“ಸೀತಾ ರಾಮಾಂ” ಚಿತ್ರದ ಮೂಲಕ ಬಕ್ರೀದ್ ಹಬ್ಬಕ್ಕೆ ಶುಭ ಕೋರಿ ಟೀಕೆಗೆ ಗುರಿಯಾದ್ರ ಖ್ಯಾತ ನಟಿ ರಶ್ಮಿಕಾ ಮಂದಣ್ಣ!!

ಮುಸ್ಲಿಂ ಮಹಿಳೆಯ ಉಡುಪು ಧರಿಸಿ ಬಕ್ರೀದ್ ಹಬ್ಬಕ್ಕೆ ಶುಭಕೋರಿದ ಖ್ಯಾತ ಹಾಗೂ ಪಂಚಭಾಷಾ ನಟಿಯಾಗಿ ಮಿಂಚುತ್ತಿರುವ ರಶ್ಮಿಕಾ ಮಂದಣ್ಣ ಇದೀಗ ಟೀಕೆಗೆ‌ ಗುರಿಯಾಗಿದ್ದಾರೆ.

 

ನಟಿ ರಶ್ಮಿಕಾ ಮಂದಣ್ಣ ಅವರು ಮುಸ್ಲಿಮರ ಹಬ್ಬ ಬಕ್ರೀದ್ ಗೆ ಶುಭಕೋರಿದ ರೀತಿಗೆ ಹಲವಾರು ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಆದರೆ ಅವರ ಅಭಿಮಾನಿಗಳು ಇದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ʻ’ಸೀತಾ ರಾಮಂ’ʼ ಚಿತ್ರದ ಲುಕ್‌ ಮೂಲಕ ಟ್ವಿಟರ್ ನಲ್ಲಿ ಬಕ್ರೀದ್ ಹಬ್ಬಕ್ಕೆ ಶುಭಕೋರಿದ ರಶ್ಮಿಕಾ ಲುಕ್ ಎಲ್ಲಾ ಕಡೆ ವೈರಲ್ ಆಗಿದೆ. ರೆಡ್ ಕಲರ್ ಹಿಜಬ್ ಧರಿಸಿ ಸಲಾಮ್ ಮಾಡಿರುವ ಪೋಸ್ಟರ್ ಶೇರ್ ಮಾಡುವ ಮೂಲಕ ಫ್ಯಾನ್ಸ್‌ಗೆ ರಶ್ಮಿಕಾ ವಿಶ್ ಮಾಡಿದ್ದಾರೆ.

ಕನ್ನಡದ ಕಿರಿಕ್ ಪಾರ್ಟಿ’ ಚಿತ್ರದಿಂದ ವೃತ್ತಿ ಜೀವನ ಪ್ರಾರಂಭಿಸಿದ ರಶ್ಮಿಕಾ, ಸದ್ಯ ಪಂಚಭಾಷಾ ನಟಿಯಾಗಿ ಗುರುತಿಸಿಕೊಳ್ಳುತ್ತಿದ್ದಾರೆ. ಇದೀಗ ಈದ್ ಹಬ್ಬಕ್ಕೆ ತಮ್ಮ ಅಭಿಮಾನಿಗಳಿಗೆ ರಶ್ಮಿಕಾ ಗಿಫ್ಟ್ ನೀಡಿದ್ದಾರೆ. ಈದ್ ಹಬ್ಬಕ್ಕೆ ಶುಭಕೋರುವ ಮೂಲಕ ತಮ್ಮ ಮುಂದಿನ ಚಿತ್ರಸೀತಾ ರಾಮಂ’ ಲುಕ್ ರಿವೀಲ್ ಮಾಡಿದ್ದಾರೆ.

ಕನ್ನಡ, ಸೌತ್ ಸಿನಿಮಾ, ಬಾಲಿವುಡ್‌ನಲ್ಲಿ ನಟಿಸಿದ ಮೇಲೆ ಮಲಯಾಳಂನತ್ತ ರಶ್ಮಿಕಾ ಮುಖ ಮಾಡಿದ್ದಾರೆ. ದುಲ್ಕರ್ ಸಲ್ಮಾನ್‌ಗೆ ನಾಯಕಿಯಾಗಿ ರಶ್ಮಿಕಾ ಮಂದಣ್ಣ ಕಾಣಿಸಿಕೊಂಡಿದ್ದಾರೆ. ರಾಘವ ಪುಡಿ ನಿರ್ದೇಶನದಲ್ಲಿ” ಸೀತಾ ರಾಮಾಂ” ಸಿನಿಮಾ ಮೂಡಿ ಬರುತ್ತಿದ್ದು, ದುಲ್ಕರ್ ಸಲ್ಮಾನ್‌ಗೆ ರಶ್ಮಿಕಾ ಮತ್ತು ಮೃಣಾಲ್ ಠಾಕೂರ್ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ತೆಲುಗು, ತಮಿಳು, ಹಿಂದಿ ಮತ್ತು ಮಲಯಾಳಂನಲ್ಲಿ ಸಿನಿಮಾ ಆಗಸ್ಟ್ 5 ಕ್ಕೆ ತೆರೆಗೆ ಬರಲಿದೆ.

Leave A Reply

Your email address will not be published.