ಬಿಜೆಪಿ ಮಹಿಳಾ ನಾಯಕಿ ಮೇಲೆ ನಡುರಸ್ತೆಯಲ್ಲೇ ಹಲ್ಲೆ – ವೀಡಿಯೋ ವೈರಲ್

ಮುಂಬೈನ ನಡುರಸ್ತೆಯಲ್ಲೇ ಹರಿತವಾದ ಆಯುಧದಿಂದ ಬಿಜೆಪಿ ಮಹಿಳಾ ನಾಯಕಿ ಸುಲ್ತಾನಾ ಖಾನ್ ಮೇಲೆ ಹಲ್ಲೆ ನಡೆದ ಘಟನೆ ಭಾನುವಾರ ರಾತ್ರಿ 11 ಗಂಟೆ ಸುಮಾರಿಗೆ ನಡೆದಿದೆ.

 

ಸುಲ್ತಾನಾ ಖಾನ್ ಅವರು ಬಿಜೆಪಿಯ ಅಲ್ಪಸಂಖ್ಯಾತ ಮೋರ್ಚಾದ ರಾಜ್ಯಾಧ್ಯಕ್ಷರಾಗಿದ್ದಾರೆ. ಭಾನುವಾರ ರಾತ್ರಿ ತನ್ನ ಪತಿಯೊಂದಿಗೆ ವೈದ್ಯರ ಭೇಟಿಗಾಗಿ ಹೋಗುತ್ತಿದ್ದರು. ಆಗ ಇಬ್ಬರು ಬೈಕ್‌ ಸವಾರರು ರಸ್ತೆ ಮಧ್ಯದಲ್ಲಿ ಅವರ ಕಾರನ್ನು ತಡೆದು ಸುಲ್ತಾನಾ ಖಾನ್‌ ಮೇಲೆ ಹಲ್ಲೆಗೈದು, ಅವರ ಮೇಲೆ ದೌರ್ಜನ್ಯವೆಸಗಿದ್ದಾರೆ. ಈ ಸಂದರ್ಭದಲ್ಲಿ ಪತಿ ಜೋರಾಗಿ ಕಿರುಚಿದ ಸಂದರ್ಭದಲ್ಲಿ ಹೆಚ್ಚಿನ ಜನರು ಜಮಾಯಿಸಿದ್ದು, ನಂತರ ಸುಲ್ತಾನಾ ಖಾನ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಹಲ್ಲೆಗೈದ ಆರೋಪಿಗಳು ಜನ ಜಮಾಯಿಸುತ್ತಿದ್ದಂತೆ ಪರಾರಿಯಾಗಿದ್ದಾರೆ.

ಸುಲ್ತಾನಾ ಪಕ್ಷದ ಮುಖಂಡರಿಗೆ ದೂರು ನೀಡಿದ್ದರು. ಹೀಗಾಗಿ, ಈ ದಾಳಿಯ ಹಿಂದೆ ಪಕ್ಷದ ಕೆಲವು ಕಾರ್ಯಕರ್ತರ ಕೈವಾಡವೂ ಇದೆ ಎಂದು ಸುಲ್ತಾನ ಪತಿ ಶಂಕೆ ವ್ಯಕ್ತಪಡಿಸಿದ್ದಾರೆ. ಪೊಲೀಸರು ಈ ಬಗ್ಗೆ ತನಿಖೆ ಆರಂಭಿಸಿದ್ದು, ಸಂತ್ರಸ್ತೆ ತುಂಬಾ ಭಯಗೊಂಡಿದ್ದಾಳೆ, ಹೀಗಾಗಿ ಆಕೆ ಇನ್ನೂ ಹೇಳಿಕೆ ನೀಡುವ ಸ್ಥಿತಿಯಲ್ಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದಾಳಿಕೋರರು ಯಾರು? ಎಂಬುದು ತನಿಖೆಯ ಬಳಿಕವಷ್ಟೇ ತಿಳಿದು ಬರಬೇಕಿದೆ.

Leave A Reply

Your email address will not be published.