BIGG BREAKING NEWS: ಗಣೇಶೋತ್ಸವಕ್ಕೆ ಮಾರ್ಗಸೂಚಿ ಪ್ರಕಟ !!! ಇಲ್ಲಿದೆ ಡಿಟೇಲ್ಸ್

ಬೆಂಗಳೂರು:ನಾಡಿನ ಜನತೆ ಇನ್ನೇನು ಗೌರಿ-ಗಣೇಶ ಹಬ್ಬದ ತಯಾರಿಯ ಸಂಭ್ರಮದಲ್ಲಿದ್ದಾರೆ. ಇದಕ್ಕಾಗಿ ನಗರದ ಜನತೆ ಕಾತುರದಿಂದ ಕಾಯುತ್ತಿದ್ದಾರೆ. ಮಕ್ಕಳಿಗಂತೂ ಗಣೇಶ ಹಬ್ಬ ಬಂತೆಂದರೆ ಖುಷಿಯೋ ಖುಷಿ. ಕಾಯಿ ಕಡುಬು ತಿಂದು ಸಂಭ್ರಮಿಸುವ ಕ್ಷಣಗಳೆಂದರೆ ತಪ್ಪಿಲ್ಲ. ಅಷ್ಟು ಮಾತ್ರವಲ್ಲದೇ, ನಗರದ ಪ್ರಮುಖ ಬೀದಿಗಳಲ್ಲಿ ಗಣೇಶನ ಕೂರಿಸಿ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಾರೆ.

 

ಕೊರೊನಾದಿಂದ ಕಳೆದ ಎರಡು ವರ್ಷ ಗಣೇಶ ಹಬ್ಬವನ್ನು ಅದ್ದೂರಿಯಾಗಿ ಆಚರಣೆ ಮಾಡುವುದಕ್ಕೆ ಆಗಿಲ್ಲ. ಆದರೆ ಈ ಬಾರಿ ಎಲ್ಲದಕ್ಕೂ ಅನುಮತಿಯನ್ನು ಸರ್ಕಾರ ನೀಡಿದೆ. ಆದರೆ ನಗರದ ಪ್ರಮುಖ ಬೀದಿಗಳಲ್ಲಿ 15 ದಿನಕ್ಕಿಂತ ಹೆಚ್ಚು ಗಣೇಶನನ್ನು ಕೂರಿಸುವಂತಿಲ್ಲ. ಆಗಸ್ಟ್‌ 31ರಿಂದ ಸೆಪ್ಟೆಂಬರ್‌ 15 ದಿನಗಳ ವರೆಗೆ ಮಾತ್ರ ಗಣೇಶನ ಕೂರಿಸಲು ಅವಕಾಶ ನೀಡಲಾಗಿದೆ ಎಂದು ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ಹೇಳಿದ್ದಾರೆ.

Leave A Reply

Your email address will not be published.