ಸಿಕ್ಕಾಪಟ್ಟೆ ಅಳು ವವರಿಗೆ ಇಲ್ಲಿದೆ ನಗು ಸುದ್ದಿ

ಕೆಲವರಿಗೆ ಸಣ್ಣ ಪುಟ್ಟ ವಿಚಾರಕ್ಕೆ ಕಣ್ಣಲ್ಲಿ ನೀರು ಬರುವುದನ್ನು ನೋಡಿರುತ್ತೀರಿ. ಅಂಥವರು ಖುಷಿಗೂ ಅಳ್ತಾರೆ, ದುಃಖಕ್ಕೂ ಅಳುತ್ತಾರೆ. ಒಂದು ವೇಳೆ ಗಂಡು ಮಕ್ಕಳು ಕಣ್ಣಲ್ಲಿ ನೀರು ಹಾಕಿದ್ರೆ ಅದ್ಯಾಕೆ ಹೆಣ್ಣು ಮಕ್ಕಳ ರೀತಿ ಅಲ್ಲೀಯಾ ಅಂತಾರೆ ಜನ.

 

ಅದೇ ಹೆಣ್ಣು ಮಕ್ಕಳು ಅಳುತ್ತಿದ್ದರೆ “ಅಳು ಮುಂಜಿ’ ಅಂತ ಕರೆಯುತ್ತಾರೆ. ಇದು ಎಲ್ಲರಿಗೂ ಗೊತ್ತಿರುವ ವಿಚಾರ. ನೀವು ಅಳುವುದರಲ್ಲಿ ಮೊದಲಿನವರಾಗಿದ್ದರೆ ಮುಜುಗರಪಟ್ಟುಕೊಳ್ಳಬೇಕಾಗಿಲ್ಲ. ನಾವು ಹೇಳೋ ಈ ಸುದ್ದಿ ಕೇಳಿ ನಿಮಗೂ ಖುಷಿಯಾಗ ಬಹುದು‌. ಬಹುಶಃ ಈ ವಿಷಯ ಕೇಳಿ ಕೂಡಾ ನಿಮಗೆ ಕಣ್ಣೀರುಬರಬಹುದು.

ವಾಸ್ತವವಾಗಿ ಸಣ್ಣ ಸಣ್ಣ ವಿಚಾರಕ್ಕೂ ಕಣ್ಣಲ್ಲಿ ನೀರು ಹಾಕುವವರು ದುರ್ಬಲರಲ್ಲ. ಹೌದು, ಸಂಶೋಧಕರ ಪ್ರಕಾರ, ಸ್ವಭಾವದಲ್ಲಿ ಅವರು ತುಂಬಾ ಒಳ್ಳೆಯವರಾಗಿರುತ್ತಾರಂತೆ. ಉತ್ತಮ ಗುಣ ಹೊಂದಿರುತ್ತಾರಂತೆ. ನೀವು ಅಳುವವರಲ್ಲಿ ಒಬ್ಬರಾಗಿದ್ದರೆ ನಿಮ್ಮನ್ನು ನೀವು ದುರ್ಬಲರು ಎಂದು ಭಾವಿಸಬೇಡಿ. ಬೇರೆಯವರು ಏನಂದುಕೊಳ್ತಾರೋ ಅಂತಾ ಚಿಂತೆ ಮಾಡಬೇಡಿ. ಅಳೋದು ಒಂದು ಒಳ್ಳೆ ಗುಣ ಎಂಬುದು ನೆನನಪಿರಲಿ.

ಖಿನ್ನತೆ, ಒತ್ತಡ ಹೋಗಲಾಡಿಸಲು ಅಳು ಬೆಸ್ಟ್ ಔಷಧಿ ಅಂದ್ರೆ ನೀವು ನಂಬಲೇಬೇಕು. ಖಿನ್ನತೆ ಮನೆ ಮಾಡಿದ್ದರೆ ಮನಸ್ಸಿನಲ್ಲಿ ನೆಗೆಟಿವಿಟಿ ಹೆಚ್ಚಾಗಿ ಅನೇಕ ಸಮಸ್ಯೆಗಳು ಶುರುವಾಗುತ್ತವೆ. ಒತ್ತಡ, ಖಿನ್ನತೆ ನಿಮ್ಮನ್ನು ಕಾಡುತ್ತಿದ್ದರೆ ಸಣ್ಣ ಮಕ್ಕಳಂತೆ ಬಿಕ್ಕಿ ಬಿಕ್ಕಿ ಅತ್ತುಬಿಡಿ. ಇದ್ರಿಂದ ನಿಮ್ಮ ಮನಸ್ಸಿನಲ್ಲಿರುವ ಭಾರ ಕಡಿಮೆಯಾಗುತ್ತದೆ.

ಓದಿದ್ರಲ್ಲ, ನೋಡಿ ಇನ್ನು ಯಾರಾದರೂ ಅಳುಮುಂಜಿ ಅಥವಾ ಹೆಣ್ಮಕ್ಕಳ ಥರಾ ಅಳ್ತೀಯಲ್ಲ ಅಂದರೆ ಬೇಜಾರು ಮಾಡಬೇಡಿ. ಆಲ್ ದಿ ಬೆಸ್ಟ್.

Leave A Reply

Your email address will not be published.