2024 ರ ಮಕರ ಸಂಕ್ರಾಂತಿಗೆ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಕಾರ್ಯ ಪೂರ್ಣ: ಪೇಜಾವರ ಶ್ರೀಗಳು
ಮಂಗಳೂರು : ಅಯೋದ್ಯೆ ಯಲ್ಲಿ ರಾಮಮಂದಿರ ನಿರ್ಮಾಣ ಕಾರ್ಯ 2024 ರ ಮಕರಸಂಕ್ರಾಂತಿ ದಿನಾ ಪೂರ್ಣಗೊಳ್ಳಲು ಇದೆ ಎಂದು ರಾಮ ಮಂದಿರ ಟ್ರಸ್ಟ್ ನಲ್ಲಿ ಒಬ್ಬರಾದ ಪೇಜಾವರ ಮಠದೀಶ ಶ್ರೀ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದ್ದಾರೆ.
ಮಂಗಳೂರಿನ ಕದ್ರಿಯ ಮಂಜು ಪ್ರಸಾದದಲ್ಲಿ ಪೇಜಾವರ ಮಠದ ಪಟ್ಟದ ದೇವರ ತುಲಾಭರ ಮತ್ತು ಗುರುವಂದನಾ ಕಾರ್ಯ ಕ್ರಮದ ಬಳಿಕ ಮಾತನಾಡಿದ ಅವರು,ಅಯೋದ್ಯೆಯಲ್ಲಿ ರಾಮಮಂದಿರ ನಿರ್ಮಾಣ ಕಾರ್ಯ ಕ್ಷಿ ಪ್ರಗತಿಯಲ್ಲಿ ಇದೆ.
2024 ರ ಮಕರ ಸಂಕ್ರಾಂತಿಯ ಉತ್ತರಯಾಣದ ಪರ್ವಕಾಲದಲ್ಲಿ ಶ್ರೀ ರಾಮ ಪ್ರತಿಷ್ಠಾಪನೆ ಆಗಲಿದೆ ಎಂದಿದ್ದಾರೆ.
ಟ್ರಸ್ಟ್ ನ ಮೂಲ ಉದ್ದೇಶ ಮಂದಿರ ನಿರ್ಮಾಣ ಕಾರ್ಯ ಬಳಿಕ ರಾಮ ರಾಜ್ಯದ ಸದ್ದುಉದ್ದೇಶದಲ್ಲಿ ಗ್ರಾಮಗಳನ್ನು ದತ್ತು ಪಡೆಯುವುದು,ಸಮಾಜ ಮುಖಿ ಕಾರ್ಯಗಳು ನೆರವೇರಲಿದೆ ಎಂದಿದ್ದಾರೆ.