ಮಂಗಳೂರು : ಕಾಲೇಜು ವಿದ್ಯಾರ್ಥಿಗಳ ಕಿಸ್ಸಿಂಗ್ ವಿಡಿಯೋ ವೈರಲ್ | ಪೊಲೀಸರಿಂದ ತನಿಖೆ

ಮಂಗಳೂರು : ಖಾಸಗಿ ಕೊಠಡಿಯಲ್ಲಿ ಪ್ರತಿಷ್ಟಿತ ಕಾಲೇಜೊಂದರ ವಿದ್ಯಾರ್ಥಿಗಳು ಕಿಸ್ಸಿಂಗ್ ನಲ್ಲಿ ತೊಡಗಿದ ವೀಡಿಯೋವೊಂದನ್ನು ಸಾಮಾಜಿಕ ತಾಣಗಳಲ್ಲಿ ಹರಿಬಿಟ್ಟಿದ್ದ ವಿದ್ಯಾರ್ಥಿಯನ್ನು ಮಂಗಳೂರು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

 

ಮಂಗಳೂರು ನಗರದ ಪ್ರತಿಷ್ಠಿತ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ಇವರಾಗಿದ್ದು, ಪಿಯುಸಿ ಶಿಕ್ಷಣ ಮಾಡುತ್ತಿದ್ದರು ಎನ್ನಲಾಗಿದೆ. ಕಾಲೇಜು ವಿದ್ಯಾರ್ಥಿಗಳ ಈ ಕಿಸ್ಸಿಂಗ್ ವಿಡಿಯೋ ಫುಲ್ ವೈರಲ್ ಆಗಿದ್ದು, ಕಾಲೇಜು ಯೂನಿಫಾರಂನಲ್ಲೇ ಕಿಸ್ಸಿಂಗ್ ನಲ್ಲಿ ತೊಡಗಿರೋ ಕಾರಣದಿಂದ ಮಂಗಳೂರಿನ ಪ್ರತಿಷ್ಠಿತ ಕಾಲೇಜಿನ ವಿದ್ಯಾರ್ಥಿಗಳು ಎನ್ನುವುದು ಬೆಳಕಿಗೆ ಬಂದಿದೆ.

ಕೆಲ ವಿದ್ಯಾರ್ಥಿಗಳ ಮಧ್ಯೆ ವಿದ್ಯಾರ್ಥಿಯೊಬ್ಬ ವಿದ್ಯಾರ್ಥಿನಿಗೆ ಲಿಪ್ ಕಿಸ್ ಕೊಡ್ತಾ ಇರೋ ವಿಡಿಯೋ ಇದಾಗಿದ್ದು, ಯಾವುದೋ ಖಾಸಗಿ ಕೊಠಡಿಯಲ್ಲಿ ಅಶ್ಲೀಲ ವರ್ತಿಸಿ ವೀಡಿಯೋ ಮಾಡಲಾಗಿದೆ. ವಿಡಿಯೋ ವೈರಲ್ ಬೆನ್ನಲ್ಲೇ ವೀಡಿಯೋ ಮಾಡಿ ವೈರಲ್ ಮಾಡಿದ ವಿದ್ಯಾರ್ಥಿಯನ್ನ ಮಂಗಳೂರು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸದ್ಯ ವಿದ್ಯಾರ್ಥಿಯೊಬ್ಬನ ವಶಕ್ಕೆ ಪಡೆದು ಮಂಗಳೂರು ಪೊಲೀಸರು ವಿಚಾರಣೆ ನಡೆಸುತ್ತಿದ್ದು, ಪ್ರಕರಣ ಸಂಬಂಧ ಕಾನೂನು ತಜ್ಞರ ಸಲಹೆ ಪಡೆದ ಕ್ರಮಕ್ಕೆ ಮುಂದಾಗಿದ್ದಾರೆ.

