ವಿದ್ಯಾರ್ಥಿಗಳ ಶೂ,ಸಾಕ್ಸ್ ಖರೀದಿಗೆ ರಾಜ್ಯ ಸರ್ಕಾರದಿಂದ ಅನುದಾನ ಬಿಡುಗಡೆ
ಬೆಂಗಳೂರು : ಶಾಲಾ ಮಕ್ಕಳ ಶೂ, ಸಾಕ್ಸ್ ಖರೀದಿಗೆ ರಾಜ್ಯಸರ್ಕಾರ 132 ಕೋಟಿ ರೂಪಾಯಿ ಅನುದಾನವನ್ನು ಬಿಡುಗಡೆ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಈ ವಿಚಾರವಾಗಿ ಮಾತನಾಡಿದ ಅವರು, ಸಮವಸ್ತ್ರ ಖರೀದಿಗೆ ಈಗಾಗಲೇ ಅನುಮೋದನೆ ನೀಡಿದೆ. ಅಂತೆಯೇ ಶೂ,ಸಾಕ್ಸ್ ಖರೀದಿಗೂ ಅನುದಾನ ನೀಡಿದ್ದೇವೆ. ಇನ್ನು ಮುಂದೆ ಈ ವಿಚಾರವಾಗಿ ಗೊಂದಲ ಬೇಡವೆಂದು ಹೇಳಿದ್ದಾರೆ.
ಭಿಕ್ಷೆ ಬೇಡಿ ಶೂ, ಸಾಕ್ಸ್ ಗೆ ಖರೀದಿಗೆ ಹಣ ಹೊಂದಿಸುತ್ತೇವೆ ಎಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿಕೆಗೆ ಇದೇ ವೇಳೆ ಟಾಂಗ್ ನೀಡಿದ ಅವರು ಕೋವಿಡ್ ಸಂದರ್ಭದಲ್ಲಿಯೂ ಭಿಕ್ಷೆ ಬೇಡಿ ಹಣ ಸಂಗ್ರಹಿಸಿಸುತ್ತೇವೆ ಎಂದು ಹೇಳಿದ್ದಿರಿ, ಆ ಹಣ ಎಲ್ಲಿ ಎಂದು ಪ್ರಶ್ನೆ ಮಾಡಿದರು.