ಮಂಗಳೂರು: ಬಹುಜನ ಚಳವಳಿಯ ಹಿರಿಯ ನೇತಾರ-ಅಂಬೇಡ್ಕರ್ ವಾದಿ ಪಿ. ಡೀಕಯ್ಯ ಇನ್ನಿಲ್ಲ

ಮಂಗಳೂರು:ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಹುಜನ ಚಳುವಳಿಯನ್ನು ಕಟ್ಟಿಬೆಳೆಸಿದ ಹಿರಿಯ ನೇತಾರ ಪಿ. ಡೀಕಯ್ಯ ಮೆದುಳಿನ ರಕ್ತಸ್ರಾವದಿಂದ ಮಣಿಪಾಲದ ಕೆ.ಎಂ.ಸಿ ಆಸ್ಪತ್ರೆಯಲ್ಲಿ ಜು.07ರ ರಾತ್ರಿ ನಿಧನರಾಗಿದ್ದು,ದೇಹದ ಅಂಗಾಂಗಳನ್ನು ದಾನ ಮಾಡುವ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.

 

ಅಸ್ಪೃಶ್ಯತೆಯ ವಿರುದ್ಧ ನಡೆಯುತ್ತಿದ್ದ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಡೀಕಯ್ಯ ಅವರು ಓರ್ವ ಉತ್ತಮ ಬರಹಗಾರರೂ ಆಗಿದ್ದರು.ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಹುಜನ ಚಳುವಳಿಯನ್ನು ಕಟ್ಟಿ ಬೆಳೆಸಿ,ಅನೇಕ ಯುವಕರನ್ನು ಹೋರಾಟದಲ್ಲಿ ಒಗ್ಗೂಡಿಸಿದ್ದರು.

ಕಾನದ ಕಟದರ ಇತಿಹಾಸದ ಬಗ್ಗೆ ಅಧ್ಯಯನ ಮಾಡಿದ್ದ ಇವರು ಹಲವಾರು ಹೋರಾಟಗಳಿಗೆ ಮಾರ್ಗದರ್ಶಕರಾಗಿದ್ದರು. ಸದ್ಯ ಡೀಕಯ್ಯ ಅವರ ಮರಣದಿಂದ ಬಹುಜನ ಚಳುವಳಿಯ ಅವರ ಅಭಿಮಾನಿಗಳು,ಹಿತೈಷಿಗಳು ಸಂತಾಪ ಸೂಚಿಸಿದ್ದಾರೆ.

Leave A Reply

Your email address will not be published.