ಜನ್ಮದಿನದಂದೇ ಮಣ್ಣಲ್ಲಿ ಮಣ್ಣಾದ ಫಾಝಿಲ್ : ಅಂತಿಮ ಯಾತ್ರೆಯಲ್ಲಿ ಜನಸಾಗರ
ದಕ್ಷಿಣ ಕನ್ನಡ ಜಿಲ್ಲೆ ಅಕ್ಷರಶಃ ಬೂದಿ ಮುಚ್ಚಿದ ಕೆಂಡದ ತರಹ ಆಗಿದೆ. ಒಂದು ಕಡೆ ಪ್ರವೀಣ್ ನೆಟ್ಟಾರು ಹತ್ಯೆ ಇನ್ನೊಂದು ಕಡೆ ಸುರತ್ಕಲ್ ನಲ್ಲಿ ಫಾಝಿಲ್ ಹತ್ಯೆ. ಈ ಎರಡೂ ಘಟನೆಗಳಿಂದ ಜನ ಭಯಭೀತರಾಗಿದ್ದಾರೆ. ನಿನ್ನೆಯ ಕೊಲೆ ವೈಯಕ್ತಿಕ ವೈಷಮ್ಯಕ್ಕೆ ನಡೆದದ್ದು ಎಂದರೂ, ಸಾಲು ಸಾಲು ಕೊಲೆಗಳ ಭೀಕರತೆಗೆ ಕರಾವಳಿಗೆ ಕೆಟ್ಟ ಹೆಸರು ಈಗ ಮತ್ತೆ ಮೆತ್ತಿಕೊಳ್ಳುತ್ತಿದೆ.
ಎಳೆಯ ಪ್ರಾಯದ ಹುಡುಗನ ಮರಣಕ್ಕೆ ಬಂಧು ಮಿತ್ರರು ಮತ್ತು ಕುಟುಂಬ ವರ್ಗ ಕಣ್ಣೀರು ಹಾಕುತ್ತಿದೆ. ಗೆಳೆಯರ ಪ್ರೀತಿಯ ಫಾಜಿಲ್ ಇನ್ನು ಕೇವಲ ನೆನಪು. ನಿನ್ನೆ ಮಂಗಳೂರು ವ್ಯಾಪ್ತಿಯ ಸುರತ್ಕಲ್ ನಲ್ಲಿ ಹತ್ಯೆಗೀಡಾದ ಫಾಝಿಲ್ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಗಿದ್ದು, ಲಕ್ಷಾಂತರ ಮಂದಿ ಫಾಝಿಲ್ ಅಂತಿಮ ದರ್ಶನ ಪಡೆದರು. ಮಂಗಳಪೇಟೆ ಮುಹ್ಯುದ್ದೀನ್ ಜುಮಾ ಮಸೀದಿಯಲ್ಲಿ ಆತನ ಅಂತ್ಯ ಸಂಸ್ಕಾರ ನಡೆಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ. ಎಳೆಯ ಪ್ರಾಯದ ಹುಡುಗನನ್ನು ಕಳಕೊಂಡ ಕುಟುಂಬಸ್ಥರ ರೋದನ ಮುಗಿಲು ಮುಟ್ಟಿದೆ. ಕೇವಲ 24 ವರ್ಷದ ಫಾಜಿಲ್ ಮರಣ ಕುಟುಂಬ ವರ್ಗದವರನ್ನು ದಿಗ್ಭ್ರಮೆಗೊಳಿಸಿದೆ.
ಶವಯಾತ್ರೆಯಲ್ಲಿ ಜನಪ್ರವಾಹವೇ ಹರಿದು ನಿಂತಿದೆ. ಜನ್ಮದಿನದಂದೇ ಮಣ್ಣಲ್ಲಿ ಮಣ್ಣಾದ ಫಾಝಿಲ್. ಅಂತಿಮ ಯಾತ್ರೆಯಲ್ಲಿ ಜನಸಾಗರ ಮೆರವಣಿಗೆಯಲ್ಲಿ ಪಾಲ್ಗೊಂಡು ಹುಡುಗನ ಅಂತಿಮ ಯಾತ್ರೆಯಲ್ಲಿ ಪಾಲ್ಗೊಂಡರು.
