ನಟಿ ತಾಪ್ಸಿಗಿಂತ ನನ್ನ ‘ಮೊಲೆ’ ದೊಡ್ಡದಿದೆ – ಬಾಲಿವುಡ್ ನಿರ್ದೇಶಕ ಅನುರಾಗ್ ಕಶ್ಯಪ್
ಬಾಲಿವುಡ್ ನ ಖ್ಯಾತ ನಿರ್ದೇಶಕ ಅನುರಾಗ್ ಕಶ್ಯಪ್ ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿದ್ದಾರೆ. ಇದು ಮೋಸ್ಟ್ ಟ್ಯಾಲೆಂಟೆಡ್ ನಟಿ ತಾಪ್ಸಿ ಪನ್ನು ಕುರಿತದ್ದಾಗಿದೆ. ಅಂದ ಹಾಗೇ ಅನುರಾಗ್ ನಿರ್ದೇಶನದ ದೋಬಾರಾ ಸಿನಿಮಾ ಬಿಡುಗಡೆಗೆ ರೆಡಿಯಾಗಿದೆ. ಈ ಸಿನಿಮಾದ ನಾಯಕಿ ತಾಪ್ಪಿ ಪನ್ನು.
ಮಹಿಳಾ ಪ್ರಧಾನ ಸಿನಿಮಾ ಇದು. ಹಾಗಾಗಿ ಈ ಸಿನಿಮಾದಲ್ಲಿ ತಾಪ್ಸಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸದ್ಯ ತಾಸ್ಸಿ ಪನ್ನು ಮತ್ತು ಅನುರಾಗ್ ಕಶ್ಯಪ್ ಇಬ್ಬರು ಸಿನಿಮಾದ ಪ್ರಮೋಷನ್ ನಲ್ಲಿ ಬ್ಯುಸಿಯಾಗಿದ್ದಾರೆ. ಅನೇಕ ಮಾಧ್ಯಮಗಳಿಗೆ ಸಂದರ್ಶನಗಳನ್ನು ನೀಡುತ್ತಿದ್ದಾರೆ. ಈ ವೇಳೆ ಅನುರಾಗ್ ಕಶ್ಯಪ್ ತಾಪ್ಸಿ ಪನ್ನು ಬಗ್ಗೆ ಹೇಳಿದ್ದ ಮಾತು ಭಾರೀ ವೈರಲ್ ಆಗಿದೆ. ಈ ಹೇಳಿಕೆಗೆ ನೆಟ್ಟಿಗರು ನಾನಾರೀತಿ ಕಾಮೆಂಟ್ ಮಾಡುತ್ತಿದ್ದಾರೆ.
ಅನುರಾಗ್ ಕಶ್ಯಪ್ ಮತ್ತು ತಾಪ್ಸಿ ಪನ್ನು ಇಬ್ಬರು ಸಂದರ್ಶನ ನೀಡುವ ವೇಳೆ ರನ್ವೀರ್ ಸಿಂಗ್ ವಿಚಾರ ಬಂದಿದೆ. ಇತ್ತೀಚಿಗಷ್ಟೆ ರನ್ವೀರ್ ಸಿಂಗ್ ಬೆತ್ತಲಾಗಿ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಹಾಗಾಗಿ ಕೆಲವು ಕಡೆ ಇದರ ಬಗ್ಗೆ ಪರ ವಿರೋಧದ ಚರ್ಚೆ ಆಗುತ್ತಿದೆ. ಅನೇಕರು ರನ್ವೀರ್ ಸಿಂಗ್ ಪರ ಮಾತಾಡಿದರೆ, ಇನ್ನು ಕೆಲವರು ನೆಗೆಟಿವ್ ಕಮೆಂಟ್ ಮಾಡಿದ್ದಾರೆ. ಅಲ್ಲದೇ ಬೆತ್ತಲಾಗಿ ಕ್ಯಾಮರಾ ಮುಂದೆ ಪೋಸ್ ಕೊಟ್ಟಿದ್ದಕ್ಕೆ ರನ್ವೀರ್ ವಿರುದ್ಧ ಎಫ್ ಐ ಆರ್ ಕೂಡ ದಾಖಲಾಗಿದೆ.
