ಸುಳ್ಯ- ಮಡಿಕೇರಿ : ಇಂದು ಬೆಳ್ಳಂ ಬೆಳಗ್ಗೆ ಮತ್ತೆ ಕಂಪಿಸಿದ ಭೂಮಿ, ಭಯಗೊಂಡ ಜನ!
ಸುಳ್ಯ: ಬೆಳ್ಳಂ ಬೆಳಗ್ಗೆ ಮತ್ತೆ ಭೂಮಿ ಕಂಪಿಸಿದೆ. ಭಾರೀ ಶಬ್ದ ಮತ್ತು ಕಂಪನದಿಂದ ಜನತೆ ನಡುಗಿ ಎಚ್ಚರಗೊಂಡಿದ್ದಾರೆ. ಜೂ.10 ರಂದು ಬೆಳಿಗ್ಗೆ 6.25ಕ್ಕೆ ವೇಳೆಗೆ ಭಾರೀ ಶಬ್ದದೊಂದಿಗೆ ಭೂಮಿ ಕಂಪಿಸಿದೆ ಎಂದು ಜನರು ತಮ್ಮ ಅನುಭವ ಹಂಚಿ ಕೊಂಡಿದ್ದಾರೆ. ಸಂಪಾಜೆ ಹಾಗು ಸಮೀಪದ ಪ್ರದೇಶ, ಅರಂತೋಡು, ತೊಡಿಕಾನ, ಸೇರಿ ಸುಳ್ಯ ತಾಲೂಕಿನ ವಿವಿಧ ಭಾಗಗಳಲ್ಲಿ ಗಡಿ ಪ್ರದೇಶಗಳಾದ ಕಲ್ಲಪಳ್ಳಿ ಭಾಗದಲ್ಲಿ ಭೂ ಕಂಪನ ಆಗಿರುವ ಬಗ್ಗೆ ಜನರು ದೂರವಾಣಿಯ ಮೂಲಕ ಹೇಳಿದ್ದಾರೆ.
ಇದರ ಜತೆಗೆ ಮಡಿಕೇರಿಯಲ್ಲಿ ಕೂಡಾ ಮಳೆಯ ನಡುವೆಯೆ ಕಂಪನದ ಅನುಭವ ಆಗಿದೆ. ಅಲ್ಲಿನ ಚೆಂಬು, ಕರಿಕೆ ಇತ್ಯಾದಿ ಪ್ರದೇಶಗಳಲ್ಲಿ ಕಂಪನದ ಅನುಭವ ಆಗಿದೆ.
ತೊಡಿಕಾನ ಭಾಗದಲ್ಲಿ ಕೂಡ ಭೂಮಿ ಕಂಪಿಸಿದ ಅನುಭವ ಆಗಿದೆ. ಹೀಗೆ ಹಲವು ಭಾಗಗಳಿಂದ ಜನರು ಭೂ ಕಂಪನದ ಅನುಭವವನ್ನು ಹಂಚಿಕೊಳ್ಳುತ್ತಿದ್ದಾರೆ. ಇದೀಗ ವಾರದ ಬಳಿಕ ಮತ್ತೆ ಭೂಮಿ ನಡುಗಿದೆ. ಜೂ.25 ಮತ್ತು ಜುಲೈ 1 ರ ನಡುವೆ ದಕ್ಷಿಣ ಕನ್ನಡ ಹಾಗು ಕೊಡಗಿನ ಗಡಿ ಭಾಗದಲ್ಲಿ ಭಾರೀ ಶಬ್ಧದೊಂದಿಗೆ ಲಘು ಭೂ ಕಂಪನ ಉಂಟಾಗಿತ್ತು. ಇದೀಗ ಭೂಮಿ ಮತ್ತೆ ಕಂಪಿಸಿದ್ದು ಜನರ ಆತಂಕ ಮತ್ತಷ್ಟು ಹೆಚ್ಚಿದೆ.