14 ಬಾರಿ ಗರ್ಭಪಾತಗಳ ಸರಮಾಲೆ, ನೊಂದ ಯುವತಿ ಕೊನೆಗೆ ಮಾಡಿದ್ದೇನು….ಆಕೆ ಬರೆದ ಆ ಪತ್ರದಲ್ಲಿ ಏನೇನಿತ್ತು ಗೊತ್ತೇ?

Share the Article

ದೆಹಲಿಯಲ್ಲಿ ಇತ್ತೀಚೆಗೆ ಮಹಿಳೆಯೊಬ್ಬಳ ಆತ್ಮಹತ್ಯಾ ಪ್ರಕರಣ, ಎಂಥವರನ್ನೂ ಒಂದು ಕ್ಷಣ ವೇದನೆಯ ಕಹಿ ಘಟನೆಗೆ ಎಳೆದಂತಾಗುತ್ತದೆ. ಯಾಕಂದ್ರೆ ಈ ಮಹಿಳೆ ತನ್ನ ಜೀವನದಲ್ಲಿ ಅನುಭವಿಸಿದ ಒಂದೊಂದು ನರಕಯಾತನೆಯ ಕ್ಷಣಗಳನ್ನಲ್ಲೆಲ್ಲಾ ಪತ್ರದಲ್ಲಿ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆಕೆ 14 ಬಾರಿ ಒತ್ತಾಯದ ಗರ್ಭಪಾತಕ್ಕೆ ನಾನು ಒಳಗಾಗಿದ್ದೇನೆ ಎಂಬ ಶಾಕಿಂಗ್ ಮಾಹಿತಿಯನ್ನು ಬರೆದಿಟ್ಟಿದ್ದಾಳೆ.

ಸಂತ್ರಸ್ತೆ ಮಹಿಳೆಗೆ 33 ವರ್ಷ. ಆಕೆ ತನ್ನ ಗೆಳೆಯನ ಜೊತೆಗೆ ಲೀವ್ ಇನ್ ರಿಲೇಶನ್‌ಶಿಪ್‌ನಲ್ಲಿದ್ದಳು. ಕಳೆದ 8ವರ್ಷಗಳಿಂದಲೂ ಅವರು ಜೊತೆಗೇ ಗಂಡಹೆಂಡತಿಯರ ಹಾಗೇ ಇದ್ದವರು. ಅದೇ ಗೆಳೆಯನ ಜೊತೆಗೆ ದೈಹಿಕ ಸಂಬಂಧ ಬೆಳೆಸಿಕೊಂಡಿದ್ದ ಆಕೆ 14 ಬಾರಿ ಗರ್ಭವತಿಯಾಗಿದ್ದಳು. ಆದರೆ ಅದೇ ಗೆಳೆಯ ಒತ್ತಾಯದಿಂದ ಗರ್ಭಪಾತ ಮಾಡಿಸಿದ್ದ. ಇದೆಲ್ಲ ಹಿಂಸೆಗಳನ್ನ ತಡೆದುಕೊಳ್ಳೋದಕ್ಕಾಗದೇ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಆತ್ಮಹತ್ಯಾ ಪತ್ರದಲ್ಲಿ ಬರೆದಿಟ್ಟಿದ್ದಾಳೆ ಆ ಮಹಿಳೆ.

ಜುಲೈ 5ರಂದು ದೆಹಲಿಯ ಜೈತ್‌ಪುರದಲ್ಲಿ ಈ ಘಟನೆ ನಡೆದಿದ್ದು, ಮಹಿಳೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಯೊಂದು ವರದಿಯಾಗಿತ್ತು. ಪತ್ರದಲ್ಲಿ ಮಹಿಳೆ ತನ್ನ ಲಿವ್ ಇನ್ ರಿಲೇಶನ್‌ಶಿಪ್ ಗೆಳೆಯ ಕೊಡುತ್ತಿದ್ದ ಚಿತ್ರಹಿಂಸೆಗಳ ಬಗ್ಗೆ ಬರೆದಿದ್ದು, ಆತ ತನ್ನನ್ನು ದೈಹಿಕವಾಗಿ ಬಳಸಿಕೊಳ್ಳುತ್ತಿದ್ದ ಅನ್ನುವುದನ್ನೂ ಬರೆದಿದ್ದಾರೆ. ಅಷ್ಟೆ ಅಲ್ಲ ಆತ ಮದುವೆ ಮಾಡಿಕೊಳ್ಳುವ ನೆಪದಲ್ಲಿ ತನ್ನನ್ನ ಬಳಸಿಕೊಂಡು ಕೊನೆಗೆ ತನ್ನನ್ನು ದೂರ ಮಾಡಿದ್ದ ಅನ್ನುವುದು ಕೂಡಾ ಪತ್ರದಲ್ಲಿ ಬರೆಯಲಾಗಿದೆ.

ಈಕೆ ಈ ಮೊದಲೇ ಮದುವೆಯಾಗಿದ್ದರೂ ತನ್ನ ಗಂಡನಿಂದ ದೂರವಾಗಿ ಗೆಳೆಯನ ಜೊತೆ ವಾಸಿಸುತ್ತಿದ್ದಳು. ಆದರೆ ಆತ ಮಾತ್ರ ಆಕೆಯನ್ ಮೋಸ ಮಾಡಿ ದೂರವಾಗಿದ್ದ. ಮಾನಸಿಕವಾಗಿ ನೊಂದ ಆಕೆ, ಬೇರೆ ಮಾರ್ಗವಿಲ್ಲದೆ ಕೊನೆಗೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ದೆಹಲಿ ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.

ಈಗ ಪೊಲೀಸರು ನೋಯ್ಡಾ ಸಾಫ್ಟ್‌ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಆಕೆಯ ಗೆಳೆಯನನ್ನು ಬಂಧಿಸಿದ್ದಾರೆ. ಆತ್ಮಹತ್ಯೆಗೆ ಪ್ರಚೋದನೆ ಆರೋಪ ಆ ವ್ಯಕ್ತಿಯ ಮೇಲಿದೆ. ಆತ್ಮಹತ್ಯೆ ಮಾಡಿಕೊಂಡಿರುವ ಮಹಿಳೆಯ ಶವವನ್ನು ಪೊಸ್ಟ್‌ಮಾರ್ಟಂ ಮಾಡಿಸಿ ಕೊನೆಗೆ ಮಹಿಳೆಯ ಶವವನ್ನು ಕುಟುಂಬದವರಿಗೆ ಒಪ್ಪಿಸಲಾಗಿದೆ ಅಂತ ಪೊಲೀಸ್ ಉಪಾಯುಕ್ತರಾಗಿರುವ ಇಶಾಪಾಂಡೆಯವರು ತಿಳಿಸಿದ್ದಾರೆ.

Leave A Reply