ಮಕ್ಕಳಿಗೆ ಶಾಲಾ ಬ್ಯಾಗ್ ಹೊರೆ ತಪ್ಪಿಸಲು ಶಿಕ್ಷಣ ಇಲಾಖೆಯಿಂದ ಮಹತ್ವದ ನಿರ್ಧಾರ!

ಬೆಂಗಳೂರು: ರಾಜ್ಯದಲ್ಲಿ ಶಾಲೆಗಳು ಆರಂಭವಾದ ಬೆನ್ನಲ್ಲೇ ಹೊಸ ಆತಂಕವೊಂದು ಶುರುವಾಗಿದ್ದು, ಶಾಲಾ ಬ್ಯಾಗ್ ಹೊರೆಯಿಂದ ಮಕ್ಕಳಿಗೆ ಪಾಶ್ಚರಲ್ ಡಿವಿಯೇಷನ್ ಸಮಸ್ಯೆ ಕಾಡುತ್ತಿದೆ. ಹೀಗಾಗಿ ಶಿಕ್ಷಣ ಇಲಾಖೆ ಹೊಸ ಚಿಂತನೆ ನಡೆಸಿದೆ.

 

ಶನಿವಾರ ಮಕ್ಕಳ ಬ್ಯಾಗ್ ಹೊರೆ ಇಳಿಸಲು ನಿರ್ಧರಿಸಿರುವ ಇಲಾಖೆ, ಯೋಗ, ವ್ಯಾಯಾಮ ಚಟುವಟಿಕೆ ಮಾಡಿಸಲು ಸಲಹೆ ನೀಡಿದೆ. ಸದ್ಯ ಕಲಿಕಾ ಚೇತರಿಕಾ ಕಾರ್ಯಕ್ರಮ ನಡೆಯುತ್ತಿದ್ದು, ಈ ಕಾರ್ಯಕ್ರಮದ ಬಳಿಕ ಬ್ಯಾಗ್ ಲೆಸ್ ಡೇ ಬಗ್ಗೆ ಚಿಂತನೆ ಮಾಡಲಾಗುವುದು ಎಂದು ಶಿಕ್ಷಣ ಸಚಿವ ಬಿಸಿ ನಾಗೇಶ್ ಅವರು ತಿಳಿಸಿದ್ದಾರೆ.

ಕೊರೊನಾ ಕಾರಣದಿಂದ ಮಕ್ಕಳು ಎರಡೂವರೆ ವರ್ಷಗಳ ಕಾಲ ಆನ್​ಲೈನ್ ಪಾಠ ಕೇಳಿದ್ದರು. ಈ ವೇಳೆ ಬ್ಯಾಗ್ ಹೊರುವ ಅನಿವಾರ್ಯತೆ ಇರಲಿಲ್ಲ. ಇದೀಗ ಪೂರ್ಣ ಪ್ರಮಾಣದ ಶಾಲೆಗಳು ಆರಂಭವಾಗುತ್ತಿದ್ದಂತೆ ಹೊಸ ಸಮಸ್ಯೆ ಹುಟ್ಟಿಕೊಂಡಿದೆ. ಏಕಾಏಕಿ ಭಾರದ ಬ್ಯಾಗ್ ಹಿಡಿದು ಹೋಗುವುದರಿಂದ ಮಕ್ಕಳ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದ್ದು, 10 ರಿಂದ 15 ಕೆಜಿ ಭಾರದ ಬ್ಯಾಗ್​ನಿಂದ ಮಕ್ಕಳ ದೇಹದ ಆಕಾರ ಬದಲಾಗುವ ಸಾಧ್ಯತೆಯಿದೆ.

ಹೀಗಾಗಿ, ಈ ಬಗ್ಗೆ ಪೋಷಕರು ಶಿಕ್ಷಣ ಇಲಾಖೆಯ ಗಮನಕ್ಕೆ ತರುತ್ತಿದ್ದಾರೆ. ಪೋಷಕರ ದೂರು ಹಿನ್ನೆಲೆ ಶಿಕ್ಷಣ ಇಲಾಖೆ ಶನಿವಾರ ಬ್ಯಾಗ್ ಲೆಸ್ ಡೇ ತರಲು ಶಾಲೆಗಳಿಗೆ ಸೂಚಿಸಲು ಮುಂದಾಗಿದೆ.

ಇಲಾಖೆಯ ಕೆಲ ಸೂಚನೆಗಳು:

  • 5 ದಿನ ಮಾತ್ರ ಪಠ್ಯ ಪ್ರಾಯೋಗಿಕ ಪುಸ್ತಕ ತರುವಂತೆ ಮಕ್ಕಳಿಗೆ ಸೂಚಿಸಿ.
  • ಅಗತ್ಯ ಹಾಗೂ ವೇಳಾಪಟ್ಟಿಗೆ ತಕ್ಕಂತೆ ಪಠ್ಯ ಹಾಗೂ ಬ್ಯಾಗ್ ಇರಲಿ.
  • ಶನಿವಾರ ಮಕ್ಕಳಿಗೆ ವ್ಯಾಯಾಮ, ದೈಹಿಕ ಚಟುವಟಿಕೆಗಳನ್ನು ಮಾಡಿಸಿ.

Leave A Reply

Your email address will not be published.