ದ.ಕ : ನೋಡ ನೋಡುತ್ತಿದ್ದಂತೆ ಗುಡ್ಡ ಕುಸಿತ, ದಿಕ್ಕಾಪಾಲಾಗಿ ಓಡಿದ ಜನ

Share the Article

ದಕ್ಷಿಣ ಕನ್ನಡ : ಕರಾವಳಿಯಾದ್ಯಂತ ಭಾರೀ ಮಳೆಯಾಗುತ್ತಿದ್ದು, ಜನ ಜೀವನ ಅಸ್ತವ್ಯಸ್ತ್ಯವಾಗಿದೆ. ಅಲ್ಲದೆ ಶಾಲಾ ಕಾಲೇಜಿಗೆ ಕೂಡಾ ರಜೆ ನೀಡಲಾಗಿದೆ. ಆದರೆ ಭಾರೀ ಮಳೆಯ ಅರ್ಭಟಕ್ಕೆ ನೋಡ ನೋಡುತ್ತಿದ್ದಂತೆ ಗುಡ್ಡವೊಂದು ನಗರದಲ್ಲಿ ಕುಸಿದು ಬಿದಿದ್ದು, ನೋಡಿ ಜನ ದಿಕ್ಕಾಪಾಲಾಗಿ ಓಡಿದ ಘಟನೆ ಸುಳ್ಯ ತಾಲೂಕಿನ ಜಾಲೂರು ಎಂಬಲ್ಲಿ ನಡೆದಿದೆ.

ಜಾಲ್ಸೂರಿನ ಕಮರ್ಷಿಯಲ್ ಕಾಂಪ್ಲೆಕ್ಸ್ ಒಂದರ ಬಳಿ ಏಕಾಏಕಿ ಗುಡ್ಡ ಕುಸಿದಿದೆ. ಗುಡ್ಡ ಕುಸಿಯುತ್ತಿದ್ದಂತೆ ಸ್ಥಳದಲ್ಲಿದ್ದ ಜನರು ದಿಕ್ಕಾಪಾಲಾಗಿ ಓಡಿದ್ದಾರೆ. ಸ್ಥಳದಲ್ಲಿ ನಿಲ್ಲಿಸಿದ್ದ ಬೈಕ್‌ಗಳ ಮೇಲೆ ಗುಡ್ಡ ಕುಸಿದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

Leave A Reply