ಮಂಗಳೂರು : ಆಳಸಮುದ್ರದ ಮೀನುಗಾರಿಕೆ ತೆರಳಿದ್ದ ದೋಣಿ ಅವಘಡ |
ಮಂಗಳೂರು : ಕಳೆದ ಕೆಲವು ದಿನಗಳಿಂದ ಸಮುದ್ರದಲ್ಲಿ ಭಾರಿ ಗಾಳಿ ಬೀಸುತ್ತಿದ್ದು, ಸಮುದ್ರ ಪ್ರಕ್ಷುಬ್ಧವಾಗಿದ್ದರಿಂದ
ಆಳ ಸಮುದ್ರದ ಮೀನುಗಾರಿಕೆ ತೆರಳಿದ್ದ ಬೋಟೊಂದು ಅವಘಡಕ್ಕೀಡಾಗಿದ್ದ ಘಟನೆ ನಡೆದಿದೆ. ಈ ಘಟನೆಯಿಂದ ಮೀನುಗಾರರಿಗೆ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ.
ಆಳ ಸಮುದ್ರಕ್ಕೆ ಹೋದ ಮೀನುಗಾರಿಕಾ ದೋಣಿ ತಳಭಾಗದಲ್ಲಿ ತೂತಾಗಿದ್ದ ಪರಿಣಾಮ, ಮುಳುಗಡೆಯಾದ ಘಟನೆ ನಿನ್ನೆ ಸಂಜೆ ನಡೆದಿದೆ. ಈ ಸಂದರ್ಭದಲ್ಲಿ ಬೋಟ್ ನಲ್ಲಿದ್ದ ಎಲ್ಲಾ 10 ಮಂದಿ ಮೀನುಗಾರರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ ಬೋಟ್ ಸಂಪೂರ್ಣ ಮುಳುಗಡೆಯಾಗಿದ್ದು ಲಕ್ಷಾಂತರ ರೂ ನಷ್ಟ ಸಂಭವಿಸಿದೆ.
ಜೈ ಶ್ರೀರಾಮ್ ಎಂಬ ಹೆಸರಿನ ಕೃಷ್ಣ ಕುಮಾರ್ ಮಾಲಕತ್ವದ ಮೀನುಗಾರಿಕಾ ದೋಣಿ. ನಿನ್ನೆ ಬೆಳಿಗ್ಗೆ ಮೀನುಗಾರಿಕೆಗೆ ತೆರಳಿದ್ದು, ಆಳ ಸಮುದ್ರ ಭಾಗದಲ್ಲಿ ಮೀನುಗಾರಿಕೆ ನಡೆಸುತ್ತಿದ್ದಾಗ ಏಕಾ ಏಕಿ ತೂತಾಗಿ ನೀರು ಒಳ ನುಗ್ಗಿತ್ತು. ಕೂಡಲೇ ದೋಣಿಯಲ್ಲಿದ್ದವರು ಆಸು-ಪಾಸಿನಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ಮೀನುಗಾರಿಕಾ ದೋಣಿಯವರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಆ ಬೋಟ್ ಪಕ್ಕ ಬಂದ ಬೇರೆ ಬೋಟ್ ಮವರು ಅಪಘಾತಕ್ಕೆ ಸಿಲುಕಿದ್ದ ದೋಣಿಯಲ್ಲಿದ್ದವರನ್ನೂ ರಕ್ಷಿಸಿ ದಡಕ್ಕೆ ಕರೆ ತಂದಿದ್ದಾರೆ.
ಈ ಘಟನೆಯಲ್ಲಿ ಯಾರಿಗೂ ಯಾವುದೇ ಅಪಾಯ ಸಂಭವಿಸಿಲ್ಲ.