ವಿಶ್ವ ಹಿಂದೂ ಪರಿಷತ್ ಬಜರಂಗದಳ ಎಡಮಂಗಲ ಘಟಕ,ಕಡಬ ಪ್ರಖಂಡ ವತಿಯಿಂದ ಬಡ ಕುಟುಂಬಕ್ಕೆ ನೂತನ ಮನೆ ನಿರ್ಮಿಸಿ ಗೃಹ ಹಸ್ತಾಂತರ
ವಿಶ್ವ ಹಿಂದೂ ಪರಿಷತ್ ಬಜರಂಗದಳ ಎಡಮಂಗಲ ಘಟಕ ಹಾಗೂ ಕಡಬ ಪ್ರಖಂಡ ಇದರ ಸಂಕಲ್ಪದಂತೆ ಬಡ ಕುಟುಂಬವನ್ನು ಗುರುತಿಸಿ ಮೂಲಭೂತವಾದ ವಾಸ್ತವ್ಯದ ಮನೆಯನ್ನು ಪುನಶ್ಚೇತನಗೊಳಿಸಿ ಅವರ ಬದುಕಿಗೆ ಧೈರ್ಯ ತುಂಬುವ ಕೆಲಸ ಮಾಡಬೇಕು ಎಂದು ನಿರ್ಧರಿಸಿ ಬಜರಂಗದಳದ ಸೇವಾ,ಸುರಕ್ಷಾ,ಸಂಸ್ಕಾರ ಎಂಬ ಧ್ಯೇಯವಾಕ್ಯದಡಿಯಲ್ಲಿ ಕಡಬ ತಾಲೂಕಿನ ದೇವಸ್ಯದ ಬೋಲ್ಮಣ್ ಐತ್ತರವರಿಗೆ ಮನೆಯನ್ನು ನಿರ್ಮಾಣ ಮಾಡಿ ಗೃಹಪ್ರವೇಶ ಹಾಗೂ ಗೃಹ ಹಸ್ತಾಂತರಿಸುವ ಕಾರ್ಯಕ್ರಮ ಇಂದು ನಡೆಯಿತು.
ಈ ಸಂದರ್ಭದಲ್ಲಿ ಬಜರಂಗದಳ ಪ್ರಾಂತ ಸಹ ಸಂಯೋಜಕ್ ಮುರಳಿ ಕೃಷ್ಣ ಹಸಂತ್ತಡ್ಕ,ವಿಶ್ವ ಹಿಂದೂ ಪರಿಷತ್ ಪುತ್ತೂರು ಜಿಲ್ಲಾ ಪ್ರಚಾರ ಪ್ರಸಾರ ಪ್ರಮುಖ್ ಶ್ರೀಧರ್ ತೆಂಕಿಲ, ವಿಶ್ವ ಹಿಂದೂ ಪರಿಷತ್ ಕಡಬ ಪ್ರಖಂಡ ಅಧ್ಯಕ್ಷರಾದ ರಾಧಕೃಷ್ಣ ಕೊಲ್ಪೆ,ಕಡಬ ಪ್ರಖಂಡ ಕಾರ್ಯದರ್ಶಿ ಪ್ರಮೋದ್ ಕಡಬ, ಸೇವಾ ಪ್ರಮುಖ್ ವಿನಯ್ ಕೋಲ್ಪೆ,ಎಡಮಂಗಲ ವಿಶ್ವ ಹಿಂದೂ ಪರಿಷತ್ ಇದರ ಗೌರವಾಧ್ಯಕ್ಷರು ಗಿರೀಶ್ ನಡುಬೈಲು, ಅಧ್ಯಕ್ಷರಾದ ಈಶ್ವರಗೌಡ ಜಾಲ್ತರು, ಬಜರಂಗದಳದ ಸಂಯೋಜಕರಾದ ಪ್ರವೀಣ್ ರೈ ಮರ್ದುಲಾ, ಕಾರ್ಯದರ್ಶಿ ಸಂಪತ್, ಎಡಮಂಗಲ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸುಮಾ ನೂಚಿಲ ತಾಲೂಕು ಪಂಚಾಯಿತಿ ಉಪಾಧ್ಯಕ್ಷರಾದ ಶ್ರೀಮತಿ ಶುಭೋದ ಎಸ್ ರೈ,ಗೋರಕ್ಷಾ ಪ್ರಮುಖ್ ಚೇತನ್ ದೊಳ್ತಿಲ,ವಿದ್ಯಾರ್ಥಿ ಪ್ರಮುಖ್ ಆಕಾಶ್ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ವಿಹಿಂಪ ಗೌರವ ಅಧ್ಯಕ್ಷರಾದ ರಾಮಕೃಷ್ಣ ರೈ ಮಾಲೆಂಗ್ರಿ ಸ್ವಾಗತಿಸಿ ವಂದಿಸಿದರು.