ಪುರುಷರು ಹೇಳುವ ಕೆಲವು ಸರಳ ಸುಳ್ಳುಗಳನ್ನು ಪತ್ತೆ ಹಚ್ಚಲು ಮನದನ್ನೆಯರಿಗೆ ಸಾಧ್ಯವಾಗುವುದೇ ಇಲ್ವಂತೆ| ಹಾಗಾದರೆ ಆ ಸುಳ್ಳು ಯಾವುದು?
ಪುರುಷರು ಹೇಳುವ ಕೆಲವೊಂದು ಸರಳ ಸುಳ್ಳು ಅಥವಾ ನಿರ್ದಿಷ್ಟವಾಗಿ ಹೇಳುವ ಸುಳ್ಳನ್ನು ಕಂಡುಹಿಡಿಯಲು ಮಹಿಳೆಯರಿಗೆ ಸಾಧ್ಯವಾಗುವುದಿಲ್ಲ. ಹಾಗಾದರೆ ಮಹಿಳೆಯರು ಈ ಗಂಡಸರನ್ನು ಅರ್ಥ ಮಾಡಿಕೊಳ್ಳುವುದರಲ್ಲಿ ಮೂರ್ಖರಾಗುತ್ತಿದ್ದಾರೆಯೇ? ಅಷ್ಟಕ್ಕೂ ಆ ಸುಳ್ಳುಗಳು ಯಾವುವು? ಅಂತಹ ಕೆಲವು ಸುಳ್ಳುಗಳ ಬಗ್ಗೆ ನಾವು ಇಂದು ನಿಮಗೆ ತಿಳಿಸಲಿದ್ದೇವೆ. ಪುರುಷರು ತಮ್ಮ ಹೆಂಡತಿಯರಿಗೆ ಅಥವಾ ಗೆಳತಿಯರಿಗೆ ಆಗಾಗ್ಗೆ ಹೇಳುವ ಇಂತಹ ಸಾಮಾನ್ಯ ಸುಳ್ಳುಗಳು ಯಾವುದು? ಇಲ್ಲಿದೆ ಡಿಟೇಲ್ಸ್
ಮನುಷ್ಯನ ಸಹಜ ಗುಣ ಸುಳ್ಳು ಹೇಳುವುದು. ಎಲ್ಲರೂ ಕೆಲವೊಂದು ಹಂತದಲ್ಲಿ ಸುಳ್ಳು ಹೇಳುತ್ತಾರೆ ನಿಜ. ಕೆಲವರು ಕೆಲವೊಮ್ಮೆ ಈ ಸುಳ್ಳುಗಳನ್ನು ಒಳ್ಳೆಯದಕ್ಕಾಗಿ ಹೇಳುತ್ತಾರೆ. ಹಾಗೆನೇ ಇನ್ನೂ ಕೆಲವರು ಮೋಸದ ಅಥವಾ ತಪ್ಪು ವಿಷಯಗಳಿಗಾಗಿ ಸುಳ್ಳು ಹೇಳುತ್ತಾರೆ.
ಮದುವೆ ಅಥವಾ ಪ್ರೇಮ ಸಂಬಂಧದಲ್ಲಿ ಮಾತನಾಡುವ ಸುಳ್ಳುಗಳ ಬಗ್ಗೆ ನಾವು ಇಲ್ಲಿ ಮಾತನಾಡುತ್ತಿದ್ದೇವೆ. ಈ ಸಂಬಂಧದಲ್ಲಿ ಮಹಿಳೆಯರಿಗಿಂತ ಪುರುಷರು ಹೆಚ್ಚು ಸುಳ್ಳು ಹೇಳುತ್ತಾರೆ.
ಸಾಮಾನ್ಯವಾಗಿ ಪುರುಷರು ಸುಳ್ಳು ಹೇಳುವುದು ಮಹಿಳೆಯರಿಗೆ ಸುಲಭವಾಗಿ ಕಂಡುಹಿಡಿಯಲು ಸಾಧ್ಯವಾಗುವುದಿಲ್ಲ. ಇಂತಹ ಸಾಮಾನ್ಯ ಸುಳ್ಳುಗಳ ಕುರಿತು, ಹಾಗೂ ಸಂಬಂಧದಲ್ಲಿ ಸತ್ಯ-ಸುಳ್ಳುಗಳ ಆಟ ಮೇಲಾಟದ ಕುರಿತು ಇಲ್ಲಿ ಕಿರುಪರಿಚಯ ನೀಡಲಾಗಿದೆ.
