ಕಾಣಿಯೂರು : ಹೊಳೆಗೆ ಬಿದ್ದ ಕಾರನ್ನು ಮೇಲಕ್ಕೆತ್ತುವಾಗ ನೀರು ಪಾಲಾದ ಕಾರು ಪತ್ತೆ ! ನಾಪತ್ತೆ
ಕಾಣಿಯೂರು: ಕಾಣಿಯೂರಿನ ಬೈತಡ್ಕದಲ್ಲಿ ಹೊಳೆಗೆ ಬಿದ್ದ ಕಾರನ್ನು ಮೇಲಕ್ಕೆತ್ತುವ ಸಂದರ್ಭದಲ್ಲಿ ಮತ್ತೆ ಕಾರು ಹೊಳೆಗೆ ಬಿದ್ದಿದೆ.ಈಗ ಮತ್ತೆ ಕಾರ್ಯಾಚರಣೆಯ ಮೂಲಕ ಕಾರು ಪತ್ತೆಯಾಗಿದೆ.
ಕಾಣಿಯೂರಿನಲ್ಲಿ ನದಿಗೆ ಬಿದ್ದ ಕಾರಿನಲ್ಲಿದ್ದವರು ವಿಟ್ಲ ಮೂಲದವರು ಎನ್ನಲಾಗಿದ್ದು, ನದಿಗೆ ಬೀಳುವ ವೇಳೆ ಕಾರಿನಲ್ಲಿದ್ದವರು ಹೊರಗೆ ಬಿದ್ದಿರಬೇಕು ಎನ್ನಲಾಗಿದೆ. ವಿಟ್ಲ ಮೂಲದ ಧನುಷ್ ಎಂಬ ಹೆಸರಿನ ಇಬ್ಬರು ಯುವಕರು ಕಾರಿನಲ್ಲಿದ್ದರು ಎಂಬುದಾಗಿ ತಿಳಿದು ಬಂದಿದೆ. ಕಾರಿನಲ್ಲಿ ಎಷ್ಟು ಮಂದಿ ಇದ್ದರು ಎಂಬ ಬಗ್ಗೆ ಮಾಹಿತಿ ಪತ್ತೆಯಾಗಿಲ್ಲ.
ಜು.9 ರಂದು ರಾತ್ರಿ ಬೈತಡ್ಕದಲ್ಲಿ ಕಾರೊಂದು ಹೊಳೆಗೆ ಬಿದ್ದಿರುವ ಘಟನೆ ನಡೆದಿತ್ತು. ನೀರುಪಾಲಾಗಿರುವ ಕಾರನ್ನು ಅಗ್ನಿಶಾಮಕ ದಳದವರು ಹುಡುಕಾಟ ನಡೆಸುತ್ತಿರುವಾಗ ಪತ್ತೆಯಾದ ಕಾರನ್ನು ಮೇಲಕ್ಕೆತ್ತಲು ಪ್ರಯತ್ನಿಸಿದಾಗ ಪುನಃ ಕಾರು ಹೊಳೆಗೆ ಬಿದ್ದು ನೀರಿನ ರಭಸಕ್ಕೆ ಕೊಚ್ಚಿ ಮುಂದೆ ಹೋಗಿದೆ. ಇದೀಗ ಮತ್ತೆ ಕಾರನ್ನುಹುಡುಕಾಡುತ್ತಿದ್ದು ಕಾರು ದೊರಕಿದೆ ಎಂದು ತಿಳಿದು ಬಂದಿದೆ. ದೊಡ್ಡ ಸಂಖ್ಯೆಯ ಜನ ಜಂಗುಳಿ ಸೇತುವೆಯ ಸುತ್ತ ಸೇರಿದೆ. ರಕ್ಷಣಾ ಕಾರ್ಯಾಚರಣೆಯನ್ನು ದೊಡ್ಡ ಸಂಖ್ಯೆಯಲ್ಲಿ ಜನ ನಿಂತು ನೋಡುತ್ತಿದ್ದಾರೆ. ನೀರಿನ ಹರಿವಿನ ವೇಗದಿಂದಾಗಿ ಕಾರ್ಯಾಚರಣೆಗೆ ಅಡ್ಡಿಯಾಗಿತ್ತು.
ನೂರಾರೂ ಜನ ಕಾರು ಶೋಧ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು . ಕಾರು ಪತ್ತೆಯಾಗಿದ್ದು ಕಾರ್ಯಚರಣೆ ನಡೆಸುತ್ತಿರುವಾಗ ಅದು ಮತ್ತೇ ಪ್ರವಾಹಕ್ಕೆ ಸಿಕ್ಕಿ ಕೊಚ್ಚಿಕೊಂಡು ಹೋಗಿತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಕಾರು ಮತ್ತ ಪತ್ತೆಯಾಗಿದೆ.
