ಪ್ರವೀಣ್ ನೆಟ್ಟಾರು ಹತ್ಯೆ ಹಿನ್ನೆಲೆ, ಬೆಳ್ತಂಗಡಿಯಲ್ಲೂ 144 ಸೆಕ್ಷನ್ ಜಾರಿ
ಪುತ್ತೂರು: ಬಿಜೆಪಿ ಯುವ ನಾಯಕ ಪ್ರವೀಣ್ ನೆಟ್ಟಾರು ಮೇಲೆ ದುಷ್ಕರ್ಮಿಗಳ ದಾಳಿಯಿಂದ ನಿನ್ನೆ ರಾತ್ರಿ ಸಾವನ್ನಪ್ಪಿದ್ದಾರೆ. ಇವರ ಸಾವಿನ ಬೆನ್ನಲ್ಲೇ ಸಂಘಟನೆಗಳಿಂದ ಪ್ರತಿಭಟನೆ ನಡೆದಿದ್ದು, ಉದ್ವಿಗ್ನ ಪರಿಸ್ಥಿತಿ ಉಂಟಾಗಿದೆ.
ಇದೀಗ ಪ್ರವೀಣ್ ನೆಟ್ಟಾರ್ ಇವರ ಮೃತ ದೇಹವನ್ನು ಪುತ್ತೂರು ಸರ್ಕಾರಿ ಆಸ್ಪತ್ರೆಯಿಂದ ಅವರ ಊರು ಮನೆಯಾದ ಬೆಳ್ಳಾರೆಗೆ ಕೊಂಡು ಹೋಗುವ ಸಮಯ ಹೆಚ್ಚಿನ ಸಂಖ್ಯೆಯಲ್ಲಿ ಹಿಂದೂಪರ ಸಂಘಟನೆಯವರು ಸೇರುವ ಮೂಲಕ ಮೆರವಣಿಗೆ ಮೂಲಕ ತೆರಳುತ್ತಿದ್ದು, ಸದ್ರಿ ಮೆರವಣಿಗೆ ತೆರಳುವ ಸಮಯ ಹೆಚ್ಚಿನ ಸಂಖ್ಯೆಯಲ್ಲಿ ಹಿಂದು ಭಾಂಧವರು ಸೇರುವ ಮೂಲಕ ಯಾವುದೇ ಸನ್ನಿವೇಶದಲ್ಲಿ ಪರಿಸ್ಥಿತಿ ಬಿಗಡಾಯಿಸುವ ಸಾಧ್ಯತೆಯಿದೆ.
ಅಲ್ಲದೆ ಈ ದಿನ ಬೆಳಿಗ್ಗೆ ಸಮಯ ಪುತ್ತೂರು ನಗರ ಠಾಣಾ ವ್ಯಾಪ್ತಿಯ ಲಿನಟ್ ಜಂಕ್ಷನ್ ಬಳಿ ಬಸ್ಕ ಒಂದಕ್ಕೆ ಕಲ್ಲು ತೂರಾಟ ನಡೆಸಿರುವ ಘಟನೆ ನಡೆದಿರುತ್ತದೆ. ಇದರಿಂದಾಗಿ ಮುಂದಕ್ಕೆ ಯಾವುದೇ ಸನ್ನಿವೇಶದಲ್ಲಿ ಘರ್ಷನೆ ನಡೆಯುವ ಸಾಧ್ಯತೆ ಇರುತ್ತದೆ. ಈ ಎಲ್ಲಾ ಅಂಶಗಳನ್ನು ಗಣನೆಗೆ ತೆಗೆದುಕೊಂಡು ಪುತ್ತೂರು ಉಪವಿಭಾಗ ವ್ಯಾಪ್ತಿಯಲ್ಲಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪುತ್ತೂರು ಉಪವಿಭಾಗ ವ್ಯಾಪ್ತಿಯ ಪುತ್ತೂರು ತಾಲೂಕು, ಸುಳ್ಯ ತಾಲೂಕು, ಕಡಬ ತಾಲೂಕು ವ್ಯಾಪ್ತಿಯಲ್ಲಿ ಮುಂಜಾಗ್ರತ ಕ್ರಮವಾಗಿ ಕಲಂ 144 ಸಿ.ಆರ್.ಪಿ.ಸಿ ಯಡಿ ನಿಷೇದಾಜ್ಞೆಯನ್ನು ಜಾರಿಗೊಳಿಸಿದೆ.
ಉಲ್ಲೇಖಿತ ಪೊಲೀಸ್ ಇಲಾಖೆಯ ವರದಿಯನ್ವಯ ಹಾಗೂ ಈ ಬಗ್ಗೆ ಮಾನ್ಯ ಜಿಲ್ಲಾಧಿಕಾರಿಯವರೊಂದಿಗೆ ಮೌಖಿಕವಾಗಿ ಚರ್ಚಿಸಿದಂತೆ, ಪುತ್ತೂರು ಉಪವಿಭಾಗ ಮಟ್ಟದಲ್ಲಿ ಯಾವುದೇ ರೀತಿಯ ಗಲಭೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಬೆಳ್ತಂಗಡಿ ತಾಲೂಕನ್ನು ಸಹ ಸೇರಿಸಿಕೊಂಡು ಪುತ್ತೂರು ಉಪವಿಭಾಗಾಯಾದ್ಯಂತ ಸಿ.ಆರ್.ಪಿ.ಸಿ ಕಲಂ 144 ಪ್ರಕಾರ ನಿಷೇದಾಜ್ಞೆ
ಹೊರಡಿಸುವುದು ಸೂಕ್ತ ಎಂದು ಉಪವಿಭಾಗಾಧಿಕಾರಿ ಗಿರೀಶ್ ನಂದನ್ ಅಭಿಪ್ರಾಯಿಸಿ ಆದೇಶಿಸಿದ್ದಾರೆ.
ಹೀಗಾಗಿ, ಇಂದು ದಿನಾಂಕ 27.7.2022 ಪೂರ್ವಹ್ನ 6 ಗಂಟೆಯಿಂದ 28.7.2022 ರ ಮಧ್ಯರಾತ್ರಿ 12 ಗಂಟೆಯವರೆಗೆ ನಿಷೇಧಾಜ್ಞೆ ವಿಧಿಸಲಾಗಿದೆ.