“ನಿನ್ನ ಬಿಟ್ಟು ಬದುಕಲು ಸಾಧ್ಯವೇ ಇಲ್ಲ” – ನೀನು ಇಲ್ಲದೆ ನಾನು ಒಂದು ನಿಮಿಷವೂ ಬದುಕಲಾರೆ ಎಂದು ಹುಡುಗರು ಅಥವಾ ಗಂಡಂದಿರು ತಮ್ಮ ಸಂಗಾತಿಯೊಂದಿಗೆ ಹೇಳುವುದನ್ನು ಸಿನಿಮಾ ಅಥವಾ ಧಾರಾವಾಹಿಗಳಲ್ಲಿಯಷ್ಟೇ ಅಲ್ಲ, ನಿಜ ಜೀವನದಲ್ಲೂ ನೋಡಬಹುದು. ಪುರುಷರು ಹೀಗೆ ಸುಳ್ಳು ಹೇಳುವುದನ್ನೇ ನಿಜಕ್ಕೂ ಹೆಣ್ಮಕ್ಕಳು ನಂಬುತ್ತಾರೆ. ಇಲ್ಲಿ ವಿಶ್ವಾಸಕ್ಕೆ ಯಾವುದೇ ಬಾಧಕವಾಗಲಿ, ಘಾತಕವಾಗಲಿ ಸಂಭವಿಸುವುದಿಲ್ಲ. ಅದರ ಬದಲಿಗೆ ಪರಸ್ಪರರು ಗೆಲ್ಲುತ್ತಾರೆ, ಸಂತೋಷ, ನೆಮ್ಮದಿಯಿಂದ ಇರುತ್ತಾರೆ.
“ನೀನು ನನ್ನ ಮೊದಲ ಪ್ರೀತಿ”- ಈ ಮಾತನ್ನು ಪ್ರೀತಿಯ ಸಂಬಂಧದಲ್ಲಿ ಆತ ಎಂದು ಸಂಗಾತಿಗೆ ಹೇಳುತ್ತಾನೆ. ಇದರ ಹಿಂದೆ ಎಷ್ಟು ಸತ್ಯ ಅಡಗಿದೆ ಎಂಬುದು ಅವನಿಗಷ್ಟೇ ಗೊತ್ತು.
“ನಾನು ಸದಾ ನಿನ್ನ ಬಗ್ಗೆಯೇ ಯೋಚಿಸುತ್ತಾ ಇರುತ್ತೇನೆ”. ಇದು ಆಗಾಗ್ಗೆ ಪುರುಷರು ತಮ್ಮ ಸಂಗಾತಿಗೆ ಹೇಳುತ್ತಾ ಇರುತ್ತಾರೆ. ಎಲ್ಲರಿಗೂ ಇದು ಅನುಭವ ಆಗಿರಬಹುದು. ಆದರೆ ಇದರ ಹಿಂದಿನ ಸತ್ಯ ಏನು ಎಂಬುದು ಅದನ್ನು ಹೇಳಿದವನಿಗೆ ಮಾತ್ರವೇ ತಿಳಿದಿರುತ್ತದೆ. ಪುರುಷ ತನ್ನ ಗೆಳತಿ ಹೆಂಡತಿಯ ಸಂಬಂಧದಲ್ಲಿ ಈ ಸುಳ್ಳನ್ನು ಬಳಸುತ್ತಿದ್ದರೆ, ಅವನ ಸಂಗಾತಿ ಅದರ ಸತ್ಯಾಸತ್ಯತೆ ತಿಳಿಯ ಬಯಸಿದರೂ ಆ ಸತ್ಯವನ್ನು ತಿಳಿದುಕೊಳ್ಳಲು ಸಾಧ್ಯವಾಗುವುದಿಲ್ಲ ಎಂಬುದು ಅನುಭವಸ್ಥರು ಹೇಳುವ ಸತ್ಯದ ಮಾತು. ಸಂಗಾತಿಯ ಮನ ಗೆಲ್ಲಲು ಗಂಡನೋ, ಗೆಳೆಯನೋ ಈ ರೀತಿ ಮಾತನಾಡುತ್ತಾನೆ. ಆದರೆ ಇದರಾಚೆಗೆ ಸುಳ್ಳು ಯಾಕೆ ಹೇಳಿದ ಎಂಬುದು ಯಾರಿಗೂ ಗೊತ್ತಿಲ್ಲ, ಅದು ಆತನೊಬ್ಬನಿಗೇ ಗೊತ್ತಿರುವುದು ಅಷ್ಟೇ ಸತ್ಯ.
ಧೂಮಪಾನದ ಬಗ್ಗೆ – ಅನೇಕ ಬಾರಿ ಪುರುಷ ತಾನು ಎಂದಿಗೂ ಧೂಮಪಾನ ಮಾಡಿಯೇ ಇಲ್ಲ ಎಂದು ಹೇಳಿಯೇ ತನ್ನ ಸಂಗಾತಿಯನ್ನು ಮೆಚ್ಚಿಸಲು ಪ್ರಯತ್ನ ಪಡುತ್ತಾನೆ. ಅಥವಾ ಇನ್ನೂ ಮುಂದಕ್ಕೆ ಹೋಗಿ ಮದುವೆಯ ನಂತರ ಧೂಮಪಾನ ಮಾಡುವುದಿಲ್ಲ ಎಂದು ಸಲೀಸಾಗಿ ಸುಳ್ಳು ಹೇಳುತ್ತಾನೆ. ಪುರುಷರ ಈ ಸುಳ್ಳಿನಲ್ಲಿ, ಎಷ್ಟು ಸತ್ಯಾಂಶ ಇದೆ ಎಂಬವುದು ಅವರಲ್ಲೇ ಇರುತ್ತದೆ.