ಕಿರುತೆರೆಯಿಂದ ವಿಷ್ಣುವರ್ಧನ್ ಅಳಿಯ ಬ್ಯಾನ್ | ಕಿರುತೆರೆ ನಿರ್ಮಾಪಕ ಸಂಘದವರ ನಿರ್ಧಾರವೇನು?

ಕಿರುತೆರೆಯ ಧಾರಾವಾಹಿ ಜೊತೆ ಜೊತೆಯಲಿ ವಿಷಯ ಈಗ ತಾರಕಕ್ಕೇರಿದ್ದು, ನಟ ಅನಿರುದ್ಧ ಕಿಕ್‌ ಔಟ್‌ ಮಾಡಿದ ವಿಚಾರವಾಗಿ ನಿರ್ಮಾಪಕ ಸಂಘದ ಅಧ್ಯಕ್ಷ  ಭಾಸ್ಕರ್‌ ಮಾಧ್ಯಮಗಳೊಂದಿಗೆ ಮಾತನಾಡಿ ಸ್ಪಷ್ಟನೆಯೊಂದನ್ನು ನೀಡಿದ್ದಾರೆ. ನಟ ಅನಿರುದ್ಧ ಬ್ಯಾನ್‌ ಮಾಡಿಲ್ಲ, 2 ವರ್ಷಗಳ ಕಾಲ ಕಿರುತೆರೆಯಿಂದ ದೂರ ಇಡಲಾಗಿದೆ ಎಂದು ಹೇಳಿದ್ದಾರೆ. ಸ್ಕ್ರಿಪ್‌ ವಿಚಾರಕ್ಕೆ ನಿರ್ದೇಶಕ ಮಧು ಅವರಿಗೆ ಮೂರ್ಖ ಎಂದು ಕರೆದು, ನಿಂದಿಸಿ,
ಧಾರವಾಹಿಯ ದೃಶ್ಯ ಬದಲಾವಣೆ ಮಾಡುವಂತೆ ಜಗಳ ಮಾಡಿದ್ದಾರೆ.  ಇದರಿಂದಾಗಿ ನಟ ಅನಿರುದ್ಧ ಧಾರವಾಹಿ ಸೆಟ್‌ನಿಂದ ಹೊರಗೆ ನಡೆದಿದ್ದಾರೆ. ಈ ರೀತಿ ಹಲವು ಬಾರಿ ಆಡಿದ ಜಗಳಕ್ಕೆ ನಿರ್ಮಾಪಕ ಆರೂರು ಜಗದೀಶ್‌ ಬೇಸತ್ತು, ಕಿರುತೆರೆ ನಿರ್ಮಾಪಕ ಸಂಘದ ಸಭೆ ಕೆರೆದು  ಚರ್ಚೆ ನಡೆಸಿ ಕಿರುತೆರೆಯಲ್ಲಿ ಅವಕಾಶ ಕೊಡಬಾರದು ನಿರ್ಧಾರಿಸಿದ್ದಾರೆ. 

 

ಹಾಗಾಗಿ ಚರ್ಚೆ ನಡೆದು, ನಟ ಅನಿರುದ್ಧನನ್ನು ಬ್ಯಾನ್‌ ಮಾಡಿಲ್ಲʼ 2 ವರ್ಷಗಳ ಕಾಲ ದೂರ ಇಟ್ಟಿದ್ದೇವೆ  ಮಾಧ್ಯಮಗಳೊಂದಿಗೆ ಮಾತನಾಡಿ ನಿರ್ಮಾಪಕ ಸಂಘದ ಅಧ್ಯಕ್ಷ  ಭಾಸ್ಕರ್‌ ಸ್ಪಷ್ಟನೆ ನೀಡಿದ್ದಾರೆ.

Leave A Reply

Your email address will not be published.