ಆನ್ಲೈನ್ ಮದ್ಯ ಖರೀದಿಗೆ ಕಾದು ಕೂತಿರೋರಿಗೆ ಇಲ್ಲಿದೆ ಮುಖ್ಯ ಮಾಹಿತಿ!
ಇಂದಿನ ಟೆಕ್ನಾಲಜಿ ಎಷ್ಟು ಮುಂದುವರಿದಿದೆ ಎಂದರೆ ಕೂತಲ್ಲಿಂದಲೇ ಏಲ್ಲಾನು ನಡೆದು ಹೋಗುತ್ತೆ. ಯಾವುದೇ ವಸ್ತು ಬೇಕಾದ್ರೂ ಜಸ್ಟ್ ಆನ್ಲೈನ್ ಮಾಡಿದ್ರೆ ಆಯ್ತು. ಮನೆ ಬಾಗಿಲಿಗೆ ಬರುತ್ತದೆ. ಅಂತದರಲ್ಲಿ ಮದ್ಯನೂ ಮನೆಗೇ ಬಂದು ಸೇರುತ್ತೆ ಅಂದ್ರೆ ಯಾರಿಗೆ ತಾನೇ ಖುಷಿ ಇಲ್ಲಾ ಹೇಳಿ. ಆದ್ರೆ, ಆನ್ಲೈನ್ ಮದ್ಯ ಆರ್ಡರ್ ಗೆ ಸಂಬಂಧಿಸಿದಂತೆ ಒಂದು ಮಹತ್ವದ ಮಾಹಿತಿ ಹೊರಬಿದ್ದಿದೆ.
ಹೌದು. ಮದ್ಯವನ್ನು ಸಹ ಆನ್ ಲೈನ್ ಮೂಲಕ ಮಾರಾಟ ಮಾಡಿದರೆ ಅನುಕೂಲಕರ ಎಂಬ ಮಾತುಗಳು ಮದ್ಯಪ್ರಿಯರಿಂದ ಕೇಳಿ ಬರುತ್ತಿತ್ತು. ಅದರಲ್ಲೂ ಲಾಕ್ ಡೌನ್, ಬಂದ್ ಸಂದರ್ಭಗಳಲ್ಲಿ ಅವರುಗಳ ಬೇಡಿಕೆ ನೀಗುತ್ತಿತ್ತು. ಆದರೆ ಇದೀಗ ಅಬಕಾರಿ ಸಚಿವ ಕೆ. ಗೋಪಾಲಯ್ಯ, ಈ ನಿರೀಕ್ಷೆಗಳಿಗೆ ತೆರೆ ಎಳೆದಿದ್ದಾರೆ.
ತುಮಕೂರಿನಲ್ಲಿ ಮಾತನಾಡಿದ ಅವರು, ಯಾವುದೇ ವ್ಯಾಪಾರವಾದರೂ ಸಹ ಸ್ಥಳೀಯರಿಗೆ ಅನುಕೂಲವಾಗಬೇಕು ಹೀಗಾಗಿ ಆನ್ ಲೈನ್ ಮಾರಾಟ ಮಾಡುವ ಚಿಂತನೆ ಇಲ್ಲ ಎಂದಿದ್ದಾರೆ. ಈ ಮೂಲಕ ಆನ್ ಲೈನ್ ಮದ್ಯ ಮಾರಾಟ ಮಾಡುವ ವಿಚಾರದ ಪ್ರಸ್ತಾವನೆ ಸದ್ಯಕ್ಕಿಲ್ಲ ಎಂದು ಹೇಳಿದ್ದಾರೆ.