ಬಾಲಿವುಡ್ ನಿರ್ಮಾಪಕನಿಂದ ಪ್ರವೀಣ್ ನೆಟ್ಟಾರ್ ಕುಟುಂಬಕ್ಕೆ ಆರ್ಥಿಕ ನೆರವು

ದೆಹಲಿ: ಕರಾವಳಿಯ ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ಇತ್ತೀಚೆಗೆ ದುಷ್ಕರ್ಮಿಗಳ ಭೀಕರ ದಾಳಿಯಿಂದ ಹತ್ಯೆಗೊಳಗಾದ ಪ್ರವೀಣ್ ನೆಟ್ಟಾರ್ ಅವರ ಕುಟುಂಬಕ್ಕೆ ಹಲವು ಮೂಲಗಳಿಂದ ಆಥಿ೯ಕ ನೆರವಿನ ಮಹಾಪೂರವೇ ಹರಿದು ಬರುತ್ತಿದೆ. ಇದೀಗ ಬಾಲಿವುಡ್ ನಿರ್ಮಾಪಕರಾದ ಮನೀಶ್ ಮುಂದ್ರಾ ರವರು ಸಹಾಯ ಹಸ್ತ ದ ನೆರವು ನೀಡಿದ್ದಾರೆ.

 

ಬಾಲಿವುಡ್ ನಿರ್ಮಾಪಕ ಹಾಗೂ ಉದ್ಯಮಿ ಆಗಿರುವ ಮನೀಶ್ ಮುಂದ್ರಾ, ಪ್ರವೀಣ್ ಕುಟುಂಬದ ಬ್ಯಾಂಕ್ ಖಾತೆಯ ಮಾಹಿತಿ ಪಡೆದು, ರೂ.11 ಲಕ್ಷ ಮೊತ್ತವನ್ನು ಪ್ರವೀಣ್ ಅವರ ಹೆಂಡತಿಯ ಬ್ಯಾಂಕ್ ಖಾತೆಗೆ ವರ್ಗಾಯಿಸಿರುವುದಾಗಿ ಟ್ವೀಟ್ ಮಾಡಿದ್ದಾರೆ.

ಕೊರೋನಾ ಸಂದರ್ಭದಲ್ಲೂ ಪಿಪಿಇ ಕಿಟ್ ಗಳನ್ನು ಉಚಿತವಾಗಿ ಕೊಡಿಸಿದ್ದರು. ನ್ಯೂಟನ್, ಧನಕ್ ಮುಂತಾದ ಅತ್ಯುತ್ತಮ ಚಿತ್ರಗಳನ್ನು ಮನೀಶ್ ಮುಂದ್ರಾ ನಿಮಾ೯ಣ ಮಾಡಿದ್ದಾರೆ.

Leave A Reply

Your email address will not be published.