“ಅವರನ್ನು ಸೆರೆ ಹಿಡಿಯಲು ಬೆಳಗ್ಗೆವರೆಗೆ ಕಾದು ಕುಳಿತಿದ್ದೆವು”- ಉಗ್ರರನ್ನು ಗ್ರಾಮಸ್ಥರು ಬಂಧಿಸಿದ ಕಥೆ ನೋಡಿ
ಶ್ರೀ ನಗರ: ನಿನ್ನೆ ಎಲ್ ಇಟಿ ಯ ಇಬ್ಬರು ಭಯೋತ್ಪದಕರನ್ನು ಗ್ರಾಮಸ್ಥರು ಬಂಧಿಸಿ ಪೊಲೀಸರಿಗೆ ಒಪ್ಪಿಸಿದ್ದರು.
ಹಿಂದೆಯೆಲ್ಲ ಜಮ್ಮು ಹಾಗೂ ಕಾಶ್ಮೀರಗಳಲ್ಲಿ ಸೈನಿಕರಷ್ಟೇ ಭಯೋತ್ಪದಕರನ್ನು ಬಂಧಿಸುತ್ತಿದ್ದರು. ಆದರೆ ಈಗ ರಿಯಾಸಿ ಜಿಲ್ಲೆಯ ಗ್ರಾಮಸ್ಥರು ಭಯೋತ್ಪಾದಕರನ್ನು ಹಿಡಿದು ಕೊಟ್ಟಿದ್ದಾರೆ.
ತಮ್ಮಿಂದ ಇದು ಹೇಗೆ ಸಾಧ್ಯವಾಯಿತು? ಎಂಬ ಮಾಧ್ಯಮಗಳ ಪ್ರಶ್ನೆಗೆ ಗ್ರಾಮಸ್ಥನೊಬ್ಬನ ಉತ್ತರ, “ನನಗೆ ನನ್ನ ಅಣ್ಣನಿಂದ ಕರೆ ಬಂದಿತ್ತು. ಇಬ್ಬರು ಉಗ್ರರು ನನ್ನನ್ನು ಕೊಲ್ಲಲು ಬರುವುದಾಗಿ ತಿಳಿಸಿದ್ದಾರೆ. ತಕ್ಷಣ ಆತ ಹೇಳಿದ ಸ್ಥಳಕ್ಕೆ ನಾನು ನನ್ನ ಸೋದರ ಸಂಬಂಧಿಗಳೊಂದಿಗೆ ಅಲ್ಲಿಗೆ ಧಾವಿಸಿದೆ. ಅಲ್ಲಿ ಇಬ್ಬರು ಉಗ್ರರು ಮಲಗಿರುವುದು ಕಂಡಿತು. ನಾವೆಲ್ಲರೂ ಸೇರಿ ಅವರನ್ನು ಹಿಡಿಯಲು ಬೆಳಿಗ್ಗೆವರೆಗೂ ಕಾದು ಕುಳಿತ್ತಿದ್ದೇವು” ಎಂದು ವಿವರಿಸಿದ್ದಾರೆ.
ಅವರು ಮಲಗಿದ್ದ ವೇಳೆ ಅವರ ಶಸ್ತ್ರಸ್ರಗಳ ಬ್ಯಾಗ್ ತೆಗೆದೆವು. ಒಬ್ಬ ಎಚ್ಚರವಾಗಿ ಓಡಿದಾಗ ಅವನನ್ನು ಹಿಡಿದು ಕಟ್ಟಿ ಹಾಕಿ ಪೊಲೀಸ್ ಗೆ ಕರೆ ಮಾಡಿದೆವು. ಕೆಲವೇ ಹೊತ್ತಿನಲ್ಲಿ ಪೊಲೀಸ್ ಬಂದು ಅವರನ್ನು ಬಂಧಿಸಿದ್ದಾರೆ. ಎಂದು ಉಗ್ರರನ್ನು ಹಿಡಿದ ಸಾಮಾನ್ಯ ಪ್ರಜೆ ಹೇಳಿದ್ದಾರೆ.
ಉಗ್ರರ ಬಳಿ ಇದ್ದ 2 ಎಕೆ 47 ರೈಫಲಗಳು, 7 ಗ್ರಾನಟ್ ಗಳು ಮತ್ತು ಪಿಸ್ತುಲ್ ಗಳನ್ನು ವಶಪಡಿಸಿಕೊಂಡಿದೆ. ಇದೀಗ ಗ್ರಾಮಸ್ಥರ ಧೈರ್ಯವನ್ನು ಮೆಚ್ಚಿ ಜಮ್ಮುವಿನ ಪೊಲೀಸ್ ಮಹಾನಿರ್ದೇಶಕಾ (ಎಡಿಜಿಪಿ ) 5 ಲಕ್ಷ ರೂಪಾಯಿ ಬಹುಮಾನ ಘೋಷಣೆ ಮಾಡಿದ್ದಾರೆ.