ಸೋನಿಯಾ ಗಾಂಧಿಗೆ ಇಡಿ ಸಮನ್ಸ್‌

ನ್ಯಾಷಿನಲ್‌ ಹೆರಾಲ್ಡ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವ್ರಿಗೆ ಇಡಿ ಹೊಸ ಸಮನ್ಸ್‌ ನೀಡಿದ್ದು, ಜುಲೈ 21ರಂದು ವಿಚಾರಣೆ ಹಾಜರಾಗುವಂತೆ ಸೂಚನೆ ನೀಡಿದೆ.

75 ವರ್ಷದ ಕಾಂಗ್ರೆಸ್ ನಾಯಕಿ ಈ ಹಿಂದೆ ಅನಾರೋಗ್ಯದ ಕಾರಣ ತನ್ನ ಹಾಜರಾತಿಯನ್ನ ಮುಂದೂಡುವಂತೆ ಕೋರಿ ತನಿಖಾ ಸಂಸ್ಥೆಗೆ ಪತ್ರ ಬರೆದಿದ್ದರು. ಕೋವಿಡ್ ಮತ್ತು ಶ್ವಾಸಕೋಶದ ಸೋಂಕಿನಿಂದಾಗಿ ಆಸ್ಪತ್ರೆಗೆ ದಾಖಲಾದ ನಂತ್ರ ಮನೆಯಲ್ಲಿ ವಿಶ್ರಾಂತಿ ಪಡೆಯಲು ವೈದ್ಯರು ಕಟ್ಟುನಿಟ್ಟಾಗಿ ಸಲಹೆ ನೀಡಿದ್ದಾರೆ ಎಂಬ ಆಧಾರದ ಮೇಲೆ ಜೂನ್ 23ರಂದು ಹಾಜರಾಗಲು ಏಜೆನ್ಸಿ ನೋಟಿಸ್‌ನಿಂದ ಮುಂದೂಡುವಂತೆ ರಾಹುಲ್ ಗಾಂಧಿ ಕೋರಿದ್ದರು.

ಜಾರಿ ನಿರ್ದೇಶನಾಲಯವು ವಿಚಾರಣೆಯನ್ನು ಮುಂದೂಡುವ ಮನವಿಯನ್ನು ಸ್ವೀಕರಿಸಿತ್ತು ಮತ್ತು ಜುಲೈ ಕೊನೆಯ ವಾರದಲ್ಲಿ ಏಜೆನ್ಸಿಯೊಂದಿಗೆ ತನ್ನ ಹೇಳಿಕೆಯನ್ನು ದಾಖಲಿಸುವಂತೆ ಕೇಳಿತ್ತು.

ಜೂನ್ 8 ರಂದು ಹಾಜರಾಗುವಂತೆ ಗಾಂಧಿಗೆ ಮೊದಲು ನೋಟಿಸ್ ನೀಡಲಾಯಿತು. ಆದ್ರೆ, ಆಗ ಅವ್ರು ಕೋವಿಡ್ ಸಂಬಂಧಿತ ತೊಂದರೆಗಳಿಗಾಗಿ ಜೂನ್ 12ರಂದು ದೆಹಲಿಯ ಸರ್ ಗಂಗಾ ರಾಮ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಜೂನ್ 20ರಂದು ಅವ್ರನ್ನ ಡಿಸ್ಚಾರ್ಜ್ ಮಾಡಲಾಗಿತ್ತು.

Leave A Reply

Your email address will not be published.