ಉದ್ಧವ್ ಠಾಕ್ರೆಗೆ ಏಟಿನ ಮೇಲೆ ಏಟು, ಶಿವಸೇನೆಯ 64 ಪಾಲಿಕೆ ಸದಸ್ಯರು ಶಿಂಧೆ ಬಣಕ್ಕೆ ಸೇರ್ಪಡೆ !
ಮುಂಬೈ: ಏಕನಾಥ್ ಶಿಂಧೆ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಮಹಾರಾಷ್ಟ್ರ ರಾಜಕೀಯ ಮತ್ತಷ್ಟು ತಿರುವು ಪಡೆದುಕೊಳ್ಳುತ್ತಿದ್ದು, ಮಾಜಿ ಸಿಎಂ ಉದ್ಧವ್ ಠಾಕ್ರೆ ಬಣಕ್ಕೆ ಮತ್ತೊಂದು ಭಾರೀ ಹೊಡೆತ ಬಿದ್ದಿದೆ.
ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ ಶಿವಸೇನೆಯ 66 ಕಾರ್ಪೊರೇಟರ್‌ಗಳು ಏಕನಾಥ್ ಶಿಂಧೆ ಪಾಳೆಯಕ್ಕೆ ಸೇರ್ಪಡೆಗೊಂಡಿದ್ದು ಉದ್ಧವ್ ಠಾಕ್ರೆಗೆ ಭಾರಿ ಹಿನ್ನಡೆಯಾಗಿದೆ.
ಸದ್ಯ ಶಿವಸೇನೆಯು ಪ್ರಸ್ತುತ ಉದ್ಧವ್ ಠಾಕ್ರೆ ಹಾಗೂ ಏಕನಾಥ್ ಶಿಂಧೆ ಎರಡು ಬಣಗಳಾಗಿ ವಿಭಜಿಸಲ್ಪಟ್ಟಿದೆ. ನೂತನ ಮುಖ್ಯಮಂತ್ರಿಯಾಗಿರುವ ಏಕನಾಥ್ ಶಿಂಧೆ, ಈಚೆಗಷ್ಟೇ ಶಿವಸೇನೆಯಿಂದ ಬಂಡಾಯವೆದ್ದು ಬಿಜೆಪಿ ಬೆಂಬಲದೊಂದಿಗೆ ಸರ್ಕಾರ ರಚಿಸಿದ್ದಾರೆ.
ಶಿವಸೇನೆಯಿಂದ ಬಂಡಾಯವೆದ್ದಾಗ ಅವರನ್ನು ಉಪಮುಖ್ಯಮಂತ್ರಿ ಮಾಡಬಹುದೆಂಬ ನಿರೀಕ್ಷೆಯಿತ್ತು. ಆದರೆ ಮುಖ್ಯಮಂತ್ರಿ ಸ್ಥಾನ ಸಿಗುವಂತೆ ಮಾಡಿದ ಬಿಜೆಪಿ ಎಲ್ಲರನ್ನೂ ಅಚ್ಚರಿಗೊಳಿಸಿದೆ. ಇದೀಗ ಉದ್ಧವ್ ಠಾಕ್ರೆಯ ಬಣವನ್ನು ಇನ್ನಷ್ಟು ದುರ್ಬಲಗೊಳಿಸಲು ಬಿಜೆಪಿ ಮತ್ತಷ್ಟು ಗೇಮ್‌ಪ್ಲಾನ್ ಮಾಡಿರುವುದು ಕಷ್ಟವಾಗಿದೆ. ಆ ಮೂಲಕ ಇನ್ನೆರಡು ವರ್ಷಗಳ ನಂತರ ಬರುವ ವಿಧಾನಸಭಾ ಚುನಾವಣೆಯಲ್ಲಿ ಹಿಂದೆ ಬಡವನ್ನು ಬಳಸಿಕೊಂಡು ಆರಾಮವಾಗಿ ಅಧಿಕಾರ ನಡೆಸುವ ಯೋಜನೆ ಇದು ಎಂದು ತಜ್ಞರು ಅಭಿಪ್ರಾಯ.