Big Breaking | ಪ್ರವೀಣ್ ನೆಟ್ಟಾರು ಹತ್ಯೆ : ಇಬ್ಬರು ಆರೋಪಿಗಳ ಬಂಧನ
ಮಂಗಳೂರು: ಬೆಳ್ಳಾರೆ ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರ್ ಹತ್ಯೆ ಪ್ರಕರಣದ ಪ್ರಮುಖ ಇಬ್ಬರು ಆರೋಪಿಯ ಬಂಧನವಾಗಿದೆ. ಮುಖ್ಯ ಆರೋಪಿ ಸ್ಥಳೀಯ ಎನ್ನಲಾಗುತ್ತಿತ್ತು. ಆಗ ಅದು ಕನ್ಫರ್ಮ್ ಆಗಿದೆ, ನಿನ್ನೆಯವರೆಗೆ ಒಟ್ಟು15 ಜನರನ್ನು ಈ ಮರ್ಡರ್ ಕೇಸಿನ ಸಂಬಂಧ ಬಂಧಿಸಲಾಗಿತ್ತು.
ಮುಖ್ಯಆರೋಪಿಗಳನ್ನು ಈಗ ಬಂಧಿಸಲಾಗಿದ್ದು, ಆರೋಪಿಗಳು ಸವಣೂರು- ಬೆಳ್ಳಾರೆಯ ನಿವಾಸಿಯಾಗಿದ್ದು, ಈಗ ಹೆಸರುಗಳು ರಿವೀಲ್ ಆಗಿವೆ. ಸ್ಥಳೀಯರೇ ಅಥವಾ ಕೇರಳದ ವ್ಯಕ್ತಿಗಳು ಹತ್ಯೆ ಮಾಡಿದ್ದಾರೆಯೇ ಎಂಬ ಬಗ್ಗೆ ಹಲವು ಅನುಮಾನಗಳಿದ್ದವು, ಈಗ ಮಾಹಿತಿಗಳು ಒಂದೊಂದಾಗಿ ಹೊರಬರುತ್ತಿವೆ.
ಊಹಿಸಿಕೊಂಡಂತೆಯೇ ಸ್ಥಳೀಯ ಇಬ್ಬರು ಆರೋಪಿಗಳನ್ನು ಪೊಲೀಸರು ನಬಂಧಿಸಿದ್ದಾರೆ. ಅದರಲ್ಲಿ ಒಬ್ಬಾತ ಜಾಕೀರ್. ಇನ್ನೊಬ್ಬಶಫೀಕ್. ಈ ಇಬ್ಬರು ಈಗ ಬಂಧಿಸಿರುವ ಮುಖ್ಯ ಆರೋಪಿಗಳು. ಜಾಕೀರ್ ಸವಣೂರಿನವನು. ಇನ್ನೊಬ್ಬ ಆರೋಪಿ ಬೆಳ್ಳಾರೆಯ ಶಫೀಕ್. ಬೆಳ್ಳಾರೆ ಗ್ರಾಮದ 27 ವರ್ಷದ ಮೊಹಮ್ಮದ್ ಶಫೀಕ್ ಓರ್ವ ಮುಖ್ಯ ಆರೋಪಿ. ಅದೇರೀತಿ ಸವಣೂರು ಗ್ರಾಮದ ಜ್ಹಾಕೀರ್ 29 ವರ್ಷ ವಯಸ್ಸಿನವನು.