ಇಂದು ಪೊಲೀಸ್ ಆಯುಕ್ತ ಶಶಿಕುಮಾರ್ ಅವರು, ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡುತ್ತಾ ಫಾಝಿಲ್ ಹತ್ಯೆಗೆ ಸಂಬಂಧಿಸಿದಂತೆ ಈಗಾಗಲೇ 13 ರಿಂದ 14 ಜನ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದ್ದು, ಈ ಘಟನೆ ಬಗ್ಗೆ ಪ್ರತ್ಯಕ್ಷದರ್ಶಿಗಳನ್ನು ಕೂಡ ವಿಚಾರಣೆ ಮಾಡಲಾಗುತ್ತಿದೆ. ನಿಷ್ಪಕ್ಷಪಾತ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸುತ್ತೇವೆ ಎಂದಿದ್ದಾರೆ.
ಈಗಾಗಲೆ ಮುಂಜಾಗ್ರತಾ ಕ್ರಮವಾಗಿ 144 ಸೆಕ್ಷನ್ ಜಾರಿಗೊಳಿಸಲಾಗಿದೆ. ಅಷ್ಟು ಮಾತ್ರವಲ್ಲದೇ ರಾತ್ರಿ 10 ಗಂಟೆ ನಂತರ ಸಂಚರಿಸುವ ಎಲ್ಲಾ ವಾಹನಗಳ ತಪಸಣೆ ಮಾಡಲಾಗುತ್ತಿದೆಯಂತೆ. ಕಮೀಷನರೇಟ್ ವ್ಯಾಪ್ತಿಯಲ್ಲಿ ಈಗಾಗಲೇ ಮಧ್ಯ ಮಾರಾಟ ನಿಷೇಧ ಮಾಡಲಾಗಿದೆ. ಸಾರ್ವಜನಿಕರು ಅನವಶ್ಯಕವಾಗಿ ಓಡಾಡುವಂತಿಲ್ಲ. ಯಾವುದೇ ಅಹಿತಕರ ಘಟನೆಗಳು ನಡಯದಂತೆ ಮುಂಜಾಗ್ರತೆ ವಹಿಸಬೇಕು ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಫಾಝಿಲ್ ಹತ್ಯೆಯ ಹಂತಕರನ್ನು ಪತ್ತೆಗಾಗಿ ಎರಡು ತಂಡಗಳನ್ನು ರಚನೆ ಮಾಡಲಾಗಿದೆ. ಈ ಕೊಲೆ ವಿಚಾರವಾಗಿ ʻಸೋಷಿಯಲ್ ಮಿಡಿಯಾʼಗಳಲ್ಲಿ ಮನಸ್ಸಿಗೆ ಬಂದಂತೆ ಪೋಸ್ಟ್‌ಗಳನ್ನು ರವಾನೆ ಮಾಡಬೇಡಿ ಮಂಗಳೂರು ಕಮಿಷನರ್ ಶಶಿಕುಮಾರ್ ಎಚ್ಚರಿಕೆ ನೀಡಿದ್ದಾರೆ. ಆರೋಪಿಗಳ ಪತ್ತೆಗಾಗಿ ಎರಡು ತಂಡಗಳನ್ನು ರಚನೆ ಮಾಡಲಾಗಿದೆ. ಫಾಜಿಲ್ ಯಾವುದೇ ಪಕ್ಷಕ್ಕೆ ಸೇರಿದವರಲ್ಲ. ಈ ಕೊಲೆ ವಿಚಾರವಾಗಿ ಸೋಷಿಯಲ್ ಮಿಡಿಯಾಗಳಲ್ಲಿ ಮನಸ್ಸಿಗೆ ಬಂದಂತೆ ರವಾನೆ ಮಾಡಬೇಡಿ ಎಚ್ಚರಿಕೆಯನ್ನು ಕಮಿಷನರ್ ರವಾನಿಸಿದ್ದಾರೆ.
ಘಟನೆ ಹಿನ್ನೆಲೆ : ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಅವರ ಹತ್ಯೆಯ ಬಳಿಕ ಕೆಂಡದಂತಿರುವ ಪರಿಸ್ಥಿತಿಯಲ್ಲಿ ಈಗ ಮತ್ತೆ ಕರಾವಳಿಯಲ್ಲಿ ರಕ್ತದೋಕುಳಿ ಚೆಲ್ಲಿದೆ. ತುಂತುರು ಮಳೆಯ ತುಂಬಾ ರಕ್ತದ ವಾಸನೆ ಗಾಢವಾಗಿ ಪಸರಿಸಿತ್ತು. ಕರಾವಳಿಯಲ್ಲಿ ಕಳೆದ ಎರಡು ದಿನಗಳಿಂದ ಕಳವಳದ ವಾತಾವರಣ ನಿರ್ಮಾಣ ಆಗಿತ್ತು. ಇದರ ಮಧ್ಯೆ ನಿನ್ನೆ ಇನ್ನೊಂದು ಅವಘಢ ನಡೆದು ಹೋಗಿದೆ. ಸುರತ್ಕಲ್ ನಲ್ಲಿ ನಿನ್ನೆ ಗುರುವಾರ ರಾತ್ರಿ ಯುವಕನೊಬ್ಬನ ಮೇಲೆ ಮಾರಕಾಯುಧಗಳಿಂದ ದಾಳಿ ಮಾಡಲಾಗಿತ್ತು.
