Breaking News । ನಾಳೆ, ಆಗಸ್ಟ್ 3 ರಂದು ದಕ್ಷಿಣ ಕನ್ನಡದ ಈ ಎರಡು ತಾಲೂಕಿನ ಶಾಲಾ ಕಾಲೇಜಿಗೆ ರಜೆ
ಮಂಗಳೂರು: ಭಾರಿ ಮಳೆ ದಕ್ಷಿಣ ಕನ್ನಡದ ಈ ತಾಲೂಕುಗಳ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ರಾಜೇಂದ್ರ ಕುಮಾರ್ ಅವರು ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿದ್ದಾರೆ.
ನಿನ್ನೆ ಸಂಜೆಯಿಂದ ಸುರಿದ ಮೇಘ ಸ್ಫೋಟದ ರೀತಿಯ ಮಳೆಗೆ ಸುಬ್ರಹ್ಮಣ್ಯ ಮತ್ತದರ ಆಸು ಪಾಸು ತತ್ತರಿಸಿ ಹೋಗಿತ್ತು. ಸುಳ್ಯದ ಹಲವು ಕಡೆ ಮಹಾಮಳೆ ಬಂದಿತ್ತು. ಸುಬ್ರಹ್ಮಣ್ಯ ಸುಳ್ಯದ ನದಿಗಳು ಉಕ್ಕಿದ್ದು, ದೇವಸ್ಥಾನದ ಅಂಚಿಗೂ ನೀರು ಬಂದಿತ್ತು. ಒಂದು ಕಡೆ ಮಳೆಯಿಂದಾಗಿ ಮನೆಯೊಂದರ ಮೇಲೆ ಗುಡ್ಡ ಕುಸಿದು ಮೂವರು ನಾಪತ್ತೆಯಾಗಿದ್ದರು. ಹಳ್ಳ ಕೊಳ್ಳಗಳು ತುಂಬಿ ಹರಿಯುವ ಕಾರಣದಿಂದ ಎರಡು ತಾಲೂಕುಗಳಿಗೆ ರಜೆ ಘೋಷಣೆ ಮಾಡಲಾಗಿದೆ.
ಸುಳ್ಯ ಮತ್ತು ಕಡಬ ತಾಲೂಕಿನ ಎಲ್ಲ ಶಾಲಾ-ಕಾಲೇಜುಗಳಿಗೆ, ಇಂದು ಮಂಗಳವಾರ ರಜೆ ನೀಡಿ ಜಿಲ್ಲಾಧಿಕಾರಿಯವರು ಘೋಷಣೆ ಮಾಡಿದ್ದಾರೆ. ಅಲ್ಲದೆ ತಾಲೂಕಿನ ಎಲ್ಲಾ ಅಂಗನವಾಡಿಗಳು ಕೂಡಾ ನಾಳೆ ಮುಚ್ಚಿರಲಿವೆ. ಇವತ್ತು ಕೂಡಾ ಇಲ್ಲಿನ ಶಾಲಾ ಕಾಲೇಜುಗಳಿಗೆ ರಜೆ ಇತ್ತು. ಜಿಲ್ಲಾಡಳಿತ, ಮಕ್ಕಳ ವಿಷಯದಲ್ಲಿ ಯಾವುದೇ ರಿಸ್ಕ್ ತೆಗೆದುಕೊಳ್ಳುವ ಗೋಜಿಗೆ ಹೋಗದೆ, ನಾಳೆ ಕೂಡಾ ಮಕ್ಕಳಿಗೆ ರಜೆ ಘೋಷಿಸಿದೆ.