JEE ಅಡ್ವಾನ್ಸ್ಡ್ ಪ್ರವೇಶ ಪತ್ರ ಇಂದು ಬಿಡುಗಡೆ

Share the Article

ಜೆಇಇ ಅಡ್ವಾನ್ಸ್ಡ್ 2022 ರ ಪ್ರವೇಶ ಪತ್ರ ಇಂದು ಅಂದರೆ ಆ.23 ರಂದು ಬಿಡುಗಡೆ ಆಗಲಿದೆ. ಪ್ರವೇಶ ಪತ್ರ ಬಿಡುಗಡೆಯಾದ ಮೇಲೆ ಈ ಪ್ರವೇಶ ಪರೀಕ್ಷೆಗೆ ನೋಂದಾಯಿಸಿಕೊಂಡಿರುವ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಪ್ರವೇಶ ಪತ್ರವನ್ನು ಪಡೆಯಬಹುದಾಗಿದೆ. ಜೆಇಇ ಅಡ್ವಾನ್ಸ್ 2022 ಪ್ರವೇಶ ಪರೀಕ್ಷೆಯನ್ನು ಆಗಸ್ಟ್ 28 ರಂದು ನಡೆಸಲು ನಿರ್ಧರಿಸಲಾಗಿದೆ.

ಈ ಪ್ರವೇಶ ಪರೀಕ್ಷೆಗೆ ನೋಂದಾಯಿಸಿಕೊಂಡಿರುವ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ jeeadv.ac.in ಗೆ ಭೇಟಿ ನೀಡಿ ಪ್ರವೇಶ ಪತ್ರವನ್ನು ಪಡೆಯಬಹುದಾಗಿದೆ.

ಜೆಇಇ ಅಡ್ವಾನ್ಸ್ಡ್ 2022 ಹಾಲ್ ಟಿಕೆಟ್ ಬಿಡುಗಡೆಯಾದ ಮೇಲೆ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ jeeadv.ac.in ನಲ್ಲಿ ತಮ್ಮ ನೋಂದಣಿ ಸಂಖ್ಯೆ ಮತ್ತು ಜನ್ಮ ದಿನಾಂಕವನ್ನು ನಮೂದಿಸಿ ಲಾಗಿನ್ ಆಗುವ ಮೂಲಕ ಪ್ರವೇಶ ಪತ್ರವನ್ನು ಪಡೆಯಬಹುದು. ಜೆಇಇ ಅಡ್ವಾನ್ಸ್ಡ್ 2022 ಪ್ರವೇಶ ಪರೀಕ್ಷೆಯನ್ನು ಆಗಸ್ಟ್ 28 ರಂದು ನಡೆಸಲು ನಿರ್ಧರಿಸಲಾಗಿದ್ದು, ಪತ್ರಿಕೆ -1 ಬೆಳಗ್ಗೆ 9 ರಿಂದ ಮಧ್ಯಾಹ್ನ 12ರವರೆಗೆ ನಡೆಯಲಿದೆ. ಇನ್ನೂ ಪತ್ರಿಕೆ- 2 ಮಧ್ಯಾಹ್ನ 2.30 ರಿಂದ ಸಂಜೆ 5.30ರ ವರೆಗೆ ನಡೆಯಲಿದೆ.

ಜೆಇಇ ಅಡ್ವಾನ್ಸ್ಡ್ 2022 ಅರ್ಜಿ ನೋಂದಣಿ ಆರಂಭ ದಿನಾಂಕ – 08-08-2022
ಜೆಇಇ ಅಡ್ವಾನ್ಸ್ಡ್ 2022 ಅರ್ಜಿ ನೋಂದಣಿ ಕೊನೆಯ ದಿನಾಂಕ 11-08-2022
ಅರ್ಜಿ ಶುಲ್ಕ ಪಾವತಿಗೆ ಕೊನೆಯ ದಿನಾಂಕ – 12-08-2022
ಜೆಇಇ ಅಡ್ವಾನ್ಸ್ಡ್ 2022 ಪ್ರವೇಶ ಪತ್ರ ಬಿಡುಗಡೆ ದಿನಾಂಕ 23-08-2022
ಜೆಇಇ ಅಡ್ವಾನ್ಸ್ಡ್ 2022 ಪರೀಕ್ಷಾ ದಿನಾಂಕ – 28-08-2022
ತಾತ್ಕಾಲಿಕ ಕೀ ಉತ್ತರ ಬಿಡುಗಡೆ ದಿನಾಂಕ – 3-09-2022
ತಾತ್ಕಾಲಿಕ ಕೀ ಉತ್ತರಗಳಿಗೆ ಸಂಬಂಧಿಸಿದಂತೆ ಆಕ್ಷಪಣೆ ಸಲ್ಲಿಸುವ ದಿನಾಂಕ – 3-09-2022/4-09-2022
ಅಂತಿಮ ಕೀ ಉತ್ತರ ಬಿಡುಗಡೆ ದಿನಾಂಕ – 11-09-2022
ಜೆಇಇ ಅಡ್ವಾನ್ಸ್ಡ್ 2022 ಫಲಿತಾಂಶದ ದಿನಾಂಕ – 11-09-2022

ಜೆಇಇ ಅಡ್ವಾನ್ಸ್ಡ್ 2022 ಪ್ರವೇಶ ಪತ್ರ ಡೌನ್‌ಲೋಡ್ ಮಾಡುವುದು ಹೇಗೆ?

ಮೊದಲಿಗೆ ಜೆಇಇಅಧಿಕೃತ ವೆಬ್‌ಸೈಟ್ jeeadv.ac.in ಗೆ ಭೇಟಿ ನೋಡಿ, ಜೆಇಇ ಅಡ್ವಾನ್ಸ್ಡ್ 2022 ಅಡ್ಮಿಟ್ ಕಾರ್ಡ್ 2022 ಲಿಂಕ್ ಮೇಲೆ ಕ್ಲಿಕ್ ಮಾಡಿ. ಆಮೇಲೆ ನೋಂದಣಿ ಸಂಖ್ಯೆ ಮತ್ತು ಪಾಸ್‌ವರ್ಡ್, ಜನ್ಮ ದಿನಾಂಕ ನಮೂದಿಸಿದರೆ ಲಾಗಿನ್ ಆಗಬಹುದು. ಅಲ್ಲಿ ಅಗತ್ಯವಿರುವ ವಿವರಗಳನ್ನು ನಮೂದಿಸಿ ಸೈನ್
ಇನ್ ಮೇಲೆ ಕ್ಲಿಕ್ ಮಾಡಬೇಕು. ಆಗ ಸ್ಕ್ರೀನ್ ಮೇಲೆ ನಿಮ್ಮ ಜೆಇಇ ಅಡ್ವಾನ್ಸ್ಡ್ 2022ರ ಪ್ರವೇಶ ಕಾರ್ಡ್ ಕಾಣಿಸುತ್ತದೆ. ಅದನ್ನು ಚೆಕ್ ಮಾಡಿಕೊಳ್ಳಿ, ಡೌನ್‌ಲೋಡ್ ಮಾಡಿಕೊಂಡು, ಪ್ರಿಂಟ್ ತೆಗೆದುಕೊಳ್ಳಿ.

Leave A Reply

Your email address will not be published.