ರನ್ವೀರ್ ಸಿಂಗ್ ಫೋಟೋಶೂಟ್ ಅನ್ನು ಅನುರಾಗ್ ಕಶ್ಯಪ್ ಸಮರ್ಥಿಕೊಂಡಿದ್ದಾರೆ. ಈ ವೇಳೆ ನಿರೂಪಕ ಅನುರಾಗ್ ಕಶ್ಯಪ್, ರನ್ವೀರ್ ಸಿಂಗ್ ಹಾಗೆ ಪೋಸ್ ಕೊಡುವ ಬಗ್ಗೆ ತಮಾಷೆ ಮಾಡಿದರು. ಆಗ ತಕ್ಷಣ ತಾಪ್ಸಿ ಪನ್ನು ‘ನಾವು ಇಲ್ಲಿ ಹಾರರ್ ಶೋ ಪ್ರಾರಂಭಿಸುವುದು ಬೇಡ’ ಎಂದು ಹೇಳಿದರು. ಆಗ ನಿರೂಪಕ ತಾಪ್ಸಿ ಪನ್ನು ಹೊಟ್ಟೆಕಿಚ್ಚು ಪಡುತ್ತಿದ್ದಾರೆ ಎಂದು ಹೇಳಿದರು. ಆಗ ಅನುರಾಗ್ ಕಶ್ಯಪ್ ‘ಹೌದು ಅವಳಿಗೆ ಹೊಟ್ಟೆಯುರಿಯಾಗುತ್ತಿದೆ. ಯಾಕೆಂದರೆ ಅವಳಿಗಿಂತ ನಾನು ದೊಡ್ಡ ಸ್ತನ ಹೊಂದಿದ್ದೀನಿ ಅಂತ’ ಅಂತ ಹೇಳಿದರು.
ಅನುರಾಗ್ ಕಶ್ಯಪ್ ಮಾತು ನಿಜಕ್ಕೂ ತಾಪ್ಪಿಗೆ ಶಾಕ್ ನೀಡಿದೆ. ಆದರೆ ಆಕೆ ಅಲ್ಲಿ ಇದನ್ನು ಸೀರಿಯಸ್ಸಾಗಿ ತಗೊಂಡಿಲ್ಲ. ಈ ಇಬ್ಬರ ಸಂದರ್ಶನದ ಬಳಿಕ ನೆಟ್ಟಿಗರು ಹಲವು ಕಾಮೆಂಟ್ ಮಾಡುತ್ತಿದ್ದಾರೆ. ಅನೇಕರು ಅನುರಾಗ್ ಕಾಲೆಳೆಯುತ್ತಿದ್ದಾರೆ. ಮತ್ತೊಬ್ಬ ಅಭಿಮಾನಿ ಕಾಮೆಂಟ್ ಮಾಡಿ ಇಂಥ ಸುಂದರ ಮಾಹಿತಿ ನೀಡಿದ್ದಕ್ಕೆ ತುಂಬಾ ಧನ್ಯವಾದಗಳು ಎಂದು ಹೇಳುತ್ತಿದ್ದಾರೆ. ಮತ್ತೊಬ್ಬ ವ್ಯಕ್ತಿ ಕಾಮೆಂಟ್ ಮಾಡಿ ಭಾವನಾತ್ಮಕವಾಗಿ ಡ್ಯಾಮೇಜ್ ಮಾಡಿದ್ರಿ ಎಂದು ಹೇಳಿದ್ದಾರೆ. ಆದರೆ ಈ ಬಗ್ಗೆ ತಾಪ್ಸಿ ಇಲ್ಲಿಯವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.