ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್ ; ಒಂದೇ ತಿಂಗಳಲ್ಲಿ DA ಹೆಚ್ಚಳ, DA ಬಾಕಿ ಪಾವತಿ, PF ಬಡ್ಡಿ ಘೋಷಣೆ!!!

ಕೇಂದ್ರ ಸರ್ಕಾರವು ಉದ್ಯೋಗಿಗಳಿಗೆ ಮೂರು ಬಂಪರ್ ಉಡುಗೊರೆಗಳನ್ನು ನೀಡುವ ಸಾಧ್ಯತೆ ಬಹುತೇಕ ಹೆಚ್ಚಿದೆ. ಡಿಎ ಹೆಚ್ಚಳ ಮತ್ತು ಡಿಎ ಬಾಕಿ ಪಾವತಿಯೊಂದಿಗೆ ಪಿಎಫ್ ಬಡ್ಡಿಯನ್ನು ಖಾತೆಗಳಿಗೆ ಜಮಾ ಮಾಡುವ ಸಾಧ್ಯತೆ ಇದೆ. ನೌಕರರು ಸೆಪ್ಟೆಂಬರ್ ಮೊದಲ ವಾರದಲ್ಲಿ ಡಿಎ ಹೆಚ್ಚಳದ ಘೋಷಣೆಯನ್ನು ಮಾಡಲಾಗುವ ನಿರೀಕ್ಷೆಯಲ್ಲಿದ್ದಾರೆ. ಅನಂತರ ಡಿಎ ಬಾಕಿ ಮತ್ತು ಪಿಎಫ್ ಬಡ್ಡಿಯ ಪಾವತಿಯನ್ನು ಜಮೆ ಮಾಡಲಾಗುತ್ತದೆ.

ಕೇಂದ್ರ ಸರ್ಕಾರಿ ನೌಕರರು ಈಗ ಶೇಕಡಾ 34ರಷ್ಟು ಡಿಎ ಪಡೆಯುತ್ತಿದ್ದಾರೆ. ಸಾಮಾನ್ಯವಾಗಿ, ಕೇಂದ್ರ ಸರ್ಕಾರಿ ನೌಕರರು ವಾರ್ಷಿಕವಾಗಿ ಎರಡು ಡಿಎಗಳನ್ನು ಹೊಂದಿರುತ್ತಾರೆ. ಕೇಂದ್ರವು ಈ ವರ್ಷದ ಮಾರ್ಚ್ ನಲ್ಲಿ ಮೊದಲ ಡಿಎಯನ್ನು ಘೋಷಿಸಿತ್ತು. ಇದು ಜನವರಿಯಿಂದ ಜಾರಿಗೆ ಬಂದಿದೆ. ಎರಡನೇ ಡಿಎಯ ದಿನಾಂಕವನ್ನು ಕೇಂದ್ರವು ಇನ್ನೂ ಘೋಷಿಸಿಲ್ಲ. ಆಗಸ್ಟ್ ತಿಂಗಳು ಕೂಡ ಕೊನೆಗೊಳ್ಳುತ್ತಿರುವುದರಿಂದ, ಉದ್ಯೋಗಿಗಳು ಸೆಪ್ಟೆಂಬರ್ ಮೊದಲ ವಾರದಲ್ಲಿ ಎರಡನೇ ಡಿಎ ಹೆಚ್ಚಳವನ್ನ ನಿರೀಕ್ಷಿಸುತ್ತಾರೆ. ಅಖಿಲ ಭಾರತ ಗ್ರಾಹಕ ಪ್ರಶಸ್ತಿ ಸೂಚ್ಯಂಕ (AICPI) ಜೂನ್‌ನಲ್ಲಿ 129.2 ಪಾಯಿಂಟ್‌ಗಳಷ್ಟಿತ್ತು. ಏಳನೇ ವೇತನ ಆಯೋಗವು ಶೇಕಡಾ ೪ ರಷ್ಟು ಡಿಎ ಹೆಚ್ಚಳವನ್ನು ಶಿಫಾರಸು ಮಾಡುವ ಸಾಧ್ಯತೆಯಿದೆ.

ಕೋವಿಡ್ ಅವಧಿಯಲ್ಲಿ ಕೇಂದ್ರವು ನೌಕರರಿಗೆ ಬಾಕಿ ಇರುವ 18 ತಿಂಗಳ ಡಿಎ ಬಾಕಿಯನ್ನು ಪಾವತಿಸಬೇಕು. ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ ಕೇಂದ್ರವು ಮೇ 2020 ರಿಂದ ಜೂನ್ 2021ರವರೆಗೆ ಡಿಎ ಅನ್ನು ಅಮಾನತುಗೊಳಿಸಿದೆ. ಈ ಬಾಕಿಗಳನ್ನು ಸೆಪ್ಟೆಂಬರ್’ನಲ್ಲಿಯೇ ಉದ್ಯೋಗಿಗಳ ಖಾತೆಗೆ ಜಮಾ ಮಾಡುವ ಸಾಧ್ಯತೆಯಿದೆ. ಈ ರೀತಿಯಾದ್ರೆ, ಉದ್ಯೋಗಿಗಳು ಒಮ್ಮೆಲೇ ದೊಡ್ಡ ಮೊತ್ತದ ಹಣವನ್ನು ಪಡೆಯುತ್ತಾರೆ.

ಕೇಂದ್ರೀಯ ಟ್ರಸ್ಟಿಗಳ ಮಂಡಳಿಯು ನೌಕರರ ಭವಿಷ್ಯ ನಿಧಿಯ ಮೇಲಿನ 2021-22 ರ ಬಡ್ಡಿದರವನ್ನು ಶೇಕಡಾ 8.10 ಕ್ಕೆ ನಿಗದಿಪಡಿಸಿದೆ. ಬಡ್ಡಿಯನ್ನು ಸೆಪ್ಟೆಂಬರ್ ನಲ್ಲಿ ಉದ್ಯೋಗಿಗಳ ಪಿಎಫ್ ಖಾತೆಗಳಿಗೆ ಜಮಾ ಮಾಡಲಾಗುತ್ತದೆ.

Leave A Reply

Your email address will not be published.