ಮಂಗಳೂರು:ವಿದ್ಯಾರ್ಥಿ-ವಿದ್ಯಾರ್ಥಿನಿಯರ ತುಂಡುಡುಗೆ, ಅಸಹ್ಯ ವರ್ತನೆ!!
ಬಲ್ಮಠದ ಪಬ್ ಪಾರ್ಟಿ ಗೆ ಬ್ರೇಕ್ ಹಾಕಿದ ಬಜರಂಗದಳ

ಮಂಗಳೂರು : ಬಜರಂಗದಳ ಕಾರ್ಯಕರ್ತರು ನಿನ್ನೆ ನಗರದ ಪಬ್ ಪಾರ್ಟಿ ತಡೆದ ಘಟನೆಯೊಂದು ನಡೆದಿದೆ. ಬಲ್ಮಠದ ಪಬ್ ಒಂದರಲ್ಲಿ ನಗರದ ಪ್ರತಿಷ್ಠಿತ ಕಾಲೇಜಿನ ವಿದ್ಯಾರ್ಥಿಗಳು ಪಾರ್ಟಿ ಮಾಡುತ್ತಿದ್ದ ಮಾಹಿತಿಯ ಮೇರೆಗೆ ಈ ಕಾರ್ಯಾಚರಣೆ ನಡೆದಿದ್ದು, ಬಜರಂಗದಳ ಕಾರ್ಯಕರ್ತರು ಇದಕ್ಕೆ ತಡೆ ಒಡ್ಡಿದ್ದಾರೆ.

 

ಮಂಗಳೂರಿನ ಬಲ್ಮಠದಲ್ಲಿ ಇರುವ ರಿ-ಸೈಕಲ್ ದಿ ಲಾಂಜ್ ಎಂಬಲ್ಲಿ ಖಾಸಗಿ ಕಾಲೇಜಿನ ವಿದ್ಯಾರ್ಥಿಗಳು ಪಾರ್ಟಿ ನಡೆಸುತ್ತಿದ್ದರು. ಕಾಲೇಜಿನ ಫೇರ್ ವೆಲ್ ನೆಪದಲ್ಲಿ ಪಬ್ ನಲ್ಲಿ ಪ್ರತಿಷ್ಠಿತ ಕಾಲೇಜಿನ ಪದವಿ ವಿದ್ಯಾರ್ಥಿಗಳು ಈ ಪಾರ್ಟಿ ಆಯೋಜನೆ ಮಾಡಿದ್ದರು. ಯುವಕ ಯುವತಿಯರು ಕುಡಿದು ಮೋಜು ಮಸ್ತಿಯ ವಿಷಯ ತಿಳಿದು ಬಜರಂಗದಳ ಕಾರ್ಯಕರ್ತರು ಪಬ್ ಗೆ ಬಂದಿದ್ದಾರೆ.

ಬಜರಂಗದಳ ಕಾರ್ಯಕರ್ತರು ಪಾರ್ಟಿ ನಿಲ್ಲಿಸಲು ಹೇಳಿದ್ದು ವಿದ್ಯಾರ್ಥಿಗಳನ್ನು ನಂತರ ಹೊರ ಕಳುಹಿಸಿದ್ದಾರೆ. ಅನಂತರ ಪೊಲೀಸರು ಸ್ಥಳಕ್ಕೆಆಗಮಿಸಿದ್ದು, ಬಜರಂಗದಳ ಕಾರ್ಯಕರ್ತರನ್ನು ಚದುರಿಸಿದ್ದಾರೆ. ನಂತರ ಪಾರ್ಟಿ ನಿಲ್ಲಿಸುವಂತೆ ಪೊಲೀಸರು ಆಯೋಜಕರಿಗೆ ಸೂಚನೆ ನೀಡಿದ್ದಾರೆ. ಪಾರ್ಟಿಯನ್ನು ಅರ್ಧದಲ್ಲೇ ನಿಲ್ಲಿಸಿ ತುಂಡುಡುಗೆ ತೊಟ್ಟಿದ್ದ ವಿದ್ಯಾರ್ಥಿನಿಯರು ಹೊರಗೆ ತೆರಳಿದ್ದಾರೆ. ಕೆಲ ದಿನಗಳ ಹಿಂದೆ ಭಾರೀ ಸಂಚಲನ ಮೂಡಿಸಿದ್ದ ಮಂಗಳೂರಿನ ಲಿಪ್ ಲಾಕ್ ವೀಡಿಯೋ ಬಯಲಿಗೆ ಬಂದಿದ್ದು, ಅದು ಇದೇ ಕಾಲೇಜಿನ ವಿದ್ಯಾರ್ಥಿಗಳು ಎನ್ನಲಾಗಿದೆ.

ಹತ್ತು ವರ್ಷದ ಹಿಂದಿನ ಬಲ್ಮಠದ ಪಬ್ ಮೇಲೆ ಬಜರಂಗದಳ, ಹಿಂಜಾವೇ ಕಾರ್ಯಕರ್ತರ ದಾಳಿ ನಡೆಸಿದ ಘಟನೆಯೊಂದು ನಡೆದಿತ್ತು. ಆವಾಗ ಹಲ್ಲೆ ನಡೆದು ದೇಶದಾದ್ಯಂತ ಭಾರೀ ಸುದ್ದಿಯಾಗಿತ್ತು. ಈ ಬಾರಿ ಅಂತಹ ಯಾವುದೇ ಅಹಿತಕರ ಘಟನೆ ನಡೆದಿಲ್ಲ.

Leave A Reply

Your email address will not be published.