ದಿನವಿಡೀ ಬಿಸಿ ನೀರು ಕುಡಿಯುವ ಅಭ್ಯಾಸ ಹೊಂದಿದ್ದೀರಾ? ಹಾಗಾದರೆ ಈ ಸಮಸ್ಯೆಗಳ ಬಗ್ಗೆ ತಿಳಿದುಕೊಂಡರೆ ಉತ್ತಮ

ಇತ್ತೀಚೆಗೆ ಜನ ಫಿಟ್ ಆಗಿರಲು ಏನೆಲ್ಲಾ ಕಸರತ್ತು ಮಾಡುತ್ತಾರೆ. ಅದರಲ್ಲಿ ಒಂದು ದಿನವಿಡೀ ಬಿಸಿನೀರು ಕುಡಿಯುವುದು. ಇತ್ತೀಚಿನ ದಿನಗಳಲ್ಲಿ ಅನಾರೋಗ್ಯಕ್ಕೆ ಒಳಗಾಗುವವರ ಸಂಖ್ಯೆ ಹೆಚ್ಚುತ್ತಿದೆ. ಏಕೆಂದರೆ ಆಹಾರ ಪದ್ಧತಿ ಮತ್ತು ಜೀವನಶೈಲಿಯಿಂದ ಅವರು ಕೆಲವು ರೀತಿಯ ಕಾಯಿಲೆಗಳಿಂದ ಪ್ರಭಾವಿತರಾಗುತ್ತಾರೆ.

 

ಬಿಸಿ ನೀರು ಆರೋಗ್ಯಕ್ಕೆ ಒಳ್ಳೆಯದು. ಬೆಳಿಗ್ಗೆ ಬೆಚ್ಚಗಿನ ನೀರನ್ನು ಸೇವಿಸುವುದರಿಂದ ವಿವಿಧ ರೋಗಗಳನ್ನು ಗುಣಪಡಿಸಬಹುದು ಎಂದು ಸಂಶೋಧಕರು ಸಾಬೀತುಪಡಿಸಿದ್ದಾರೆ. ಆದರೆ, ದಿನವಿಡೀ ಬಿಸಿ ನೀರಿನ ಸೇವನೆ ನಮ್ಮ ಆರೋಗ್ಯಕ್ಕೆ ಯಾವ ರೀತಿಯ ತೊಂದರೆ ಉಂಟು ಮಾಡುತ್ತದೆ ಎಂಬುದನ್ನು ಸಂಶೋಧಕರು ಹೇಳುತ್ತಾರೆ. ಬಿಸಿ ನೀರು ಕುಡಿಯುವುದರಿಂದ ಲಾಭಗಳಿದ್ದರೂ ಅಧಿಕವಾಗಿ ಸೇವಿಸಿದರೆ ನಷ್ಟವೂ ಉಂಟು!

ಯಾರಾದರೂ ತೂಕ ಇಳಿಸಿಕೊಳ್ಳಲು ಅಥವಾ ಹೊಟ್ಟೆ ಕರಗಿಸಲು ದಿನವಿಡೀ ಬಿಸಿ ನೀರು ಕುಡಿಯುವ ಅಭ್ಯಾಸ ಹೊಂದಿದ್ದರೆ ಈ ಅಭ್ಯಾಸವನ್ನು ಬದಲಾಯಿಸಿಕೊಳ್ಳುವುದು ಉತ್ತಮ ಎಂದು ತಜ್ಞರು ಸಲಹೆ ನೀಡುತ್ತಾರೆ. ಅವರ ಪ್ರಕಾರ. ಹೀಗೆ ಮಾಡುವುದರಿಂದ ರಕ್ತದಲ್ಲಿ ನೀರಿನ ಪ್ರಮಾಣ
ಹೆಚ್ಚಾಗುವ ಅಪಾಯವಿರುತ್ತದೆ.

ಕಿಡ್ನಿ ನಮ್ಮ ದೇಹದ ಪ್ರಮುಖ ಅಂಗ. ಇದು ವಿಷವನ್ನು ತೆಗೆದುಹಾಕುವ ಕೆಲಸ ಮಾಡುತ್ತದೆ. ಇದರ ದಕ್ಷತೆಯು ಸ್ವಲ್ಪಮಟ್ಟಿಗೆ ನೀರಿನ ಮೇಲೆ ಅವಲಂಬಿತವಾಗಿರುತ್ತದೆ. ಆದರೆ ಹೆಚ್ಚು ಬಿಸಿ ನೀರು ಸೇವಿಸುವುದರಿಂದ ಕಿಡ್ನಿ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.

ರಾತ್ರಿ ಮಲಗುವಾಗ ನಿರಂತರವಾಗಿ ಬಿಸಿನೀರು ಕುಡಿದರೆ ನಿದ್ರಿಸಲು ತೊಂದರೆಯಾಗಬಹುದು. ಹೆಚ್ಚು ನೀರು ಕುಡಿಯುವುದರಿಂದ ಪದೇ ಪದೇ ಮೂತ್ರ ವಿಸರ್ಜನೆಯ ಸಮಸ್ಯೆಗಳು ತಲೆದೋರಬಹುದು.

ನಿಮಗೆ ಬಾಯಾರಿಕೆಯಾಗದಿದ್ದರೂ, ನೀವು ಇನ್ನೂ ಹೆಚ್ಚವು ಹೆಚ್ಚು ಬಿಸಿನೀರನ್ನು ಕುಡಿಯುತ್ತಿದ್ದರೆ, ನೀವು ಊದಿಕೊಂಡ ನರಗಳ ಸಮಸ್ಯೆಯನ್ನು ಎದುರಿಸುತ್ತೀರಿ. ಮೆದುಳಿನ ನರಗಳಲ್ಲಿ ಉರಿಯೂತ ಉಂಟಾಗುವ ಸಾಧ್ಯತೆ ಇದೆ ಎನ್ನುತ್ತಾರೆ ತಜ್ಞರು. ಆದ್ದರಿಂದ, ಹಗಲಿನಲ್ಲಿ ಸೀಮಿತ ಪ್ರಮಾಣದಲ್ಲಿ ಮಾತ್ರ ಉಗುರು ಬೆಚ್ಚಗಿನ ನೀರನ್ನು ಕುಡಿಯುವುದು ದೇಹಕ್ಕೆ ಆರೋಗ್ಯಕ್ಕೆ ಉತ್ತಮ

Leave A Reply

Your email address will not be published.