ನಗರದ ಪ್ರತಿಷ್ಠಿತ ಪಿಯು ಕಾಲೇಜಿನ ವಿದ್ಯಾರ್ಥಿಗಳು ಹುಚ್ಚಾಟ ನಡೆಸಿದ್ದಾರೆ. ಪಂದ್ಯ ಕಟ್ಟಿ ನಿಯಮದಂತೆ ವಿದ್ಯಾರ್ಥಿನಿಯನ್ನು ವಿದ್ಯಾರ್ಥಿ ಚುಂಬಿಸಿದ ಘಟನೆ ನಡೆದಿದೆ.
ಇದೀಗ ಆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ತನ್ನ ಸಹಪಾಟಿಗಳ ಎದುರು ಖುಲ್ಲಂ ಖುಲ್ಲಾ ವಿದ್ಯಾರ್ಥಿ ಚುಂಬಿಸಿದ್ದಾನೆ. ಪಂದ್ಯ ಕಟ್ಟಿ ಅವರಿಬ್ಬರೂ ಲಿಪ್ ಲಾಕ್ ಮಾಡಿದ್ದಾರೆ. ಪಕ್ಕದಲ್ಲಿದ್ದ ಒಬ್ಬ/ ಒಬ್ಬಾಕೆ ಅದನ್ನು ಮೊಬೈಲಿನಲ್ಲಿ ಸೆರೆಹಿಡಿದಿದ್ದಾರೆ. ಅದು ಯಾವ ರೀತಿಯ ಪಂದ್ಯ ಅನ್ನುವುದು ಬೆಳಕಿಗೆ ಬರಬೇಕಿದೆ. ಓದಲೆಂದು ಮನೆ ಬಿಟ್ಟು ರೂಮು ಮಾಡಿಕೊಂಡು ಇರುವ ಹುಡುಗ ಹುಡುಗಿಯರು ಕಂಬೈನ್ಡ್ ಸ್ಟಡಿ ಹೆಸರಿನಲ್ಲಿ ಅನಾಚಾರ ನಡೆಸಿದ್ದಾರೆ. ಈಗ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಆದರೆ ಈ ವಿಡಿಯೋ ವೈರಲ್ ಆಗ್ತಿದ್ದಂತೆ ಖಾಸಗಿ ಕಾಲೇಜು ಆಡಳಿತ ಗಂಭೀರವಾಗಿ ಪರಿಗಣಿಸಿದೆ. ವಿಡಿಯೋದಲ್ಲಿ ಮೂವರು ಯುವಕರು ಮತ್ತು ಮೂವರು ವಿದ್ಯಾರ್ಥಿನಿಯರಿದ್ದು, ಯಾರೋ ಒಬ್ಬರು ವಿಡಿಯೋ ಮಾಡಿದ್ದಾರೆ. ಮೂವರು ವಿದ್ಯಾರ್ಥಿನಿಯರು ಕಾಲೇಜು ಯೂನಿಫಾರಂ ಮತ್ತು ಐಡಿ ಕಾರ್ಡ್ ಸಹಿತ ಇದ್ದು, ಉಳಿದ ಮೂವರು ಯುವಕರು ಯೂನಿಫಾರಂನಲ್ಲಿಲ್ಲ.

ಈ 20 ಸೆಕೆಂಡ್‌ಗಳ ಈ ವಿಡಿಯೋವನ್ನು ಯಾವುದೋ ಖಾಸಗಿ ರೂಮ್‌ನಲ್ಲಿ ಚಿತ್ರೀಕರಿಸಿದಂತೆ ಕಾಣುತ್ತಿದೆ. ಮೇಲ್ನೋಟಕ್ಕೆ ಯುವಕರು ವಾಸ್ತವ್ಯ ಇರೋ ಕೊಠಡಿಯಂತೆ ಕಾಣುತ್ತಿದ್ದು, ವಿದ್ಯಾರ್ಥಿನಿಯರು ಅಲ್ಲಿಗೆ ಹೋಗಿರೋ ಸಾಧ್ಯತೆ ಇದೆ. ಸದ್ಯ ಮಂಗಳೂರು ಪೊಲೀಸರು ವಿದ್ಯಾರ್ಥಿನಿಯರು ಮತ್ತು ಆ ವಿದ್ಯಾರ್ಥಿಗಳ ಮಾಹಿತಿ ಕಲೆ ಹಾಕಿದ್ದು ವೀಡಿಯೋ ಮಾಡಿದ ವಿದ್ಯಾರ್ಥಿಯನ್ನು ವಶಕ್ಕೆ ಪಡೆದಿದ್ದಾರೆ.

Leave A Reply

Your email address will not be published.