ಸುರತ್ಕಲ್ ಮಂಗಳ ಪೇಟೆಯ ಫಾಜಿಲ್ ಎಂಬ ಯುವಕನ ಮೇಲೆ ತಲವಾರು ದಾಳಿ ನಡೆಸಲಾಗಿದೆ. ಚಪ್ಪಲಿ ಖರೀದಿಗೆ ಬಂದಿದ್ದ ವಾಝಿಯ ಮೇಲೆ ಅಂಗಡಿಯ ಎದುರಿನ ಜಗಲಿಯಲ್ಲೇ ತಲವಾರಿನಿಂದ ದಾಳಿ ನಡೆಸಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಯುವಕ ತಪ್ಪಿಸಿಕೊಳ್ಳಲು ಯತ್ನಿಸಿದರೂ ಸಾಧ್ಯವಾಗಲಿಲ್ಲ. ಫಾಜಿಲ್ ಪರಿಸ್ಥಿತಿ ಚಿಂತಾಜನಕವಾಗಿತ್ತು. ಫಾಜಿಲ್ ಮೃತಪಟ್ಟಿದ್ದಾನೆ. ರಕ್ಷಿಸಲು ತೆರಳಿದ ಇನ್ನೊಬ್ಬನಿಗೂ ಗಾಯ ಆಗಿದೆ.
ಕಾರಿನಲ್ಲಿ ಬಂದ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ. ಆಗ ಫಾಜಿಲ್ ಗೆಳೆಯನ ಜತೆ ಅಂಗಡಿ ಒಂದರ ಮುಂದೆ ಮಾತುಕತೆ ನಡೆಸುತ್ತಿದ್ದ. ಗೆಳೆಯ ರಕ್ಷಿಸಲು ಪ್ರಯತ್ನಿಸಿದ್ದ. ದುಷ್ಕರ್ಮಿಗಳು ಮೂರಕ್ಕಿಂತ ಹೆಚ್ಚು ಜನ ಇದ್ದರು ಎಂಬ ಮಾಹಿತಿ ಇದೆ. ಅಟ್ಯಾಕ್ ನ ವಿವರ ಸಿಸಿ ಟಿವಿಯಲ್ಲಿ ಸೆರೆ ಆಗಿದ್ದು, ಫಾಜಿಲ್ ತಪ್ಪಿಸಿಕೊಳ್ಳಲು ಶತಪ್ರಯತ್ನ ನಡೆಸಿದ್ದ.ಭಾರೀ ಪ್ರಮಾಣದಲ್ಲಿ ರಕ್ತ ಸ್ರಾವವಾಗಿದ್ದು, ಗಂಭೀರ ಸ್ಥಿತಿಯಲ್ಲಿರುವ ವಾಝಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು ಹೆಚ್ಚಿನ ಪೊಲೀಸ್ ಭದ್ರತೆ ಕೈಗೊಳ್ಳಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈಗಾಗಲೆ ಮುಂಜಾಗ್ರತಾ ಕ್ರಮವಾಗಿ 144 ಸೆಕ್ಷನ್ ಜಾರಿಗೊಳಿಸಲಾಗಿದೆ. ಅಷ್ಟು ಮಾತ್ರವಲ್ಲದೇ, ರಾತ್ರಿ 10 ಗಂಟೆ ನಂತರ ಸಂಚರಿಸುವ ಎಲ್ಲಾ ವಾಹನಗಳ ತಪಸಣೆ ಮಾಡಲಾಗುತ್ತಿದೆಯಂತೆ. ಕಮೀಷನರೇಟ್ ವ್ಯಾಪ್ತಿಯಲ್ಲಿ ಈಗಾಗಲೇ ಮಧ್ಯ ಮಾರಾಟ ನಿಷೇಧ ಮಾಡಲಾಗಿದೆ.