ರಾಜ್ಯದ ಎಲ್ಲಾ ‘ವಾಣಿಜ್ಯ ಅಂಗಡಿ-ಮುಂಗಟ್ಟು’ಗಳ ಮೇಲೆ ‘ಕನ್ನಡ ನಾಮಫಲಕ’ ಕಡ್ಡಾಯ!

ರಾಜ್ಯದಲ್ಲಿ ಕನ್ನಡ ಆಡಳಿತ ಭಾಷೆಯಾಗಿರುವಾಗ, ರಾಜ್ಯದ ಎಲ್ಲಾ ವಾಣಿಜ್ಯ ಅಂಗಡಿ-ಮುಂಗಟ್ಟುಗಳ ಮೇಲೆ ಕನ್ನಡ ನಾಮಫಲಕ ಕಡ್ಡಾಯಗೊಳಿಸಿ, ಸರ್ಕಾರ ಆದೇಶಿಸಿದೆ. ಒಂದು ವೇಳೆ ಈ ನಿಯಮ ತಪ್ಪಿದಲ್ಲಿ ಅಂಗಡಿಯ ಪರವಾನಗಿಯನ್ನೇ ರದ್ದುಗೊಳಿಸೋದಾಗಿ ಎಚ್ಚರಿಕೆ ಕೂಡಾ ನೀಡಿದೆ.

 

ಈ ಸಂಬಂಧ ಕಲಬುರ್ಗಿ ಪಾಲಿಕೆಯ ಆರೋಗ್ಯಾಧಿಕಾರಿ ಆದೇಶ ಹೊರಡಿಸಿದ್ದು, ಕಲಬುರ್ಗಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬೆಂಗಳೂರಿನಲ್ಲಿನಂತೆ ಕರ್ನಾಟಕದಲ್ಲಿ ಕನ್ನಡ ಭಾಷೆಯು ಆಡಳಿತ ಭಾಷೆಯಾಗಿದ್ದು, ರಾಜ್ಯದಲ್ಲಿನ ನಾಮಫಲಕಗಳಲ್ಲಿ ಕನ್ನಡ ಬಳಸುವುದು ಕಡ್ಡಾಯವಾಗಿರುತ್ತದೆ ಎಂದಿದ್ದಾರೆ.

ಈ ಹಿನ್ನಲೆಯಲ್ಲಿ ಕಲಬುರ್ಗಿ ಮಹಾನಗರ ಪಾಲಿಕೆ ವ್ಯಾಪ್ತಿಯ ಎಲ್ಲಾ ಖಾಸಗಿ ಉದ್ದಿಮೆ, ಮಳಿಗೆಗಳ ಉದ್ದಿಮೆದಾರರು ನಾಮಫಲಕಗಳನ್ನು ಪ್ರಧಾನವಾಗಿ ಕನ್ನಡದಲ್ಲಿ ಹಾಕುವುದು. ಅನ್ಯಭಾಷೆಯ ನಾಮಫಲಕಗಳಿಗಿಂತ ಕನ್ನಡ ಭಾಷೆಯನ್ನು ದಪ್ಪ ದೊಡ್ಡ ಅಕ್ಷರಗಳಲ್ಲಿ ಇರುವಂತೆ ಹಾಕುವುದು. ಈ ನಿಯಮ ತಪ್ಪಿದಲ್ಲಿ ಅಂತಹ ಉದ್ದಿಮೆ, ವಾಣಿಜ್ಯ ಅಂಗಡಿ ಮುಂಗಟ್ಟುಗಳ ಪರವಾನಗಿಯನ್ನು ರದ್ದು ಪಡಿಸಲಾಗುತ್ತದೆ ಎಂಬುದಾಗಿ ಎಚ್ಚರಿಕೆ ನೀಡಿದ್ದಾರೆ.

Leave A Reply

Your email address will not be published.