ತಾಯಂದಿರ ನೋವು ಒಂದೇ ಅಲ್ವಾ…? | ಕೊಲೆಗೀಡಾದವರ ಕುಟುಂಬಕ್ಕೆ ಪರಿಹಾರದಲ್ಲಿ ತಾರತಮ್ಯ ಸಲ್ಲದು
ಮಂಗಳೂರು : ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ ಇಡೀ ರಾಜ್ಯವನ್ನೇ ತಲ್ಲಣಗೊಳಿಸಿದೆ ಎಂದರೆ ತಪ್ಪಾಗಲಾರದು. ಈ ಘಟನೆ ನಿಜಕ್ಕೂ ರಾಜ್ಯ ರಾಜಕೀಯವನ್ನು ಕೂಡಾ ಅಲುಗಾಡಿಸಿದೆ. ಜನರ ಆಕ್ರೋಶ ಇನ್ನೂ ತಣ್ಣಗಾಗಿಲ್ಲ. ಹಾಗೆನೇ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಸಂಬಂಧ ಕುಟುಂಬಸ್ಥರನ್ನು ಹಲವಾರು ರಾಜಕೀಯ ಧುರೀಣರು ಭೇಟಿ ಆಗಿದ್ದಾರೆ. ಹಾಗೆನೇ ನಮ್ಮ ರಾಜ್ಯದ ಮುಖ್ಯಮಂತ್ರಿ ಭೇಟಿ ನೀಡಿ, 25 ಲಕ್ಷ ಚೆಕ್ ನ್ನು ಪ್ರವೀಣ್ ಕುಟುಂಬಸ್ಥರಿಗೆ ನೀಡಿದ್ದಾರೆ.
ಈಗ ಸಿಎಂ ಭೇಟಿ ನೀಡಿದ ವಿಚಾರವಾಗಿ ಮಾಜಿ ಸಚಿವ ಯು.ಟಿ ಖಾದರ್ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.’ ಪ್ರವೀಣ್, ಫಾಜಿಲ್ ತಾಯಿಯಂದಿರ ನೋವು ಒಂದೇ ಅಲ್ವಾ? ‘ ಎಂಬ ಹೇಳಿಕೆಯನ್ನು ನೀಡಿದ್ದಾರೆ.
ಪ್ರವೀಣ್ ನೆಟ್ಟರು ಕುಟುಂಬಸ್ಥರನ್ನು ಭೇಟಿಯಾಗಿ 25 ಲಕ್ಷ ಪರಿಹಾರವನ್ನು ನೀಡಿದ್ದಾರೆ. ಅದರ ಪಕ್ಕದಲ್ಲೇ ಮಸೂದ್ ಕುಟುಂಬಕ್ಕೆ ಯಾಕೆ ಭೇಟಿ ನೀಡಿಲ್ಲ. ಅವರಿಗೆ ಮಾತ್ರ ಯಾಕೆ ಪರಿಹಾರ ? ಸರ್ಕಾರ ಸಮಾನ ದೃಷ್ಟಿಯಿಂದ ಎಲ್ಲರನ್ನೂ ನೋಡಬೇಕು. ಯಾವುದೇ ತಾರತಮ್ಯ ಮಾಡಬಾರದು. ಸಿಎಂ ಕಿಸೆಯಿಂದ ಕೊಡುವ ಹಣವಲ್ಲ ಅದು ಸರ್ಕಾರದ್ದು ಮುಖ್ಯ ಮಂತ್ರಿಗಳದ್ದು ನಾಚಿಕೆಯಾಗುವ ನಿಲುವು. ಸರ್ಕಾರ ವೈಫಲ್ಯ ಎದ್ದು ಕಾಣಿಸುತ್ತದೆ. ಒಬ್ಬರಿಗೆ ಪರಿಹಾರ ಘೋಷಣೆ ಮಾಡುವುದು ಸರಿಯಲ್ಲ ” ಎಂಬ ಮಾತನ್ನು ಹೇಳಿದ್ದಾರೆ.