ಸ್ಥಳದಲ್ಲಿ 2000ಕ್ಕೂ ಅಧಿಕ ಜನ ಸೇರಿದ್ದು ಗುಂಪನ್ನು ಚದುರಿಸಲು ಪೊಲೀಸರು ಲಘುಲಾಠಿ ಪ್ರಹಾರ ನಡೆಸಲಾಯಿತು.
ಬೈತಡ್ಕ ಮಸೀದಿಯ ಸಮೀಪವೇ ಇರುವ ಸೇತುವೆಗೆ ಕಾರೊಂದು ಡಿಕ್ಕಿ ಹೊಡೆದು ನಿಯಂತ್ರಣ ತಪ್ಪಿ ಸೇತುವೆಯಿಂದ ಕೆಳಕ್ಕೆ ಬಿದ್ದಿತ್ತು. ಈ ಕುರಿತು ಬೈತಡ್ಕ ಮಸೀದಿಯ ಸಿಸಿ ಕೆಮರಾದಲ್ಲಿ ದೃಶ್ಯ ಸೆರೆಯಾಗಿದೆ. ಕಾರ್ಯಾಚರಣೆ ನಡೆಯುತ್ತಿದೆ. ಈಗ ಕಾರು ಸೇತುವೆಯಿಂದ 50 ಮೀಟರ್ ದೂರದಲ್ಲಿ ಪತ್ತೆಯಾಗಿದೆ. ಕಾರಿನಲ್ಲಿ ಮೂರು ಜನ ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ. ನದಿಗೆ ಬಿದ್ದ ಕಾರಣ ಮೂವರೂ ನೀರು ಪಾಲಾಗಿರಬಹುದು ಎಂದು ಶಂಕಿಸಲಾಗಿದೆ. ಸುಳ್ಯ ತಾಲೂಕಿನ ಗುತ್ತಿಗಾರು ಮೂಲದ ಮೂವರು ನೀರು ಪಾಲಾದ ದುರ್ದೈವಿಗಳೆಂದು ಹೇಳಲಾಗಿದೆ. ಜೋರು ಮಳೆಯ ಜಾರುವ ರಸ್ತೆಯಲ್ಲಿ, ಅಪಾಯಕಾರಿ ಅವೈಜ್ಞಾನಿಕ ತಿರುವು ಪಡೆದುಕೊಳ್ಳುವ ಜಾಗದಲ್ಲೇ ಕೊಳ್ಳ ಇರುವುದು ಅಪಘಾತಕ್ಕೆ ಆಹ್ವಾನ ನೀಡಿದಂತೆ. ಅತಿಯಾದ ವೇಗದ ಚಾಲನೆಯೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ.
ಕಾರು ಪುತ್ತೂರಿನಿಂದ ಕಾಣಿಯೂರು ಕಡೆ ಸಂಚರಿಸುತಿತ್ತು. ಕಾರು ಪುತ್ತೂರಿನಿಂದ ಕಾಣಿಯೂರು ಕಡೆ ಸಂಚರಿಸುತಿತ್ತು. ಅದು ಮಾರುತಿ 800 ಎಂದು ತಿಳಿದು ಬಂದಿದೆ. ಅಪಘಾತಗೊಂಡ ಈ ಮಾರುತಿ 800 ಕಾರಿನ ಬೋನೆಟ್ ಒಂದು ಭಾಗ ಅಲ್ಲಿ ತಡೆಗೋಡೆಗೆ ಸಿಲುಕಿಕೊಂಡಿದೆ. ಅಪಘಾತದ ವೇಗಕ್ಕೆ ಸೇತುವೆಯ ತಡೆ ಬೇಲಿಯ ಮೂರು ಕಂಬಗಳು ಮುರಿದು ಕಬ್ಬಿಣ ನೇತಾಡುತ್ತಿದೆ. ಅಪಘಾತ ಸಂಭವಿಸಿದ ಸ್ಥಳ ಅಪಾಯಕಾರಿ ತಿರುವು ಆಗಿದ್ದು, ಇಳಿಜಾರಿನಲ್ಲಿ ವೇಗವಾಗಿ ಬರುವವರಿಗೆ ಆ ತಿರುವು ಗೋಚರಿಸದಷ್ಟು ಅಪಾಯಕಾರಿಯಾಗಿದೆ. ಈ ಹಿಂದೆ 3 ವಾಹನಗಳು ಇದೇ ಸ್ಥಳದಲ್ಲಿ ಹೊಳೆಗೆ ಬಿದ್ದಿದ್ದವು.