ಪ್ರವೀಣ್ ನೆಟ್ಟಾರು ಮನೆಗೆ ಮಹೇಶ್ ಶೆಟ್ಟಿ ತಿಮರೋಡಿ ಭೇಟಿ | ಮುತಾಲಿಕ್ ಬಂಧನಕ್ಕೆ ಆಕ್ರೋಶ
ಮಂಗಳೂರು : ಜು.26 ರಂದು ದುಷ್ಕರ್ಮಿಗಳ ದಾಳಿಗೆ ಬಲಿಯಾದ ಬಿಜೆಪಿ ಯುವ ನಾಯಕ ಪ್ರವೀಣ್ ನೆಟ್ಟಾರು ಅವರ ಮನೆಗೆ ಇಂದು ಮಹೇಶ್ ಶೆಟ್ಟಿ ತಿಮರೋಡಿ ಆಗಮಿಸಿದ್ದು ಮನೆ ಮಂದಿಗೆ ಸಾಂತ್ವನ ಹೇಳಿದ್ದಾರೆ. ಈ ಸಂದರ್ಭದಲ್ಲಿ ಪ್ರಮೋದ್ ಮುತಾಲಿಕ್ ಬಂಧನಕ್ಕೆ ಆಕ್ರೋಶ ವ್ಯಕ್ತಪಡಿಸಿದ ಮಹೇಶ್ ಶೆಟ್ಟಿ ಅವರು
ಮುತಾಲಿಕ್ ಅಫ್ಘಾನಿಸ್ತಾನಕ್ಕೆ ಹೋಗ ಬೇಕೆ ? ಬಿಜೆಪಿಯಿಂದ ಹಿಂದೂಗಳಿಗೆ ಅನ್ಯಾಯ ಎಂಬ ಮಾತನ್ನು ಹೇಳಿದ್ದಾರೆ.
ಪ್ರವೀಣ್ ನೆಟ್ಟಾರು ಮನೆಗೆ ನಿನ್ನೆ ಸಿಎಂ ಬಸವರಾಜ್ ಬೊಮ್ಮಾಯಿ ಬಂದಿದ್ದು ಕುಟುಂಬಸ್ಥರಿಗೆ ನ್ಯಾಯ ಒದಗಿಸಿ ಕೊಡುವ ಭರವಸೆಯನ್ನು ನೀಡಿದ್ದಾರೆ.
“ಏನು ಮಾಡುತ್ತಿದೆ ಬಿಜೆಪಿ ಸರಕಾರ? ಪ್ರವೀಣ್ ನೆಟ್ಟಾರು ಮನೆಗೆ ಸಾಂತ್ವನ ಹೇಳಲು ಪ್ರಮೋದ್ ಮುತಾಲಿಕ್ ಆಗಮಿಸಿದರೆ ದಕ್ಷಿಣ ಕನ್ನಡ ಗಡಿಭಾಗದಲ್ಲಿ ಅವರನ್ನು ಅರೆಸ್ಟ್ ಮಾಡುತ್ತಾರೆ. ಅವರೆಂತಹ ದ್ರೋಹ ಬಗೆದಿದ್ದಾರೆ. ಅವರು ಎಲ್ಲಿ ಹೋಗಿ ಬದುಕಬೇಕು. ಅಫ್ಘಾನಿಸ್ತಾನಕ್ಕೆ ಹೋಗಬೇಕಾ? ಇನ್ನೂ, ಪಾಕಿಸ್ತಾನಕ್ಕೆ ಹೋಗಬೇಕಾ ಎಲ್ಲಿಗೆ ಹೋಗಬೇಕು ?
ಅವರೊಬ್ಬ ಹಿಂದೂ ನಾಯಕ. ಯಾಕೆ ಬಂಧನ ಮಾಡಬೇಕು ಅವರನ್ನು. ಬೆಂಕಿ ಹಚ್ಚುವುದು ರಾಜಕೀಯದ ಒಂದು ದೊಡ್ಡ ಅಸ್ತ್ರವಾಗಿದೆ.ಧರ್ಮದ ರಕ್ಷಣೆಗೆ ವೋಟು ಕೊಟ್ಟದ್ದು ನಿಮಗೆ. ಎಲ್ಲಿದೆ ನಿಮ್ಮ ಧರ್ಮ. ಜನರಿಗೆ ರಕ್ಷಣೆ ಕೊಡಲಿಕ್ಕೆ ಆಗುವುದಿಲ್ಲ ಅಂದರೆ ಮನೆಗೆ ಹೋಗಿ ” ಎಂಬ ಆಕ್ರೋಶದ ಮಾತನ್ನು ಈ ಸಂದರ್ಭದಲ್ಲಿ ಹೇಳಿದ್ದಾರೆ.