ಪ್ರವೀಣ್ ನೆಟ್ಟಾರ್ ಬಗ್ಗೆ ಬೆಳ್ಳಾರೆಯ ಶಾಫಿಕ್ ಮಾಹಿತಿ ನೀಡಿದ್ದ ಎನ್ನಲಾಗಿದೆ. ಆತನ ಮಾಹಿತಿಯ ಮೇಲೆ ಸವಣೂರಿನ ಜಾಕಿರ್ ಮತ್ತವನ ತಂಡ ಹತ್ಯೆ ನಡೆಸಿದೆ ಎನ್ನುವುದರ ಬಗ್ಗೆ ಎಸ್ ಪಿ ಸೋನಾವಣೆ ಮಾಹಿತಿ ನೀಡಿದ್ದಾರೆ. ಆರೋಪಿ ಜಾಕಿರ್ ಮೇಲೆ ಈ ಹಿಂದೆಯೂ ಕೋಮು ಸಂಬಂಧಿತ ಪ್ರಕರಣ ದಾಖಲಾಗಿತ್ತು ಎಂಬ ಮಹತ್ವದ ಮಾಹಿತಿ ಲಭ್ಯ ಆಗಿದೆ.
ಇಲ್ಲಿಯತನಕ ಒಟ್ಟು 21 ಶಂಕಿತ ಆರೋಪಿಗಳನ್ನು ಬಂಧಿಸಲಾಗಿದೆ. ಅನುಭವಿ ಪೊಲೀಸ್ ಅಧಿಕಾರಿಗಳು ಖುದ್ದು ತನಿಖೆಯ ನೇತೃತ್ವ ವಹಿಸಿಕೊಂಡಿದ್ದಾರೆ. ಬಂಧಿತರನ್ನು ನಮ್ಮ ಕಸ್ಟಡಿಗೆ ಕೇಳಿದ್ದೇವೆ, ಯಾವ ಕಾರಣಕ್ಕೆ ಕೊಲೆ ನಡೆಸಲಾಗಿದೆ ಎಂಬ ಬಗ್ಗೆ ಕೂಲಂಕುಷ ತನಿಖೆ ನಡೆಸುತ್ತೇವೆ. ಮತ್ತು ಕೊಲೆಯ ಹಿಂದೆ ಯಾರಿದ್ದಾರೆ ಎಂಬುದರ ಬಗ್ಗೆ ತನಿಖೆ ನಡೆಸುತ್ತೇವೆ. ಕೊಲೆಯ ಹಿಂದೆ ಪಿಎಫ್ಐ ಸಂಘಟನೆ ಇರುವ ಶಂಕೆ ಇದೆ ಎಂದಿದ್ದಾರೆ ಎಡಿಜಿಪಿ ಅಲೋಕ್ ಕುಮಾರ್ ಅವರು. ಈ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭ್ಯ ಆಗಬೇಕಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
ಹಿಂದೂ ಪರ ಸಂಘಟನೆಗಳ ಯುವ ಕಾರ್ಯಕರ್ತ ಮತ್ತು ಬಿಜೆಪಿ ಪದಾಧಿಕಾರಿಯ ಹತ್ಯೆ ಇದೀಗ ದೇಶಾದ್ಯಂತ ಸಂಚಲನ ಸೃಷ್ಟಿಸಿದೆ. ಸಾವಿರಕ್ಕೂ ಅಧಿಕ ಬಿಜೆಪಿ ಪದಾಧಿಕಾರಿಗಳು ಹುದ್ದೆ ಆಡಳಿತಾರೂಢ ಬಿಜೆಪಿ ಸರ್ಕಾರದ ಮೇಲೆ ಕೆಂಡಕಾರುತ್ತಿದ್ದಾರೆ. ಈಗ ಈ ಇಬ್ಬರು ಪ್ರಮುಖ ಆರೋಪಿಗಳ ಬಂಧನ ಆಗಿದೆ. ತನಿಖೆ ಇನ್ನು ವೇಗ ಪಡೆದುಕೊಳ್ಳಲಿದೆ. ಇವತ್ತು ಸಂಜೆಯ ಒಳಗೆ ಇನ್ನಷ್ಟು ಮಹತ್ವದ ಮಾಹಿತಿ ಲಭ್ಯವಾಗುವ ನಿರೀಕ್ಷೆಯಿದೆ.