RDPR ನಿಂದ ಉದ್ಯೋಗಾವಕಾಶ : ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ, ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಕೆ

ಕಾರ್ಯಪಾಲಕ ಇಂಜಿನಿಯರ್, ಗ್ರಾಮೀಣ ಕುಡಿಯುವ
ನೀರು ಮತ್ತು ನೈರ್ಮಲ್ಯ ಇಲಾಖೆ, ಚಾಮರಾಜನಗರ ವಿಭಾಗ ರವರಿಂದ ಚಾಮರಾಜನಗರ ಜಿಲ್ಲೆಯ ಗ್ರಾಮೀಣ ಕುಡಿಯುವ ನೀರಿನ ಗುಣಮಟ್ಟ ಪರೀಕ್ಷೆಗಾಗಿ ಜಿಲ್ಲಾ ಪ್ರಯೋಗಾಲಯಕ್ಕೆ ಹಿರಿಯ ವಿಶ್ಲೇಷಕ ಹುದ್ದೆ ನೇಮಕ ಮಾಡಲು ಅಧಿಸೂಚನೆ ಪ್ರಕಟಿಸಲಾಗಿದೆ. ಈ ಹುದ್ದೆಯನ್ನು ಹೊರಗುತ್ತಿಗೆ ಆಧಾರದಲ್ಲಿ ನೇಮಕ ಮಾಡಲಿದ್ದು, ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ.

ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 06-08-2022

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 17-08-2022

ಉದ್ಯೋಗ ಇಲಾಖೆ : ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ
ಹುದ್ದೆ ಹೆಸರು : ಹಿರಿಯ ವಿಶ್ಲೇಷಕ (Senior Analyst)
ಹುದ್ದೆಯ ಸ್ಥಳ : ಚಾಮರಾಜನಗರ

ವಿದ್ಯಾರ್ಹತೆ : ಎಂಎಸ್ಸಿ ಇನ್ ಕೆಮಿಸ್ಟ್ರಿ / ಬಯೋಕೆಮಿಸ್ಟ್ರಿ / ಮೈಕ್ರೋಬಯೋಲಜಿ / ಎನ್ವಿರಾನೆಂಟಲ್ ಸೈನ್ಸ್ / ಬಯೋಟೆಕ್ನಾಲಜಿ / ಬಿಇ ಇನ್ ಎನ್ವಿರಾನೆಂಟಲ್ ಅನ್ನು ಕನಿಷ್ಠ ಶೇಕಡ.60 ಅಂಕಗಳೊಂದಿಗೆ ಪಾಸ್ ಮಾಡಿರಬೇಕು. ನೀರಿನ ಗುಣಮಟ್ಟ ಪರೀಕ್ಷಕರ ಹುದ್ದೆ ಕಾರ್ಯಾನುಭವ ಇರುವವರಿಗೆ ಶೇಕಡ.50 ಅಂಕಗಳನ್ನು ಗಳಿಸಿದ್ದರೂ ಸಹ ಹುದ್ದೆಗೆ ಆಧ್ಯತೆ ನೀಡಲಾಗುತ್ತದೆ.

ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು:
ವಿದ್ಯಾರ್ಹತೆ ದಾಖಲೆಗಳು, ಕಾರ್ಯಾನುಭವ ದಾಖಲೆಗಳು, ಜನ್ಮ ದಿನಾಂಕ ದಾಖಲೆ ಅಥವಾ
ಎಸ್‌ಎಸ್ಎಲ್‌ಸಿ ಅಂಕಪಟ್ಟಿ ಇತರೆ.

ಸೇವಾ ಅನುಭವ : 3 ವರ್ಷ ನೀರಿನ ಗುಣಮಟ್ಟ ಪರೀಕ್ಷಾ ಪ್ರಯೋಗಾಲಯದಲ್ಲಿ ಸೇವೆ ಸಲ್ಲಿಸಿರಬೇಕು. ಹಾಗೂ ಎನ್ಎಬಿಎಲ್ ಪ್ರಮಾಣ ಪತ್ರ ಪಡೆದಿರುವ ಪ್ರಯೋಗಾಲಯದಲ್ಲಿ ಸೇವೆ ಸಲ್ಲಿಸಿದವರಿಗೆ ಮೊದಲ ಆಧ್ಯತೆ ಮತ್ತು ಎಂಎಸ್ ಆಫೀಸ್ ಬಳಕೆ ಮಾಡುವ ಕಂಪ್ಯೂಟರ್ ಜ್ಞಾನವನ್ನು ಹೊಂದಿರಬೇಕು.

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕನಿಷ್ಠ ವಯಸ್ಸಿನ ಮಿತಿ 25 ವರ್ಷ, ಗರಿಷ್ಠ ವಯಸ್ಸಿನ ಮಿತಿ 45 ವರ್ಷ ಮೀರಿರಬಾರದು.

ಅರ್ಜಿ ಸಲ್ಲಿಕೆ : ಆಸಕ್ತರು ತಮ್ಮ ವಿದ್ಯಾರ್ಹತೆ, ಕಾರ್ಯಾನುಭವ ದಾಖಲೆಗಳೊಂದಿಗೆ ಲೇಟೆಸ್ಟ್ ಬಯೋಡಾಟಾವನ್ನು ಈ ಕೆಳಗಿನ ವಿಭಾಗ ಕಚೇರಿಗೆ ಸಲ್ಲಿಸಬೇಕು.

ಅರ್ಜಿ ತಲುಪಿಸಬೇಕಾದ ವಿಳಾಸ : ಕಾರ್ಯಪಾಲಕ ಇಂಜಿನಿಯರ್‌ರವರ ಕಛೇರಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ನ್ಯಾಯಾಲಯದ ರಸ್ತೆ, ಚಾಮರಾಜನಗರ ವಿಭಾಗ, ಚಾಮರಾಜನಗರ -571313

ದೂರವಾಣಿ ಸಂಖ್ಯೆ: 08226 -226054
ಇ-ಮೇಲ್: eerdwsd,chn@gmail.com
ಅಭ್ಯರ್ಥಿಗಳು ನಿಗಧಿತ ದಿನಾಂಕದೊಳಗೆ ಅರ್ಜಿ ತಲುಪಿಸಬೇಕು. ನಂತರ ಬಂದ ಯಾವುದೇ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ.

Leave A Reply

Your email address will not be published.