ತುಂಬಿದ ಸಭೆಯಲ್ಲಿ ಪ್ರತಾಪ್ ಸಿಂಹರನ್ನು ಅವಮಾನಿಸಿ ಕಳಿಸಿದ ಬೊಮ್ಮಾಯಿ, ತಲೆಗೆ ಏರಿತಾ ಅಧಿಕಾರದ ಅಮಲು ?!

ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ವಿರುದ್ಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪಿಎಂ ಆದಿಯಾಗಿ ಸಿಎಂವರೆಗೆ ಸಂಸದ ಪ್ರತಾಪಸಿಂಹ ರನ್ನು ನಿರ್ಲಕ್ಷ್ಯಕ್ಕೆ ಈಡು ಮಾಡಿದ್ದಾರೆಯೇ ಎಂಬ ಅನುಮಾನ ಮಂಗಳವಾರ ಬೆಂಗಳೂರಿನಲ್ಲಿ ನಡೆದ ದಸರಾ ಉನ್ನತಮಟ್ಟದ ಸಭೆಯಲ್ಲಿ ಮೂಡಿದೆ.

 

ಪ್ರತಾಪ್ ಸಿಂಹರಿಗೆ ಒಂದಾದರ ಮೇಲೆ ಒಂದರಂತೆ ಹೊಡೆತಗಳು ಬೀಳುತ್ತಿವೆ.ಬೆಂಗಳೂರಿನಲ್ಲಿ ದಸರಾ ಮಹೋತ್ಸವಕ್ಕೆ ಸಂಬಂಧಪಟ್ಟಂತೆ ಉನ್ನತ ಮಟ್ಟದ ಸಭೆಯೊಂದು ನಡೆದಿತ್ತು. ಈ ಸಂದರ್ಭದಲ್ಲಿ ಸಂಸದ ಪ್ರತಾಪ್ ಸಿಂಹ ತಮ್ಮ ಕ್ಷೇತ್ರಕ್ಕೆ ಸಂಬಂಧ ಪಟ್ಟ ದಾಖಲೆಯೊಂದನ್ನು ಸಿಎಂಗೆ ನೀಡಿದ್ದಾರೆ. ಅದನ್ನು ಸಿಎಂ ಓದುವಾಗಲೇ ನಿಮ್ಮ ಜೊತೆಗೆ ಅದರ ಫೋಟೋ ತೆಗೆದುಕೊಳ್ಳುತ್ತೇನೆ ಎಂದು ತಿಳಿಸಿದ್ದಾರೆ. ಆದರೆ ಪ್ರತಾಪ್ ಸಿಂಹ ಅವರ ಮಾತಿಗೆ ಸಿಡಿಮಿಡಿಗೊಂಡಿದ್ದಾರೆ. ‘ ವಿಶ್ವಾಸ ಇಲ್ಲಾಂದ್ರೆ ಇದನ್ನು ವಾಪಸ್ ತಗೊಂಡು ಹೋಗು ‘ ಎಂದು ಗುಡುಗಿದ್ದಾರೆ.

ಬೊಮ್ಮಾಯಿ ಅವರ ಕೋಪ ಕಂಡ ಪ್ರತಾಪ್ ಸಿಂಹ, ನಿಮ್ಮ ಜೊತೆ ಒಂದು ಫೋಟೋ ತೆಗೆದುಕೊಳ್ಳುತ್ತೇನೆ ಎಂದು ಹೇಳಿದ್ದಾರೆ. ಇದರಿಂದ ಮತ್ತಷ್ಟು ಅಸಮಾಧಾನಗೊಂಡ ಸಿಎಂ ಬೊಮ್ಮಾಯಿ, ‘ನನ್ ಜೊತೆ ಫೋಟೊ ಬೇಡ, ಅತಿ ಬುದ್ದಿವಂತರ ಜೊತೆ ಕೆಲಸ ಮಾಡೋದೆ ಕಷ್ಟ ‘ ಎಂದು ಸಿಟ್ಟಿನಿಂದ ಬೇರೊಂದು ಕಡೆ ಮುಖ ತಿರುಗಿಸಿದ್ದಾರೆ.

ಫೋಟೋ ಕೇಳೋದು, ಸೆಲ್ಫಿ ಕೇಳೋದು ಸಹಜ ತಾನೇ. ಅದಕ್ಕೆ ಓರ್ವ ಸಂಸದನನ್ನು ಅವಮಾನಿಸುವ ಅಗತ್ಯ ಏನಿತ್ತು ಎಂದು ಈ ಆಕ್ಸಿಡೆಂಟಲ್ ಮುಖ್ಯಮಂತ್ರಿಯನ್ನು ಪ್ರತಾಪ್ ಸಿಂಹ ಅಭಿಮಾನಿಗಳು ಕೇಳುತ್ತಿದ್ದಾರೆ.

ಮುಖ್ಯಮಂತ್ರಿಯವರ ಸುದ್ದಿಗೋಷ್ಠಿ ಮುಗಿಯುತ್ತಿದ್ದಂತೆ ಸಿಎಂ ಅವರ ಹಿಂದಿನಿಂದ ಹೋದ ಪ್ರತಾಪ್ ಸಿಂಹ ಮತ್ತೆ ಪೇಪರ್ ಹಿಡಿದು ಕೇಳಿಕೊಂಡಿದ್ದರೂ ಬೊಮ್ಮಾಯಿ ಅವರು ಮಾತನಾಡಿಸದೇ ಹೊರಟು ಹೋಗಿದ್ದಾರೆ. ನಂತರ ಕಬಿನಿಗೆ ಬಾಗಿನ ಅರ್ಪಿಸಲು ಬಸವರಾಜ ಬೊಮ್ಮಾಯಿ ಮೈಸೂರಿಗೆ ಆಗಮಿಸಿದ್ದರು. ಚಾಮುಂಡಿ ಬೆಟ್ಟ, ಕಬಿನಿ ಹಾಗೂ ಕೆಆರ್‌ಸ್ ಮೂರು ಕಡೆ ನಡೆದ ಸಿಎಂ ಕಾರ್ಯಕ್ರಮಗಳಲ್ಲಿ ಪ್ರತಾಪಸಿಂಹ ಭಾಗವಹಿಸಿದಿರುವುದು ಭಿನ್ನಾಭಿಪ್ರಾಯ ಮೂಡಿರುವ ಅನುಮಾನ ಮೂಡಿಸಿದೆ.

Leave A Reply

Your email address will not be published.