GOOD NEWS : ಅಡುಗೆ ಎಣ್ಣೆ ಬೆಲೆಯಲ್ಲಿ ಮತ್ತಷ್ಟು ಇಳಿಕೆ, ಭರ್ಜರಿ ಖುಷಿಯಲ್ಲಿ ಅಡುಗೆ ಮನೆ ವಾರಿಯರ್ಸ್ !
ನವದೆಹಲಿ : ಇದು ಸಾಮಾನ್ಯ ಜನರಿಗೆ ಸಿಹಿ ಸುದ್ದಿ. ಅದರಲ್ಲೂ ನಮ್ಮ ಅಡಿಗೆ ಮನೆಯ ವಾರಿಯರ್ಸ್ಗೆ ಭರ್ಜರಿ ಶುಭ ಸುದ್ದಿ. ಒಂದೊಂದಾಗಿ ಹಬ್ಬಗಳು ಹತ್ತಿರ ಬರುತ್ತಿರುವಾಗ ಅಡುಗೆ ಮನೆಯಲ್ಲಿ ಚಟುವಟಿಕೆಗಳು ಹೆಚ್ಚಾಗುತ್ತಿವೆ. ಅದಕ್ಕೆ ಪೂರಕವಾಗಿ ಎಂಬಂತೆ ಅಡುಗೆ ಮನೆಯ ಒಂದು ತೀರಾ ಅಗತ್ಯ ವಸ್ತುವಿನ ಬೆಲೆ ಮತ್ತಷ್ಟು ಅಗ್ಗವಾಗುತ್ತಿದೆ.
ಕಳೆದ ವಾರದಿಂದ ಜಾಗತಿಕ ಮಾರುಕಟ್ಟೆಯಲ್ಲಿ ತೈಲ ಮಾರುಕಟ್ಟೆ ಸುಧಾರಿಸಿದೆ. ಈಗ ಮತ್ತೊಮ್ಮೆ ಶೇಂಗಾ, ಸೋಯಾಬೀನ್ ಬೆಲೆ ಇಳಿಕೆಯಾಗುವ ಸಾಧ್ಯತೆ ಇದೆ ಎನ್ನುತ್ತಾರೆ ವ್ಯಾಪಾರಿಗಳು. ತೈಲ ಮಾರುಕಟ್ಟೆ ಮೇಲೆ ಪರಿಣಾಮ ಬೀರಿದ್ದು, ಈ ಕುಸಿತದ ನಂತ್ರ ಸಾಸಿವೆ, ಶೇಂಗಾ, ಸೋಯಾಬೀನ್, ಹತ್ತಿಬೀನ್, ಕಚ್ಚಾ ತಾಳೆ ಎಣ್ಣೆ (ಸಿಪಿಒ), ಪಾಮೋಲಿನ್ ಬೆಲೆಗಳು ಇಳಿಮುಖವಾಗಿವೆ.
ಅಗ್ಗದ ಆಮದು ತೈಲ ಬೆಲೆಯಿಂದಾಗಿ ಎಣ್ಣೆಬೀಜದ ಬೆಲೆ ಕಳೆದ ವಾರ ತೀವ್ರವಾಗಿ ಕುಸಿದಿದೆ. ಪ್ರಸ್ತುತ ತಾಳೆ ಎಣ್ಣೆಯ ಬೆಲೆ ಕೆಜಿಗೆ 10-12 ರೂಪಾಯಿ ಇಳಿಕೆಯಾಗಿದೆ. ಪ್ರಸ್ತುತ ಒಂದು ಕಿಲೋ ತಾಳೆ ಎಣ್ಣೆ ಬೆಲೆ 114.50 ರೂ. ಆ ನಂತರ ಪ್ರತಿ ಕೆ.ಜಿ.ಗೆ 101-102 ರೂಪಾಯಿ ಇದೆ.
ಚಿಲ್ಲರೆ ವ್ಯಾಪಾರಿಗಳು ಸುಮಾರು ರೂ. 50 ರಷ್ಟು ಬೆಲೆಯಲ್ಲಿ ಹೆಚ್ಚು ಮಾರಾಟವಾಗುತ್ತಿದೆ. ಆದರೆ ಈ MRP ವಾಸ್ತವಿಕ ಬೆಲೆ ರೂ. 10-15 ಕ್ಕಿಂತ ಹೆಚ್ಚಿಲ್ಲ. ಸರಕಾರದೊಂದಿಗೆ ನಡೆಸಿದ ಸಭೆಗಳಲ್ಲಿ ಸರಕಾರ ಚಿಲ್ಲರೆ ವ್ಯಾಪಾರಿಗಳಿಗೆ 10 ರೂ.ನಿಂದ 15 ರೂಪಾಯಿ ಒಳಗೆ ಮಾರ್ಜಿನ್ ಇಡಲು ಸೂಚಿಸಿದೆ ಎನ್ನಲಾಗಿದೆ. ಅಳಲ್ದೆ ಸಾಸಿವೆ ಎಣ್ಣೆ ಬೆಲೆಯಲ್ಲಿ ಕೂಡಾ ಇಳಿಕೆ ಕಂಡು ಬಂದಿದೆ.
ಒಟ್ಟಾರೆಯಾಗಿ ಖಾದ್ಯ ತೈಲ ದರ ಶೇಕಡ 15 ರಿಂದ 20 ರಷ್ಟು ಬಾರಿ ಇಳಿಕೆಯಾಗಿದೆ. ಇವುಗಳ ಜೊತೆಗೆ ಪ್ರಮುಖ ಎಲೆಕ್ಟ್ರಾನಿಕ್ ವಸ್ತುಗಳ ತಯಾರಿಕಾ ಸಂಸ್ಥೆಗಳಾದ ರೇಡ್ಮಿ, ಸ್ಯಾಮ್ಸಂಗ್, ಎಲ್.ಜಿ., ಸೋನಿ ಟಿವಿ ದರ ಶೇಕಡ 5 ರಿಂದ 8 ರಷ್ಟು ಇಳಿಕೆಯಾಗಿದೆ. ಲಾಪ್ ಟಾಪ್ ದರ 1500 ರೂ. ನಿಂದ 2000 ರೂಪಾಯಿವರೆಗೆ ಇಳಿದಿದೆ. ಸ್ಮಾರ್ಟ್ ಫೋನ್ ಗಳ ದರಗಳಲ್ಲಿ ಕೂಡಾ ಶೇಕಡ 4 ರಿಂದ 5 ರಷ್ಟು ಕಡಿಮೆಯಾಗಿದೆ. ರಷ್ಯಾ ಯುದ್ಧ ಕಾರ್ಮೋಡ ತಿಳಿಯಾಗುತ್ತಿರುವಂತೆ, ಮಾರುಕಟ್ಟೆಗಳು ಚೇತರಿಸಿಕೊಳ್ಳುತ್ತಿವೆ. ಅದಕ್ಕಾಗಿ ಬೆಲೆ ಏರಿಕೆ ಆಗುತ್ತಿದೆ ಎನ್ನಲಾಗುತ್ತಿದೆ.