ರಕ್ತಪರೀಕ್ಷೆಗೆ ಹೆದರಿದ ಪೊಲೀಸ್ ಚಿಕ್ಕ ಮಗುವಿನಂತೆ ಜೋರಾಗಿ ಅತ್ತ ವೀಡಿಯೋ ವೈರಲ್ !!!

ಸೂಜಿ ಕಂಡರೆ ಹೆದರಿ ಓಡೋರನ್ನು ನೋಡಿದ್ದೇವೆ. ಕೆಲವರು ಇಂಜೆಕ್ಷನ್ ಚುಚ್ಚಿಸಿಕೊಳ್ಳುವುದೆಂದರೆ ನಿಜಕ್ಕೂ ತುಂಬಾ ಭಯ ಪಡುತ್ತಾರೆ. ಇತ್ತೀಚೆಗೆ ಕೊರೊನಾ ಮಹಾಮಾರಿ ಬಂದಾಗ ಕೋವಿಡ್ 19 ವ್ಯಾಕ್ಸಿನ್ ತೆಗೆದುಕೊಳ್ಳಲು ಹೆದರಿ ಓಡ್ತಾ ಇರೋರನ್ನು ನೋಡಿದ್ದೀರಾ…ಏನೆಲ್ಲಾ ರಂಪಾಟ ಮಾಡಿದ್ದ ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದವು.

 

ರಕ್ತ ಪರೀಕ್ಷೆಗೆ ಎಲ್ಲರಿಗೂ ತಿಳಿದಿರುವ ಹಾಗೇ ಸೂಜಿ ಚುಚ್ಚಿಸಿಕೊಳ್ಳದೇ ವಿಧಿಯಿಲ್ಲ. ಹೀಗಾಗಿ ಸೂಜಿ ನೋಡುವಾಗ ಓಡುವವರು ವಿಧಿಯಿಲ್ಲದೆ ಸೂಜಿ ಚುಚ್ಚಿಸಿಕೊಳ್ಳಬೇಕಾಗುತ್ತದೆ. ಈ ವೇಳೆ ಒಂದಷ್ಟು ಮಕ್ಕಳು ಕೂಗುತ್ತಾರೆ, ಕಿರುಚಾಡುತ್ತಾರೆ. ಇದರಿಂದ ಹಿರಿಯರು ಹೊರತಾಗಿಲ್ಲ ಎಂಬುದಕ್ಕೆ ಈ ಪೊಲೀಸಪ್ಪನೇ ಸಾಕ್ಷಿ. ಹೌದು, ರಕ್ತಪರೀಕ್ಷೆ ಮಾಡುವ ವೇಳೆ ಪೊಲೀಸ್ ಸಿಬ್ಬಂದಿಯೊಬ್ಬರು ಚಿಕ್ಕ ಮಕ್ಕಳಂತೆ ಜೋರಾಗಿ ಕೂಗುತ್ತಾ ಕಿರುಚಾಡಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಇದರ ವಿಡಿಯೋ ವೈರಲ್ ಆಗುತ್ತಿದೆ.

ಈ ವೈರಲ್ ವಿಡಿಯೋ ಉತ್ತರ ಪ್ರದೇಶದ ಉನ್ನಾವೋದ ಪೊಲೀಸ್ ತರಬೇತಿ ಶಿಬಿರದ್ದು ಎಂದು ಹೇಳಲಾಗಿದೆ. ಮಾಧ್ಯಮ ವರದಿಗಳ ಪ್ರಕಾರ, ಪೊಲೀಸ್ ಅಧಿಕಾರಿಯ ಸೂಚನೆಯ ಮೇರೆಗೆ ಆರೋಗ್ಯ ಶಿಬಿರವನ್ನು ಆಯೋಜಿಸಲಾಗಿದೆ. ನಂತರ ತರಬೇತಿಗಾಗಿ ಸಿಬ್ಬಂದಿಗಳ ರಕ್ತ ಪರೀಕ್ಷೆಗಾಗಿ ಮಾದರಿಗಳನ್ನು ಸಂಗ್ರಹಿಸಲಾಗಿದೆ.

ಇದರಲ್ಲಿ ಹೆಡ್ ಕಾನ್‌ಸ್ಟೇಬಲ್ ಅಫ್ಲಾಬ್ ರಕ್ತದ ಮಾದರಿ ನೀಡಲು ಮುಂದಾದಾಗ ವೈದ್ಯರ ಕೈಯಲ್ಲಿ ಸೂಜಿಯನ್ನು ನೋಡಿದ ಕೂಡಲೇ ನಿಧಾನವಾಗಿ ಸೂಜಿ ಚುಚ್ಚುವಂತೆ ಕೈಮುಗಿದ ಪ್ರಾರ್ಥಿಸಲು ಪ್ರಾರಂಭಿಸಿದರು. ಸೂಜಿಯುಳ್ಳ ಚುಚ್ಚುಮದ್ದನ್ನು ವೈದ್ಯರು ಕೈಗೆತ್ತಿಕೊಂಡಾಗ ಪೊಲೀಸ್ ಸಿಬ್ಬಂದಿ ಜೋರಾಗಿ ಅಳುತ್ತಾರೆ. ಈ ವೇಳೆ ವೈದ್ಯರ ಸೂಚನೆಯಂತೆ ಉಳಿದ ಮೂರ್ನಾಲ್ಕು ಮಂದಿ ಸಿಬ್ಬಂದಿಗಳು ಅವರನ್ನು ಹಿಡಿದುಕೊಂಡಿದ್ದಾರೆ. ಸೂಜಿ ಚುಚ್ಚುವಾಗ ಭಿನ್ನ ವಿಭಿನ್ನ ಧ್ವನಿಗಳ ಮೂಲಕ ಅಳುತ್ತಾರೆ.

https://www.instagram.com/reel/Cf6Ddu2F9XA/?utm_source=ig_web_copy_link

ಪೊಲೀಸ್ ಕ್ಷೇತ್ರ ಒಂದು ಧೈರ್ಯಶಾಲಿ ಇಲಾಖೆ. ಈ ಇಲಾಖೆಯಲ್ಲಿ ಸೇವೆ ಮಾಡುತ್ತಿರುವವರು ಒಂದು ಸಣ್ಣ ಸೂಜಿಗೆ ಭಯಪಡುವುದು ಎಂದರೆ ಯಾರಾದರೂ ನಂಬ್ಲಿಕ್ಕೆ ಕಷ್ಟ. ಅಫ್ಲಾಬ್ ಅವರು ಸೂಜಿ ಚುಚ್ಚಿಸಿಕೊಳ್ಳುವಾಗ ಚಿಕ್ಕ ಮಗುವಿನಂತೆ ಅಳುತ್ತಾ ಚೀರುವ ವೀಡಿಯೋ ನಿಮ್ಮ ಮುಖದಲ್ಲಿ ನಗು ಮೂಡಿಸದೇ ಇರದು.

Leave A Reply

Your email address will not be published.