ನಟಿ ಸಂಯುಕ್ತ ಹೆಗ್ಡೆಗೆ ಭಾರಿ ಅಪಘಾತ ! ಆದದ್ದು ಏನು ಹೇಗೆ

Share the Article

ಕಿರಿಕ್ ಪಾರ್ಟಿ’ ಖ್ಯಾತಿಯ ಸಂಯುಕ್ತಾ ಹೆಗಡೆ ಕಾಲಿಗೆ ಗಂಭೀರ ಗಾಯ ಆಗಿದೆ. ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಕ್ರೀಮ್ ಚಿತ್ರದ ಹೊಡೆದಾಟದ ದೃಶ್ಯವೊಂದರ ಚಿತ್ರೀಕರಣದ ವೇಳೆ ನಾಯಕಿ ಸಂಯುಕ್ತ ಹೆಗ್ಡೆಗೆ ಗಾಯವಾಗಿದ್ದು ಚಿಕಿತ್ಸೆ ನೀಡಲಾಗಿದೆ. ಸಂಯುಕ್ತ ಅವರ ಕಾಲು ಹಾಗೂ ತಲೆಗೆ ಬಲವಾದ ಪೆಟ್ಟು ಬಿದ್ದಿದೆ. 15 ದಿನಗಳ ಕಾಲ ವಿಶ್ರಾಂತಿ ಪಡೆಯುವಂತೆ ಅವರಿಗೆ ವೈದ್ಯರು ಸೂಚಿಸಿದ್ದಾರೆ.

ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಚಿತ್ರೀಕರಣ ನಡೆಯುತ್ತಿತ್ತು. ಡ್ಯೂಪ್ ಬಳಸಿ ಶ್ಯೂಟಿಂಗ್ ಮಾಡೋಣ ಎಂದು ಹೇಳಿದರೂ ನಟಿ ಸಂಯುಕ್ತ ಒಪ್ಪಿರಲಿಲ್ಲ.

ಅಭಿಷೇಕ್ ಬಸಂತ್ ನಿರ್ದೇಶನದಲ್ಲಿ ಫೈಟ್ ಮಾಸ್ಟರ್ ಪ್ರಭು ಅವರ ಸಮ್ಮುಖದಲ್ಲಿ ಈ ದೃಶ್ಯದ ಚಿತ್ರೀಕರಣ ನಡೆಯುತ್ತಿತ್ತು. ಹಾಗಾಗಿ ಚಿತ್ರೀಕರಣ ಮುಂದೂಡಲಾಗಿದೆ.

Leave A Reply