ್ನು ವಾರದಲ್ಲಿ 4 ದಿನ ಮಾತ್ರ ನಡೆಸಲು ಶಿಕ್ಷಣ ಸಚಿವಾಲಯ ಸೂಚನೆ!?
ಇಲ್ಲಿನ ಶಾಲೆಗಳು ವಾರದಲ್ಲಿ 4 ದಿನ ಮಾತ್ರ ತೆರೆದಿರಲು ಶಿಕ್ಷಣ ಸಚಿವಾಲಯ ತಿಳಿಸಿದೆ. ಅಲ್ಲದೆ, ಖಾಸಗಿ ಕಚೇರಿಗಳು ವಾರಾಂತ್ಯ ರಜೆ ನೀಡಿ ದಿನ 7 ಗಂಟೆ ಮಾತ್ರ ಕೆಲಸ ಮಾಡಲು ತಿಳಿಸಲಾಗಿದೆ. ಅಷ್ಟಕ್ಕೂ ಇಲ್ಲಿನ ಈ ನಿರ್ಧಾರಕ್ಕೆ ಕಾರಣವೇ ವಿಭಿನ್ನವಾಗಿದೆ.
ಹೌದು. ವಿದ್ಯುತ್ ಕೊರತೆ ಎದುರಿಸುತ್ತಿರುವ ಬಾಂಗ್ಲಾದೇಶ ಶಾಲೆ ಮತ್ತು ಕಚೇರಿ ಸಮಯವನ್ನು ಕಡಿತಗೊಳಿಸಿದೆ. ಬಾಂಗ್ಲಾದೇಶವು ತನ್ನ ಎಲ್ಲಾ ಡೀಸೆಲ್-ಚಾಲಿತ ವಿದ್ಯುತ್ ಸ್ಥಾವರಗಳನ್ನು ಸ್ಥಗಿತಗೊಳಿಸಿದ್ದು, ವಿದ್ಯುತ್ ಕೊರತೆ ತೀವ್ರವಾಗಿದೆ.
ವಾರಕ್ಕೆ ಒಂದು ದಿನ ಹೆಚ್ಚುವರಿ ದಿನ ಶಾಲೆಗಳನ್ನು ಮುಚ್ಚಲು ತಿಳಿಸಲಾಗಿದೆ. ವಿದ್ಯುತ್ ಉಳಿಸಲು ಕಚೇರಿ ಸಮಯವನ್ನು ಒಂದು ಗಂಟೆ ಕಡಿತಗೊಳಿಸುತ್ತದೆ ಎಂದು ಸರ್ಕಾರಿ ಅಧಿಕಾರಿಯೊಬ್ಬರು ಹೇಳಿದ್ದಾರೆ. ಎರಡು ದಿನಗಳ ಕಾಲ ಶಾಲೆಗಳನ್ನು ಮುಚ್ಚಲು ಪ್ರಧಾನಿ ಶೇಖ್ ಹಸೀನಾ ಸರ್ಕಾರ ನಿರ್ಧರಿಸಿದೆ ಎಂದು ಕ್ಯಾಬಿನೆಟ್ ಕಾರ್ಯದರ್ಶಿ ಖಂಡ್ಕರ್ ಅನ್ವರುಲ್ ಇಸ್ಲಾಂ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಶಾಲೆಗಳು ಸಾಮಾನ್ಯವಾಗಿ ವಾರದಲ್ಲಿ ಆರು ದಿನಗಳು ತೆರೆದಿರುತ್ತವೆ ಮತ್ತು ಶುಕ್ರವಾರದಂದು ಮುಚ್ಚಲ್ಪಡುತ್ತವೆ ಆದರೆ ಶಿಕ್ಷಣ ಸಚಿವಾಲಯ ವಾರದಲ್ಲಿ 4 ದಿನ ಮಾತ್ರ ಶಾಲೆ ನಡೆಸಲು ತಿಳಿಸಿದೆ. ಸರ್ಕಾರಿ, ಖಾಸಗಿ ಕಚೇರಿಗಳು ವಾರಾಂತ್ಯ ರಜೆ ನೀಡಿ ದಿನ 7 ಗಂಟೆ ಮಾತ್ರ ಕೆಲಸ ಮಾಡಲು ತಿಳಿಸಲಾಗಿದೆ. ವಿದ್ಯುತ್ ಉಳಿತಾಯಕ್ಕಾಗಿ ಕಾರ್ಖಾನೆಗಳಿಗೆ ಸರ್ಕಾರ ವಾರದ ರಜೆ ಘೋಷಿಸಿದೆ.
ಉಕ್ರೇನ್ – ರಷ್ಯಾ ವಾರ್ ನಿಂದಾಗಿ ಆಮದು ಇಂಧನ ವೆಚ್ಚ ಹೆಚ್ಚಿದೆ. ಕಳೆದ ತಿಂಗಳು ತನ್ನ ಎಲ್ಲಾ 10 ಡೀಸೆಲ್ ವಿದ್ಯುತ್ ಸ್ಥಾವರಗಳನ್ನು ಸ್ಥಗಿತಗೊಳಿಸಿದೆ. ಕಳೆದ ತಿಂಗಳು ಪ್ರತಿದಿನ ಎರಡು ಗಂಟೆಗಳ ಕಾಲ ವಿದ್ಯುತ್ ಕಡಿತ ಪ್ರಾರಂಭಿಸಿದ ಬಾಂಗ್ಲಾ ದೇಶದ ಅನೇಕ ಭಾಗಗಳಲ್ಲಿ ವಿದ್ಯುತ್ ಇರುವುದೇ ಇಲ್ಲ. ಈ ಕಾರಣದಿಂದಾಗಿ ವಿದ್ಯುತ್ ಉಳಿಸಲು ಈ ಕ್ರಮ ಕೈಗೊಳ್ಳಲಾಗಿದೆ.