ಕೊಡಗು : ಇಂದು ಮತ್ತೆ ಭೂಕಂಪನ ಜೊತೆಗೆ ಕೆಸರು ಮಿಶ್ರಿತ ನೀರು ಹರಿಯುವಿಕೆ!!!

Share the Article

ಮಡಿಕೇರಿ : ಇಂದು ಕೊಡಗು ಜಿಲ್ಲೆಯಲ್ಲಿ ಭೂಕಂಪನದ ಭಾರೀ ಶಬ್ಧ ಕೇಳಿಸಿದ ಅನುಭವವಾಗಿದ್ದು ಜನ ಭಯಭೀತರಾಗಿದ್ದಾರೆ. ಶಬ್ದ ಕೇಳಿದ ನಂತರ ಕೆಸರು ಮಿಶ್ರಿತ ನೀರು ಹರಿದುಬಂದಿರುವುದನ್ನು ಕಂಡು ಭಯಭೀತರಾಗಿ ಜನರು ಮನೆಯಿಂದ ಹೊರಗೆ ಓಡಿ ಬಂದಿರುವ ಘಟನೆ ನಡೆದಿದೆ.

ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ 2ನೇ ಮೊಣ್ಣಗೇರಿಯಲ್ಲಿ ಇಂದು ಬೆಳಗ್ಗೆ ಭೂಮಿ ಕಂಪಿಸುವಂತೆ ಭಾರೀ ಶಬ್ಧ ಅನುಭವವಾಗಿದ್ದು, ಜನರು ಭಯಭೀತರಾಗಿ ಮನೆಗಳಿಂದ ಹೊರಗೆ ಓಡಿ ಬಂದಿದ್ದಾರೆ. ಕೊಡಗು ಜಿಲ್ಲೆಯಲ್ಲಿ ಕಳೆದ ಹಲವು ದಿನಗಳಿಂದ ಭೂಕಂಪನದ ಅನುಭವವಾಗುತ್ತಿದ್ದು, ಇದೀಗ ಮತ್ತೆ ಹಲವೆಡೆ ಭೂಕಂಪನದ ಅನುಭವವಾಗಿದ್ದು, ಜನರಲ್ಲಿ ಆತಂಕ ಮನೆ ಮಾಡಿದೆ.

Leave A Reply