ಮುಂದಿನ ಚುನಾವಣೆಯಲ್ಲಿ ನಮ್ಮ ಗುಂಪಿನ ಒಬ್ಬ ಶಾಸಕ ಸೋತರೂ ರಾಜಕೀಯ ಸನ್ಯಾಸ : ಏಕನಾಥ್ ಶಿಂಧೆ
ಮುಂಬಯಿ: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ತಮ್ಮನ್ನು ಬೆಂಬಲಿಸಿದ 50 ಶಾಸಕರ ಪೈಕಿ ಒಬ್ಬ ಶಾಸಕ ಸೋತರೂ ಶಾಶ್ವತವಾಗಿ ರಾಜಕೀಯ ತೊರೆಯುತ್ತೇನೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಹೇಳಿದ್ದಾರೆ.
ಶಿವಸೇನೆಯ ಹಿಂದಿನ ಇತಿಹಾಸದ ಪ್ರಕಾರ ಉದ್ಧವ್ ಠಾಕ್ರೆ ವಿರುದ್ಧ ಹೋದ ಎಲ್ಲಾ 50 ಶಾಸಕರು ಈಗ ಚುನಾವಣೆಯಲ್ಲಿ ಸೋಲುತ್ತಾರೆ ಎಂದು ಜನರು ಹೇಳುತ್ತಾರೆ. ಆದರೆ ಒಬ್ಬ ಶಾಸಕ ಚುನಾವಣೆಯಲ್ಲಿ ಸೋತರೂ, ನಾನು ಶಾಶ್ವತವಾಗಿ ರಾಜಕೀಯ ಸನ್ಯಾಸ ಸ್ವೀಕರಿಸುತ್ತೇನೆ ಎಂದು ಶಿಂಧೆ ಹೇಳಿದ್ದಾರೆ. ಶುಕ್ರವಾರ ತಮ್ಮ ಶಾಸಕರ ಗುಂಪು ಏಕನಾಥ್ ಶಿಂಧೆ ಅವರನ್ನು ಸನ್ಮಾನಿಸಿದರು. ಆ ಸಂದರ್ಭ ಮಾತನಾಡಿದ ಅವರು ನಮ್ಮ 50 ಶಾಸಕರು ತಮ್ಮನ್ನು ಬೆಂಬಲಿಸಲು ತೆಗೆದುಕೊಂಡ ರಿಸ್ಕ್ ಬಗ್ಗೆ ಮಾತನಾಡಿದರು. ಅವರ ಎಲ್ಲಾ ಶಾಸಕರ ಆಗು ಹೋಗುಗಳ ಬಗ್ಗೆ ಗಮನ ಹರಿಸುವುದು ತಮ್ಮ ಕರ್ತವ್ಯ, ಅವರ ಕ್ಷೇತ್ರಗಳ ಸಮಸ್ಯೆಗಳನ್ನು ಪರಿಹರಿಸಲು ಸಮಯ ನೀಡುತ್ತೇನೆ ಎಂದಿದ್ದಾರೆ.
“ಆರಂಭದಲ್ಲಿ ಕೆಲವೇ ಶಾಸಕರು ನಮ್ಮೊಂದಿಗಿದ್ದರು, ನಂತರ 50 ಮಂದಿ ಸೇರಿಕೊಂಡರು. ಸೂರತ್ ಮತ್ತು ಗುವಾಹಟಿಯಲ್ಲಿ ಇಷ್ಟು ದಿನ ನಿದ್ದೆ ಬರಲಿಲ್ಲ. ನಾನು 1.00 ಗಂಟೆಗೆ ಮಲಗಲು ಮತ್ತು ಬೆಳಗ್ಗೆ 3 ಗಂಟೆಗೆ ಎದ್ದೇಳುತ್ತಿದ್ದೆ. ಇದು ನನ್ನ ಜೀವನದಲ್ಲಿ ಒಂದು ಅತಿ ನಿರ್ಣಾಯಕ ಕ್ಷಣವಾಗಿತ್ತು. ನಾನು ನನ್ನ ಭವಿಷ್ಯದ ಬಗ್ಗೆ ಚಿಂತಿಸಲಿಲ್ಲ ಆದರೆ ಉದ್ಧವ್ ಠಾಕ್ರೆ ಅವರನ್ನು ಬಿಟ್ಟು ನನ್ನೊಂದಿಗೆ ಬಂದಿದ್ದ 50 ಶಾಸಕರ ಭವಿಷ್ಯದ ಬಗ್ಗೆ ನನಗೆ ಕಾಳಜಿ ಇತ್ತು. ಅವರು ನನ್ನ ನಾಯಕತ್ವದಲ್ಲಿ ವಿಶ್ವಾಸ ತೋರಿಸಿದರು ಆದರೆ ಅವರ ಡರ್ಟಿ ಗೇಮ್ ಗೆ ಯಾರೋಬ್ಬರು ಬೆಂಬಲ ನೀಡಲಿಲ್ಲ. ನಮ್ಮ ವಿರುದ್ಧ ಇದ್ದವರು ನಮ್ಮ ವಿರುದ್ಧ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದರು. ಬಿಜೆಪಿ ಜೊತೆ ಸೇರಿ ಸರ್ಕಾರ ರಚಿಸಿದ್ದ ನಿರ್ಧಾರವನ್ನುನರು ಸ್ವಾಗತಿಸಿದ್ದಾರೆ ಎಂದು ತಿಳಿಸಿದ್ದಾರೆ. ಎಂದು ಶಿಂಧೆ ಹೇಳಿದ್ದಾರೆ.
ಎನ್ ಸಿಪಿ ಶಾಸಕರಿಗೆ ಮಾತ್ರ ಅನುದಾನ ಬಿಡುಗಡೆ ಮಾಡಲಾಗುತ್ತಿತ್ತು ಮಹಾ ವಿಕಾಸ್ ಅಘಾಡಿ ಸರ್ಕಾರ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಸೇನಾ ಶಾಸಕರನ್ನು ಅತ್ಯಂತ ಕೆಟ್ಟದಾಗಿ ನಡೆಸಿಕೊಳ್ಳಲಾಗಿತ್ತು ಎಂದು ಅವರು ಆರೋಪಿಸಿದ್ದಾರೆ. ನಾನು ಸದ್ಯ ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿದ್ದು ಯಾರೋಬ್ಬರು ಸಮಸ್ಯೆ ನೀಡಲು ಸಾಧ್ಯವಿಲ್ಲ ಎಂದು ವಿಶ್ವಾಸ ವ್ಯಕ್ತ ಪಡಿಸಿದ್ದಾರೆ.