ಗ್ರಾಹಕರಿಗೆ ಶುಭಸುದ್ದಿ | ಶೀಘ್ರವೇ ಎಸಿ, ಫ್ರಿಡ್ಜ್, ವಾಷಿಂಗ್ ಮೆಷಿನ್ ಸೇರಿ ಹಲವು ಗೃಹೋಪಯೋಗಿ ವಸ್ತುಗಳ ಬೆಲೆ ಇಳಿಕೆ ಸಾಧ್ಯತೆ!
ಯಾರಿಗೆ ತಾನೇ ಅದ್ಧೂರಿ ಲೈಫ್ ಜೀವಿಸಲು ಇಷ್ಟವಿಲ್ಲ ಹೇಳಿ. ದುಡ್ಡಿದ್ದವರದ್ದು ಹೇಗೋ ಐಷರಾಮಿ ಬದುಕನ್ನು ಬದುಕುತ್ತಾರೆ. ಆದರೆ ಮಧ್ಯಮ ವರ್ಗದವರಿಗೆ ಏನೇ ಖರೀದಿಸಬೇಕಾದರೂ ಲೆಕ್ಕ ಹಾಕಿಯೇ ಖರೀದಿಸಬೇಕು. ಹಾಗಾಗಿ ಕೆಲವೊಮ್ಮೆ ಯಾವುದಾದರೂ ವಸ್ತುವನ್ನು ಈ ಬೆಲೆ ಏರಿಕೆಯ ಬಿಸಿಯಲ್ಲಿ ಖರೀದಿಗೆ ಸಾಧ್ಯವಾಗದೇ ಇರಬಹುದು. ಆದರೆ ನಿಮಗೆ ಇಲ್ಲೊಂದು ಗುಡ್ ನ್ಯೂಸ್ ಇದೆ. ಅದೇನೆಂದರೆ, ಮನೆಗೆ ಅಗತ್ಯವಾಗಿ ಬೇಕಾಗಿರುವಂತ ಎಲೆಕ್ಟ್ರಾನಿಕ್ಸ್ ವಸ್ತುಗಳ ಬೆಲೆ ಇಳಿಕೆಯಾಗುವ ಸಾಧ್ಯತೆ ಇದೆ.
ನೀವು ನಿಮ್ಮ ಮನೆಗೆ ಫ್ರಿಡ್ಜ್, ವಾಷಿಂಗ್ ಮಷೀನ್, ಎ.ಸಿ ಖರೀದಿಲು ಪ್ಲಾನ್ ಮಾಡುತ್ತಿದ್ದೀರಾ? ಬೆಲೆ ಕಂಡು ಖರೀದಿಗಾಗಿ ಹಿಂದೆ ಮುಂದೆ ನೋಡ್ತಿದ್ದೀರಾ? ಹಾಗಾದರೆ ನಿಮಗಿದು ಸಕಾಲ. ಇನ್ಮುಂದೆ ದರಗಳು ಇಳಿಕೆಯಾಗಲಿದೆ.
ಏಕೆಂದರೆ ಅವುಗಳ ಉತ್ಪಾದನೆ ಬೇಕಾಗುವ ತ್ರಾಮ ಮತ್ತು ಸ್ಟೀಲ್‌ಗಳ ಬೆಲೆಯಲ್ಲಿ ಇಳಿಕೆಯಾಗುವ ಸಾಧ್ಯತೆಯಿದೆ. ಫೆ.24ರಿಂದ ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧ ಶುರುವಾದ ಬಳಿಕ ತಾಮ್ರ, ಉಕ್ಕು ಅಲ್ಯುಮಿನಿಯಂ ದರ ದಾಖಲೆ ಪ್ರಮಾಣಕ್ಕೆ ಏರಿಕೆಯಾಗಿತ್ತು. ತಾಮ್ರ ಈಗ ಶೇ21, ಉಕ್ಕು ಶೇ.19, ಅಲ್ಯುಮಿನಿಯಂ ಶೇ.19ರಷ್ಟು ಇಳಿಯಾಗಿದೆ.
ಹೀಗಾಗಿ ಕಂಪನಿಗಳು ಕೂಡಾ ಅವುಗಳ ಲಾಭವನ್ನು ಗ್ರಾಹಕರಿಗೆ ಇದರಿಂದಾಗಿ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಫ್ರಿಡ್ಜ್, ಎಸಿ, ವಾಷಿಂಗ್ ಮಷೀನ್ ಗಳನ್ನು ಹೆಚ್ಚಿನ ಸಂಖ್ಯೆಲ್ಲಿ ಖರೀದಿ ಮಾಡಲಿದ್ದಾರೆ ಮತ್ತು ಹಣದುಬ್ಬರ ಪ್ರಮಾಣ ಇಳಿಯಾಗಲು ನೆರವಾಗಲಿದೆ.
ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹಲವು ಲೋಹಗಳ ಬೆಲೆ ಇಳಿಮುಖವಾಗಿದೆ. ಗೃಹೋಪಯೋಗಿ ವಸ್ತುಗಳ ಉತ್ಪಾದಕರು ಇದರ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸುವ ಸಾಧ್ಯತೆ ಇದ್ದು, ವಾಷಿಂಗ್ ಮಷೀನ್, ರೆಫ್ರಿಜರೇಟರ್, ಮೈಕ್ರೋವೇವ್, ಎಸಿ ಮೊದಲಾದವುಗಳ ಬೆಲೆ ಇಳಿಕೆಯಾಗುವ ಸಾಧ್ಯತೆ ಇದೆ.
ಕೊರೊನಾ ಕಾರಣದಿಂದ ಎರಡು ವರ್ಷಗಳ ಅವಧಿಯಲ್ಲಿ ಗೃಹಪಯೋಗಿ ವಸ್ತುಗಳ ದರ ಶೇ.20 ಏರಿಕೆಯಾಗಿತ್ತು. ಹಾಗಾಗಿ ಕಡಿಮೆ ಬೆಲೆಯಲ್ಲಿ ಗ್ರಾಹಕರಿಗೆ ಕಡಿಮೆ ದರದಲ್ಲಿ ಗೃಹೋಪಯೋಗಿ ವಸ್ತುಗಳು ಸಿಗುವುದರಿಂದ ಕಂಪನಿಗಳಿಗೆ ಅವುಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದನೆ ಮಾಡಲು ಅನುಕೂಲವಾಗುತ್ತದೆ. ಕಚ್ಚಾ ವಸ್ತುಗಳ ಬೆಲೆಯಲ್ಲಿ ಇಳಿಕೆಯಾಗಿರುವುದು ಕಂಪನಿಗಳಿಗೆ ಕೂಡಾ ಅನಾನುಕೂಲವಾಗಿ ಪರಿಣಮಿಸಲಿದೆ ಎಂದು ಐಸಿಐಸಿಐ ಸೆಕ್ಯುರಿಟೀಸ್ ತನ್ನ ವರದಿ ಅಭಿಪ್ರಾಯಪಟ್ಟಿದೆ