ಸರಕಾರಿ ಜಮೀನಿನಲ್ಲಿ ಮನೆ ನಿರ್ಮಿಸಿದವರಿಗೆ ಸರಕಾರದಿಂದ ಸಿಹಿ ಸುದ್ದಿ – ಕಂದಾಯ ಸಚಿವ ಆರ್ ಅಶೋಕ್
ಸರಕಾರಿ ಜಮೀನಿನಲ್ಲಿ ಮನೆ ನಿರ್ಮಿಸಿದವರಿಗೆ ಸರಕಾರ ಭಾರೀ ಸಿಹಿ ಸುದ್ದಿಯೊಂದನ್ನು ನೀಡಿದ್ದಾರೆ. ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ನಾಡಪ್ರಭು ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಆರ್ ಅಶೋಕ್ ಅವರು, ಸರ್ಕಾರಿ ಜಮೀನಿನಲ್ಲಿ ಮನೆ ನಿರ್ಮಿಸಿಕೊಂಡವರು ಅರ್ಜಿ ಹಾಕಿದರೆ ಸಕ್ರಮ ಮಾಡಿಕೊಡಲಾಗುವುದು ಎಂದು ಹೇಳಿದ್ದಾರೆ.
ಬಗರ್ ಹುಕುಂ ಜಮೀನುಗಳನ್ನು ಸಕ್ರಮ ಮಾಡಿಕೊಡಲಾಗುವುದು ಎಂದು ಸಿಹಿ ಸುದ್ದಿ ನೀಡಿದ್ದಾರೆ.
ನಾನು ಸಚಿವರಾದ ನಂತರ 300ಕ್ಕೂ ಹೆಚ್ಚು ಗ್ರಾಮಗಳನ್ನು ಕಂದಾಯ ಗ್ರಾಮಗಳನ್ನಾಗಿ ಮಾಡಿದ್ದು, 50 ಲಕ್ಷ ರೈತ ಕುಟುಂಬಗಳಿಗೆ ಅವರ ಜಮೀನಿನ ದಾಖಲೆಗಳನ್ನು ಮನೆಮನೆಗೆ ನೀಡಲಾಗಿದೆ ಎಂದು ತಿಳಿಸಿದರು.
ಬಗರ್ ಹುಕುಂ ಜಮೀನು ಸಕ್ರಮ ಕುರಿತಾಗಿ ಮಾತನಾಡಿದ ಸಚಿವರು, ರಾಜ್ಯದಲ್ಲಿ ಯಾರು ಸರ್ಕಾರಿ ಜಮೀನಿನಲ್ಲಿ ಮನೆ ನಿರ್ಮಿಸಿಕೊಂಡಿದ್ದಾರೋ ಅವರು ಅರ್ಜಿ ಹಾಕಿದರೆ ಸಕ್ರಮ ಮಾಡಿಕೊಡಲಾಗುತ್ತದೆ. ಬಗರ್ ಹುಕುಂ ಜಮೀನನ್ನು ಸಕ್ರಮ ಮಾಡಿಕೊಡಲಾಗುವುದು ಎಂದು ಹೇಳಿದರು.